ETV Bharat / education-and-career

DCET: ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆ ದಾಖಲಿಸಲು ಜುಲೈ 15ರವರೆಗೆ ಅವಕಾಶ - DCET 2024 - DCET 2024

ಎನ್​ಟಿಟಿಎಫ್ ತೇರ್ಗಡೆಗೊಂಡ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.

DCET
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ETV Bharat)
author img

By ETV Bharat Karnataka Team

Published : Jul 13, 2024, 7:21 AM IST

ಬೆಂಗಳೂರು: ಹೈಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಎನ್​ಟಿಟಿಎಫ್ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಫಲಿತಾಂಶ ನೀಡಿ, ಸೀಟು ಹಂಚಿಕೆಗೆ ಪರಿಗಣಿಸಬೇಕಿರುವ ಹಿನ್ನೆಲೆಯಲ್ಲಿ ಪಾಸ್​ ಆದ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ. ಜುಲೈ 13ರಂದು ಮಧ್ಯಾಹ್ನ 2 ಗಂಟೆಗೆ (ವರದಿ ಮಾಡಿಕೊಳ್ಳುವ ಸಮಯ: ಮಧ್ಯಾಹ್ನ 1.45 ಗಂಟೆ) ಅಥವಾ ಜುಲೈ 14ರಂದು ಬೆಳಗ್ಗೆ 11 ಗಂಟೆಗೆ ಎಲ್ಲ ಮೂಲ ದಾಖಲಾತಿಗಳು ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ದಾಖಲೆಗಳ ಪರಿಶೀಲನೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಆಯ್ಕೆಗಳನ್ನು (ಆಪ್ಷನ್ಸ್) ದಾಖಲಿಸಲು ಅವಕಾಶ ನೀಡಿ, ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವೃತ್ತಿನಿರತ ಅಭ್ಯರ್ಥಿಗಳಿಗೆ ಸೂಚನೆ: ಡಿಸಿಇಟಿ - 2024ಕ್ಕೆ ಅರ್ಜಿ ಸಲ್ಲಿಸಿರುವ ವೃತ್ತಿನಿರತ ಡಿಪ್ಲೊಮಾ ಅಭ್ಯರ್ಥಿಗಳು ನಿಗದಿತ ಒಂದು ವರ್ಷದ ಸೇವಾ ಪ್ರಮಾಣಪತ್ರ ಸಲ್ಲಿಸದೇ ಇರುವ ಕಾರಣಕ್ಕೆ ವೃತ್ತಿನಿರತ ಕೋಟಾದ ಎರಡನೇ ವರ್ಷದ/ಮೂರನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಅರ್ಹತೆ ಪಡೆದಿರುವುದಿಲ್ಲ. ಅಂತಹ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಿ ವೆರಿಫಿಕೇಶನ್ ಸ್ಲಿಪ್ ಪಡೆದು ರೆಗ್ಯುಲರ್ ಡಿಪ್ಲೊಮಾ (Regular Diploma) ಅಭ್ಯರ್ಥಿಗಳೆಂದು ಪರಿಗಣಿಸಲು ಕೋರಿರುತ್ತಾರೆ. ಅಂತಹ ಅಭ್ಯರ್ಥಿಗಳಿಗೆ ರೆಗ್ಯುಲರ್ ರ‍್ಯಾಂಕ್ ನೀಡಲಾಗುವುದು ಮತ್ತು ಆಯ್ಕೆಗಳನ್ನು (ಆಪ್ಷನ್ಸ್) ದಾಖಲಿಸಲು ಅವಕಾಶ ನೀಡಿ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

ಡಿಸಿಇಟಿ-2024ಕ್ಕೆ ಎರಡನೇ ವರ್ಷದ/ಮೂರನೇ ಸೆಮಿಸ್ಟರ್ ಎಂಜಿನಿಯರಿಂಗ್/ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಾತಿಗೆ ಅರ್ಹತೆ ಪಡೆಯಲು ದಾಖಲೆಗಳ ಪರಿಶೀಲನೆಗೆ ಹಾಜರಾಗದಿರುವ ಅಭ್ಯರ್ಥಿಗಳೂ ಕೂಡ ಜುಲೈ 13ರಂದು ಮಧ್ಯಾಹ್ನ 2 ಗಂಟೆ ಅಥವಾ ಜುಲೈ 14ರಂದು ಬೆಳಗ್ಗೆ 11 ಗಂಟೆಗೆ ಎಲ್ಲಾ ಮೂಲ ದಾಖಲಾತಿಗಳು ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಕೆಇಎ ಕಚೇರಿಗೆ ಬರುವಂತೆ ಸೂಚಿಸಲಾಗಿದೆ. ಸಿಪ್ಯಾಟ್ ಅಭ್ಯರ್ಥಿಗಳಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ದಾಖಲಾತಿ ಪರಿಶೀಲನೆಗೆ ಪ್ರಾಧಿಕಾರಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ.

ಮೊದಲ ಸುತ್ತಿನ ಸೀಟು ಹಂಚಿಕೆ, ಆಯ್ಕೆ ದಾಖಲಿಸಲು ದಿನಾಂಕ ವಿಸ್ತರಣೆ: ಈ ಮೇಲೆ ತಿಳಿಸಿದ ಕಾರಣಗಳು ಹಾಗೂ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಟ್ಟ ಸೀಟುಗಳನ್ನು ಸರ್ಕಾರವು ಸೀಟ್ ಮ್ಯಾಟ್ರಿಕ್ಸ್​ಗೆ ಸೇರ್ಪಡೆ ಮಾಡುವುದರಿಂದ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆಗಳನ್ನು ದಾಖಲಿಸಲು ಜುಲೈ 15ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಸೀಟು ಹಂಚಿಕೆಯ ನಂತರದ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ಸದ್ಯದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.