ETV Bharat / education-and-career

ಬ್ಯಾಂಕ್​ ಆಫ್​ ಇಂಡಿಯಾದಲ್ಲಿ 143 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ: ಪದವೀಧರರಿಗೆ ಸುವರ್ಣಾವಕಾಶ - NCB Recruitment for Driver post - NCB RECRUITMENT FOR DRIVER POST

ಬ್ಯಾಂಕ್​ ಆಫ್​ ಇಂಡಿಯಾ 143 ಆಫೀಸರ್​ ಹುದ್ದೆ ಮತ್ತು ಎನ್​ಸಿಬಿಯ 31 ಸಿಬ್ಬಂದಿ ಕಾರು ಚಾಲಕರ ಹುದ್ದೆ ಭರ್ತಿಯ ವಿವರ ಇಲ್ಲಿದೆ.

boi-143-officer-post-and-ncb-driver-post-recruitment

author img

By ETV Bharat Karnataka Team

Published : Mar 28, 2024, 5:43 PM IST

ಬೆಂಗಳೂರು: ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಲಾ, ಆಫೀಸರ್​ , ಸೀನಿಯರ್​ ಮ್ಯಾನೇಜರ್​​, ಚೀಫ್​ ಮ್ಯಾನೇಜರ್​ ಸೇರಿದಂತೆ ಒಟ್ಟು 143 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಹುದ್ದೆಗೆ ಅನುಸಾರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ: ಕನಿಷ್ಠ 21, ಗರಿಷ್ಠ 37 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗಳಿಗೆ 175 ರೂ ಮತ್ತು ಸಾಮಾನ್ಯ ಹಾಗೂ ಇತರ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 10 ಆಗಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ bankofindia.co.in ಇಲ್ಲಿ ಭೇಟಿ ನೀಡಬಹುದಾಗಿದೆ.

ಎನ್​ಸಿಬಿಯಲ್ಲಿ 31 ಹುದ್ದೆ ನೇಮಕಾತಿ: ಕೇಂದ್ರ ಗೃಹ ಸಚಿವಾಲಯದದ ನಾರ್ಕೋಟಿಕ್ಸ್​​​ ಕಂಟ್ರೋಲ್​ ಬ್ಯೂರೋದಲ್ಲಿ ಡ್ರೈವರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 31 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ಕಚೇರಿ ಸೇರಿದಂತೆ ದೇಶದ ವಿವಿಧ ನಗರದ ಕಚೇರಿಗಳಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ.

ಹುದ್ದೆ ವಿವರ: ಎನ್​ಸಿಬಿಯಲ್ಲಿ ಖಾಲಿ ಇರುವ ಒಟ್ಟು 31 ಸಿಬ್ಬಂದಿ ಕಾರು ಚಾಲಕರ ಹುದ್ದೆ ಭರ್ತಿ

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 56 ವರ್ಷ ಆಗಿದೆ.

ಆಯ್ಕೆ: ಅಭ್ಯರ್ಥಿಗಳ ಚಾಲನಾ ಸಾಮರ್ಥ್ಯ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು

ವೇತನ: 5,200 -20,200 ರೂ ಮಾಸಿಕ

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಜತೆಗೆ ನೀಡಲಾಗಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು

ಡೆಪ್ಯೂಟಿ ಡೈರೆಕ್ಟರ್​ (ಅಡ್ಮಿನಿಸ್ಟ್ರೇಷನ್​), ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ, 2ನೇ ಮಹಡಿ, ಆಗಸ್ಟ್​​ ಕ್ರಾಂತಿ ಭವನ್​, ಬಿಕಜಿ ಕಾಮ ಪ್ಲೇಸ್​​, ನವದೆಹಲಿ- 110066

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 12 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು narcoticsindia.nic.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಆಗ್ನೇಯ ಮಧ್ಯ ರೈಲ್ವೆಯಲ್ಲಿ 733 ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.