ನವದೆಹಲಿ: ಟಾಟಾ ಸ್ಟೀಲ್ ಇಂಡಿಯಾ 2024ರ ಹಣಕಾಸು ವರ್ಷದಲ್ಲಿ 19.90 ಮಿಲಿಯನ್ ಟನ್ ಉಕ್ಕು ಉತ್ಪಾದಿಸಿ ಮಾರಾಟ ಮಾಡಿದ್ದು, ಶೇ 6ರಷ್ಟು ಬೆಳವಣಿಗೆ ಸಾಧಿಸಿದೆ. ರಿಟೇಲ್, ಆಟೋಮೋಟಿವ್ ಮತ್ತು ರೈಲ್ವೆ ವಿಭಾಗಗಳಲ್ಲಿ ಉಕ್ಕಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಟಾಟಾ ಸ್ಟೀಲ್ ತನ್ನ ಉತ್ಪಾದನೆಯನ್ನು ಕೂಡ ಹೆಚ್ಚಿಸಿದೆ. ಭಾರತದಲ್ಲಿ, ಕಂಪನಿಯು ಹಿಂದಿನ 2022-23ರ ಹಣಕಾಸು ವರ್ಷದಲ್ಲಿ 18.85 ಮಿಲಿಯನ್ ಟನ್ ಉಕ್ಕು ಉತ್ಪಾದಿಸಿತ್ತು ಎಂದು ಟಾಟಾ ಸ್ಟೀಲ್ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಆಟೋಮೋಟಿವ್ ಮತ್ತು ವಿಶೇಷ ಉತ್ಪನ್ನಗಳ ವಿಭಾಗದಲ್ಲಿನ ಪೂರೈಕೆಯು ಹಣಕಾಸು ವರ್ಷ 24 ರಲ್ಲಿ ಶೇಕಡಾ 8 ರಷ್ಟು ಏರಿಕೆಯಾಗಿ 2.9 ಮಿಲಿಯನ್ ಟನ್ಗೆ ತಲುಪಿದೆ. ಇದು ಹಿಂದಿನ ಹಣಕಾಸು ವರ್ಷ 2023 ರ ಹಿಂದಿನ ದಾಖಲೆಯನ್ನು ಮೀರಿದೆ. ಬ್ರಾಂಡೆಡ್ ಉತ್ಪನ್ನಗಳು ಮತ್ತು ಚಿಲ್ಲರೆ ವಿಭಾಗದ ಪೂರೈಕೆಗಳು ಹಣಕಾಸು ವರ್ಷ 2024 ರಲ್ಲಿ ಶೇಕಡಾ 11 ರಷ್ಟು ಏರಿಕೆಯಾಗಿ 6.5 ಮೆಟ್ರಿಕ್ ಟನ್ಗೆ ತಲುಪಿದೆ. ಕೈಗಾರಿಕಾ ಉತ್ಪನ್ನಗಳು ಮತ್ತು ಯೋಜನೆಗಳ ವಿಭಾಗದ ಪೂರೈಕೆಗಳು ಶೇಕಡಾ 6 ರಷ್ಟು ಏರಿಕೆಯಾಗಿ 7.7 ಮೆಟ್ರಿಕ್ ಟನ್ಗೆ ತಲುಪಿದೆ.
ಉಪ-ವಿಭಾಗಗಳಲ್ಲಿ, ಎಂಜಿನಿಯರಿಂಗ್ ಪೂರ್ವ-ಎಂಜಿನಿಯರಿಂಗ್ ಕಟ್ಟಡಗಳು ಮತ್ತು ರೈಲ್ವೆ ಉದ್ಯಮಗಳ ಬೇಡಿಕೆಯಿಂದ ಅತ್ಯುತ್ತಮ ವಾರ್ಷಿಕ ಮಾರಾಟ ದಾಖಲಾಗಿದೆ ಎಂದು ಕಂಪನಿ ತಿಳಿಸಿದೆ.
ವೈಯಕ್ತಿಕ ಮನೆ ನಿರ್ಮಾಣ ಮಾಡಿಕೊಡುವ ಇ-ಕಾಮರ್ಸ್ ವೇದಿಕೆಯಾದ ಟಾಟಾ ಸ್ಟೀಲ್ ಆಶಿಯಾನದ (Tata Steel Aashiyana) ಆದಾಯವು 2024 ರ ಹಣಕಾಸು ವರ್ಷದಲ್ಲಿ 2,240 ಕೋಟಿ ರೂ.ಗಳಿಗೆ ತಲುಪಿದ್ದು, ಇದು ಶೇ 30ರಷ್ಟು ಹೆಚ್ಚಾಗಿದೆ. 3 ಮತ್ತು 4ನೇ ತ್ರೈಮಾಸಿಕಗಳಲ್ಲಿನ ಅತ್ಯಧಿಕ ಮಾರಾಟದಿಂದ ಇದು ಸಾಧ್ಯವಾಗಿದೆ.
ಭಾರತದಲ್ಲಿ ಕಂಪನಿಯು 2023-24ರಲ್ಲಿ ದಾಖಲೆಯ 20.8 ಮೆಟ್ರಿಕ್ ಟನ್ ಕಚ್ಚಾ ಉಕ್ಕನ್ನು ಉತ್ಪಾದಿಸಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಉತ್ಪಾದನೆಯಾದ 19.88 ಮೆಟ್ರಿಕ್ ಟನ್ಗಿಂತ ಶೇಕಡಾ 4 ರಷ್ಟು ಹೆಚ್ಚಾಗಿದೆ. 2023ರ ನಾಲ್ಕನೇ ತ್ರೈಮಾಸಿಕದಲ್ಲಿ 5.15 ಮೆಟ್ರಿಕ್ ಟನ್ ಇದ್ದ ಕಚ್ಚಾ ಉಕ್ಕು ಉತ್ಪಾದನೆ 2024ರ ನಾಲ್ಕನೇ ತ್ರೈಮಾಸಿಕದಲ್ಲಿ 5.38 ಮೆಟ್ರಿಕ್ ಟನ್ಗೆ ಏರಿಕೆಯಾಗಿದೆ. ಟಾಟಾ ಸ್ಟೀಲ್ ನೆದರ್ಲ್ಯಾಂಡ್ಸ್ 2024 ರ ಹಣಕಾಸು ವರ್ಷದಲ್ಲಿ 4.80 ಮೆಟ್ರಿಕ್ ಟನ್ ಕಚ್ಚಾ ಉಕ್ಕು ಉತ್ಪಾದಿಸಿದ್ದು, 5.30 ಮೆಟ್ರಿಕ್ ಟನ್ ಉಕ್ಕು ಮಾರಾಟ ಮಾಡಿದೆ.
ಇದನ್ನೂ ಓದಿ : ಕಳೆದ ವಾರ 172 ದಶಲಕ್ಷ ಡಾಲರ್ ಫಂಡಿಂಗ್ ಸಂಗ್ರಹಿಸಿದ ಭಾರತೀಯ ಸ್ಟಾರ್ಟ್ಅಪ್ಗಳು - STARTUPS