ETV Bharat / business

ರೆಪೋ ದರದಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಇಲ್ಲ: ಜಿಡಿಪಿ ಶೇ 7 ರಷ್ಟಿರಲಿದೆ ಎಂದ ಆರ್​​ಬಿಐ - Repo Rate unchanged - REPO RATE UNCHANGED

ಈ ಬಾರಿಯೂ ಭಾರತೀಯ ಕೇಂದ್ರ ಬ್ಯಾಂಕ್​ ಆರ್​ಬಿಐ ರೆಪೋ ರೇಟ್​ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

The Reserve Bank decided to keep the Policy Repo Rate unchanged
ರಪೋ ರೇಟ್​​ನಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಇಲ್ಲ: ಗೃಹಸಾಲದಾರರ ಬಡ್ಡಿಯಲ್ಲಿ ಆಗಲ್ಲ ಚೇಂಜ್​​
author img

By ETV Bharat Karnataka Team

Published : Apr 5, 2024, 10:19 AM IST

Updated : Apr 5, 2024, 11:24 AM IST

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು 2024-2025 ರ ಹಣಕಾಸು ವರ್ಷದ ಮೊದಲ ಹಣಕಾಸು ನೀತಿ ಸಮಿತಿ (MPC) ಸಭೆಯ ಫಲಿತಾಂಶವನ್ನು ಪ್ರಕಟಿಸಿದರು. ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಈ ಮೊದಲಿನಂತೆ ಶೇ 6.5ರಲ್ಲೇ ಮುಂದುವರೆಯಲಿದೆ ಎಂದು ಆರ್​ಬಿಐ ಗವರ್ನರ್​​​​ ಹೇಳಿದ್ದಾರೆ.

ಭಾರತದ ಕೇಂದ್ರೀಯ ಬ್ಯಾಂಕಿಂಗ್ ಪ್ರಾಧಿಕಾರವು ಕಳೆದ ಆರು ಅವಧಿಗಳಿಂದ ಸತತವಾಗಿ MPC ಸಭೆಗಳಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಇದೀಗ 7ನೇ ಬಾರಿಗೂ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ತೀರ್ಮಾನ ಮಾಡಲಾಗಿದೆ.

’’ಭಾರತವು ತನ್ನ ಹಣಕಾಸಿನ ಬಲವರ್ಧನೆ ಮತ್ತು ವೇಗದ ಜಿಡಿಪಿ ಬೆಳವಣಿಗೆಯನ್ನು ಮುಂದುವರೆಸಿಕೊಂಡು ಸಾಗುತ್ತಿದೆ. ದೇಶೀಯ ಆರ್ಥಿಕ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಸ್ಥಿರ ಹೂಡಿಕೆ ಮತ್ತು ಸುಧಾರಣೆಯ ಜಾಗತಿಕ ಬೆಂಬಲದಿಂದಾಗಿ ಮುಂದೆ ಸಾಗುತ್ತಿದೆ. 2023-24ಕ್ಕೆ 7.6 ರಷ್ಟು ನೈಜ GDP ಬೆಳವಣಿಗೆ ಸಾಧಿಸಲಾಗಿದೆ. ಸತತ ಮೂರು ವರ್ಷಗಳಿಂದ ಭಾರತದ ಆರ್ಥಿಕತೆಯು ಶೇ 7 ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ ಎಂದು ಆರ್​​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಹೇಳಿದ್ದಾರೆ

ಆರ್‌ಬಿಐ 2024 - 25ರ ಆರ್ಥಿಕ ವರ್ಷದ ಬೆಳವಣಿಗೆ ಶೇಕಡಾ 7ರಷ್ಟಿರಲಿದೆ ಎಂದು ಅಂದಾಜು ಮಾಡಿದೆ. ಶೇ 4.5 ರಷ್ಟು ಹಣದುಬ್ಬರವನ್ನು ನಿರೀಕ್ಷಿಸಲಾಗಿದೆ. ಗ್ರಾಮೀಣ ಬೇಡಿಕೆಯ ಬಲವರ್ಧನೆ, ಹಣದುಬ್ಬರವನ್ನು ಮಿತಗೊಳಿಸುವುದು ಮತ್ತು ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ನಿರಂತರ ಹೂಡಿಕೆಯನ್ನು ಹೆಚ್ಚಿಸುವುದರಿಂದ ಖಾಸಗಿ ಬಂಡವಾಳ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ವ್ಯಾಪಾರ ಕೊರತೆ: ಫೆಬ್ರವರಿ ತಿಂಗಳಲ್ಲಿ ವ್ಯಾಪಾರ ಕೊರತೆ ಹೆಚ್ಚಿದ್ದು ಆಮದು ಹೆಚ್ಚಾಗಿದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ. ಜಾಗತಿಕ ಆರ್ಥಿಕತೆಯು ಸ್ಥಿರ ದೃಷ್ಟಿಕೋನದೊಂದಿಗೆ ಚೇತರಿಕೆ ಹಾದಿ ಹಿಡಿದಿದೆ. ಇದು ಆರ್ಥಿಕ ಚೇತರಿಕೆ ಕಾರಣವಾಗಬಹುದು. ಜಾಗತಿಕ ವ್ಯಾಪಾರವು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

ಸಿಪಿಐ ಹಣದುಬ್ಬರ: ಗ್ರಾಹಕ ಬೆಲೆ ಸೂಚ್ಯಂಕ ಸಿಪಿಐ ಹಣದುಬ್ಬರವು ಶೇಕಡಾ 5.1 ಕ್ಕೆ ಇಳಿಕೆ ಕಂಡಿದ್ದು, RBI ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ ಮತ್ತು ಬ್ಯಾಂಕ್ ದರವನ್ನು ಶೇಕಡಾ 6.75 ನಲ್ಲಿ ಸ್ಥಿರವಾಗಿರಿಸಲಾಗಿದೆ. ಇನ್ನು ಆರ್‌ಬಿಐ ಸ್ಥಾಯಿ ಠೇವಣಿ ಸೌಲಭ್ಯ ದರವನ್ನು ಶೇಕಡಾ 6.25ರಲ್ಲೇ ಇರಿಸಲಾಗಿದೆ ಎಂದು ಶಕ್ತಿಕಾಂತ್​ ದಾಸ್​ ವಿವರಿಸಿದ್ದಾರೆ.

ಇದನ್ನು ಓದಿ:ಬ್ಯಾಂಕ್​, ಕೊರಿಯರ್​ ಕಂಪನಿಗಳ ನೆಪದಲ್ಲಿ ಸೈಬರ್​ ಕಳ್ಳರು ಒಟಿಪಿ ಕೇಳಿದರೆ ಏನ್​​​​​​​​​​​​​​​ ಮಾಡಬೇಕು?: ಇಲ್ಲಿದೆ ಫುಲ್​ ಡಿಟೇಲ್ಸ್​​ - CAREFUL ABOUT OTP

Last Updated : Apr 5, 2024, 11:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.