ETV Bharat / education-and-career

6128 ಕ್ಲರಿಕಲ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಬಿಪಿಎಸ್​​ - IBPS Notification for clerk

author img

By ETV Bharat Karnataka Team

Published : Jul 1, 2024, 1:31 PM IST

ದೇಶದ ವಿವಿಧ ರಾಜ್ಯಗಳ ಖಾಲಿ ಇರುವ ಸ್ಥಾನಗಳಿಗೆ ಅನುಸಾರವಾಗಿ ಈ ಹುದ್ದೆ ಭರ್ತಿ ನಡೆಯಲಿದ್ದು, ಕರ್ನಾಟಕದಲ್ಲಿ 457 ಪೋಸ್ಟ್​​ ಅನ್ನು ನಿಗದಿಸಲಾಗಿದೆ.

Institute of Banking Personnel Selection invited application for 6128 clerk post
ಬ್ಯಾಂಕಿಂಗ್​ ಹುದ್ದೆ (ಈಟಿವಿ ಭಾರತ್​​)

ಬೆಂಗಳೂರು: ಇನ್ಸುಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸನಲ್​ ಸೆಲೆಕ್ಷನ್​ (IBPS)ನಿಂದ 6128 ಕ್ಲರಿಕಲ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕ್​ ಆಫ್​ ಬರೋಡಾ, ಕೆನರಾ ಬ್ಯಾಂಕ್​, ಯುಕೋ ಬ್ಯಾಂಕ್​, ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​, ಬ್ಯಾಂಕ್​ ಆಫ್​ ಇಂಡಿ, ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ, ಪಿಎನ್​ಬಿ, ಯುಬಿಐ, ಬ್ಯಾಂಕ್​ ಆಫ್​ ಮಹಾರಾಷ್ಟ್ರ, ಇಂಡಿಯನ್​ ಬ್ಯಾಂಕ್​, ಪಂಜಾಬ್​ ಮತ್ತು ಸಿಂಧ್​​ ಬ್ಯಾಂಕ್​ಗಳಲ್ಲಿ ಈ ನೇಮಕಾತಿ ನಡೆಯಲಿದೆ.

Institute of Banking Personnel Selection invited application for 6128 clerk post
ಅಧಿಸೂಚನೆ (ಐಬಿಪಿಎಸ್​)

ದೇಶದ ವಿವಿಧ ರಾಜ್ಯಗಳ ಖಾಲಿ ಇರುವ ಸ್ಥಾನಗಳಿಗೆ ಅನುಸಾರವಾಗಿ ಈ ಹುದ್ದೆ ಭರ್ತಿ ನಡೆಯಲಿದ್ದು, ಕರ್ನಾಟಕದಲ್ಲಿ 457 ಪೋಸ್ಟ್​​ ಅನ್ನು ನಿಗದಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ ಪೂರ್ಣಗೊಳಿಸಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ, ವಿಕಲಚೇತನ, ಇಎಸ್​ಎಂ ಅಭ್ಯರ್ಥಿಗಳಿಗೆ 175 ರೂ, ಇತರೆ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಪ್ರೀಲಿಮ್ಸ್​ ಮತ್ತು ಮುಖ್ಯ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ. ಬಳಿಕ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಇರಲಿದೆ.

ಈ ಹುದ್ದೆಗಳಿಗೆ ಜುಲೈ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನ ಜುಲೈ 21 ಆಗಿದೆ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ibps.in ಇಲ್ಲಿಗೆ ಭೇಟಿ ನೀಡಿ.

ಐಬಿಪಿಎಸ್​ ಆರ್​ಆರ್​ಬಿ ಹುದ್ದೆ: ಕರ್ನಾಟಕ ಗ್ರಾಮೀಣ ಬ್ಯಾಂಕ್​ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಬ್ಯಾಂಕಿಂಗ್​ ವಲಯದಲ್ಲಿನ (RRB) 9995 ಹುದ್ದೆಗಳಿಗೆ ಕೂಡ ಐಬಿಪಿಎಸ್​ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 27 ಆಗಿದೆ.

ನಿಗದಿತ ಹುದ್ದೆಗಳಲ್ಲಿ ಕರ್ನಾಟಕ ಗ್ರಾಮೀಣ​ ಬ್ಯಾಂಕ್​ನಲ್ಲಿ 386, ಕರ್ನಾಟಕ ವಿಕಾಸ್​ ಗ್ರಾಮೀಣ ಬ್ಯಾಂಕ್​ 200 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಪದವಿ ಓದಿರುವ ಗರಿಷ್ಠ 40 ಮೀರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 175 ರೂ. ಇತರ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಪ್ರಿಲಿಮ್ಸ್​ ಮತ್ತು ಮೇನ್ಸ್​ ಪರೀಕ್ಷೆ ಮೂಲಕ ಆಯ್ಕೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ibps.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: SSC ನೇಮಕಾತಿ: 8,326 ಹವಾಲ್ದಾರ್​, ಎಂಟಿಎಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.