ETV Bharat / education-and-career

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಆಗಸ್ಟ್​ 9ರಂದು ಹುಬ್ಬಳ್ಳಿಯಲ್ಲಿ ನೇರ ಸಂದರ್ಶನ - Job Call in Hubli - JOB CALL IN HUBLI

ಹುಬ್ಬಳ್ಳಿಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದ್ದು, ಆಗಸ್ಟ್​ 9ರಂದು ಹುಬ್ಬಳ್ಳಿ ನವನಗರದಲ್ಲಿ ನೇರ ಸಂದರ್ಶನ ನಡೆಯಲಿದೆ.

GOLDEN OPPORTUNITY  JOB ASPIRANTS  DIRECT INTERVIEW  DHARWAD
ಆಗಸ್ಟ್​ 9ರಂದು ಹುಬ್ಬಳ್ಳಿಯಲ್ಲಿ ನೇರ ಸಂದರ್ಶನ (ETV Bharat)
author img

By ETV Bharat Karnataka Team

Published : Aug 7, 2024, 1:51 PM IST

ಹುಬ್ಬಳ್ಳಿ: ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಗಸ್ಟ್ 9ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಸಂದರ್ಶನದಲ್ಲಿ ಖಾಸಗಿ ವಲಯದ ಉದ್ಯೋಗದಾತರು ಭಾಗವಹಿಸಲಿದ್ದು, ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು, 18 ರಿಂದ 35 ವಯೋಮಿತಿ ಹೊಂದಿದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು ಕಡ್ಡಾಯವಾಗಿ https://forms.gle/qdtkEhLjQsdC1GD68 ವೆಬ್ ಸೈಟ್ ಮುಖಾಂತರ ನೋಂದಣಿ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾಗಬೇಕು.

ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ ಕಾರ್ಡ್​​, ಬಯೋಡೇಟಾ (ರೆಸ್ಯೂಮೆ) ಗಳ ಹೆಚ್ಚಿನ ಪ್ರತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನ ನಡೆಯುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕುವೆಂಪು ರಸ್ತೆ, ನವನಗರ, ಹುಬ್ಬಳ್ಳಿ ಕಚೇರಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0836-2225288, 9535360259, 8453208555 ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ - Benglauru City University

ETV Bharat Logo

Copyright © 2025 Ushodaya Enterprises Pvt. Ltd., All Rights Reserved.