ETV Bharat / education-and-career

ಪದವಿ ಆದವರಿಗೆ ಇಂಡಿಯನ್​ ಬ್ಯಾಂಕ್​ನಲ್ಲಿದೆ ಉದ್ಯೋಗವಕಾಶ - Indian Bank Recruitment - INDIAN BANK RECRUITMENT

ಪದವಿಯನ್ನು ಪೂರ್ಣಗೊಳಿಸಿರುವವರಿಗೆ ಇಲ್ಲೊಂದು ಉದ್ಯೋಗಾವಕಾಶವಿದೆ. ಉದ್ಯೋಗಾಕಾಂಕ್ಷಿಗಳಿಗೆ ಕನ್ನಡ ಬರೆಯಲು, ಓದಲು, ಮಾತನಾಡಲು ತಿಳಿದಿರಬೇಕು.

Local Bank Officer recruitment for Indian Bank
ಉದ್ಯೋಗ ನೇಮಕಾತಿ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Aug 17, 2024, 3:17 PM IST

ಬೆಂಗಳೂರು: ಸರ್ಕಾರಿ ವಲಯದ ಪ್ರಮುಖ ಬ್ಯಾಂಕ್​ ಆಗಿರುವ ಇಂಡಿಯನ್​ ಬ್ಯಾಂಕ್​ನಲ್ಲಿ ಸ್ಥಳೀಯ ಬ್ಯಾಂಕ್​ ಅಧಿಕಾರಿ (ಲೋಕಲ್​ ಬ್ಯಾಂಕ್​ ಅಫೀಸರ್​) ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಸಲಾಗಿದೆ. ಕರ್ನಾಟಕ, ಸೇರಿದಂತೆ ಐದು ರಾಜ್ಯಗಳಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಒಟ್ಟು 300 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕರ್ನಾಟಕದಲ್ಲಿ 35 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿ ಅಧಿಕೃತ ಮಂಡಳಿ ಅಥವಾ ವಿಶ್ವವಿದ್ಯಾಲಯದ ಅಡಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿದರಬೇಕು. ಕರ್ನಾಟಕ ಹುದ್ದೆಗಳಿಗೆ ಅರ್ಜಿ ಬಯಸುವ ಅಭ್ಯರ್ಥಿಗಳು ಕನ್ನಡ ಬರೆಯಲು, ಓದಲು, ಮಾತನಾಡಲು ತಿಳಿದಿರಬೇಕು.

ವಿದ್ಯಾರ್ಹತೆ: ಅಭ್ಯರ್ಥಿ ಕನಿಷ್ಠ 20, ಗರಿಷ್ಠ 30 ವರ್ಷ ವಯೋಮಿತಿ ಇರಬೇಕು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ. ಜಾ, ಪ. ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 175ರೂ. ಹಾಗೂ ಇತರೆ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ಇದೆ.

ಈ ಹುದ್ದೆಗಳಿಗೆ ಆಗಸ್ಟ್​ 13 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಸೆಪ್ಟೆಂಬರ್​ 2 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianbank.in ಗೆ ಭೇಟಿ ನೀಡಬಹುದಾಗಿದೆ.

ಅಂಗನವಾಡಿ ನೇಮಕಾತಿ: ಬಳ್ಳಾರಿ ನಗರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 22 ಅಂಗನವಾಡಿ ಕಾರ್ಯಕರ್ತರು, 119 ಅಂಗನಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

Local Bank Officer recruitment for Indian Bank
ಅಧಿಸೂಚನೆ (ಇಂಡಿಯಾ ಬ್ಯಾಂಕ್​)

ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಪಿಯುಸಿ ಹಾಗು ಸಹಾಯಕರ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕನಿಷ್ಠ 19 ರಿಂದ 35 ವರ್ಷ. ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸುವ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ಅಧಿಸೂಚನೆಯನ್ನು ಪರಿಶೀಲಿಸಿ, ಆನ್​ಲೈನ್​ ಮೂಲಕ ಅರ್ಜಿ ಭರ್ತಿ ಮಾಡುವಂತೆ ತಿಳಿಸಲಾಗಿದೆ. ಯಾವುದೇ ಅರ್ಜಿ ಶುಲ್ಕ ಇಲ್ಲ. ಅಭ್ಯರ್ಥಿಗಳನ್ನು ಮೆರಿಟ್​ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗನವಾಡಿ ಕೇಂದ್ರದ ಆಯಾ ತಾಲೂಕು, ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರೇ ಆಗಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು http://karnemakaone.kar.nic.in/abcd/ ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಜಿಲ್ಲೆ ಆಯ್ಕೆ ಮಾಡಿ, ಬಳಿಕ ಯಾವ ಹುದ್ದೆ ಎಂಬುದನ್ನು ಆಯ್ಕೆ ಮಾಡಿ, ಅಗತ್ಯ ಪ್ರಮಾಣಪತ್ರ ಸೇರಿದಂತೆ ಮತ್ತಿತರ ವಿವರ ಸಲ್ಲಿಸಿ, ಅರ್ಜಿ ಸಲ್ಲಿಸಬೇಕಿದೆ.

ಇದನ್ನೂ ಓದಿ: ವೈದ್ಯಕೀಯ ಕೋರ್ಸ್​​ಗಳ ನೋಂದಣಿಗೆ ಕೆಇಎ ಅಂತಿಮ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.