ನ್ಯೂಯಾರ್ಕ್: ಭಾರತದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಏಣಿಕೆ ಆರಂಭವಾಗಿದ್ದು, ಗೆಲುವಿನ ಲೆಕ್ಕಾಚಾರಗಳು ಸಾಗಿದೆ. ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲೂ ಸಂಚಲನ ಮೂಡಿಸಿದೆ. ಈ ನಡುವೆ ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಂತೆ ನಿರೀಕ್ಷಿತ ಫಲಿತಾಂಶ ಬರದೇ ಇರುವುದರಿಂದ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಆದರೆ ಅತ್ತ, ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರು ಬೆಲೆ ಏರಿಕೆ ಕಂಡಿದೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಾರತದ ಕಂಪನಿಗಳು ಹೂಡಿಕೆ ಮಾಡಿದ್ದು, ಅವುಗಳು ಏರಿಕೆ ಕಂಡಿವೆ.
ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಅಮೆರಿಕನ್ ಡೆಪಾಸಿಟೊರಿ ರೆಸಿಪ್ಟ್ಸ್ (ಎಡಿಆರ್)ನಲ್ಲಿ ಭಾರತದ 11 ಕಂಪನಿಗಳ ಷೇರಿನಲ್ಲಿ 8ರಲ್ಲಿ ಏರಿಕೆ ಕಂಡಿದೆ. ಸೋಲಾರ್ ಎನರ್ಜಿ ಕಂಪನಿಯಾದ ಅಜುರೆ ಪವರ್ ಗ್ಲೋಬಲ್, ಓವರ್ ದಿ ಕೌಂಟರ್ ವಹಿವಾಟಿನಲ್ಲಿ ಶೇ 8 ರಷ್ಟು ಏರಿಕೆ ಕಂಡಿದೆ. ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೆಂಜ್ನ ಪಟ್ಟಿಯಲ್ಲಿರುವ ಎರಡು ಬ್ಯಾಂಕ್ಗಳಲ್ಲಿ ಒಂದಾಗಿರುವ ಐಸಿಐಸಿಐ ಷೇರು ಶೇ 5.89ರಷ್ಟು ಮತ್ತು ಎಚ್ಡಿಎಫ್ಸಿಯ ಷೇರು ಶೇ 5.77ರಷ್ಟು ಏರಿಕೆ ಕಂಡಿದೆ.
ಎನ್ಎಎಸ್ಡಿಎಕ್ಯೂ ವಹಿವಾಟಿನಲ್ಲಿ ಟ್ರಾವೆಲ್ ಕಂಪನಿಗಳಾದ ಮೇಕ್ ಮೈ ಟ್ರಿಪ್ 3.2ರಷ್ಟು ಮತ್ತು ಯಾತ್ರಾ 2.34ರಷ್ಟು ಏರಿಕೆ ಕಂಡಿದೆ. ವಿಪ್ರೊ, ದಿ ಟೆಕ್ನಾಲಾಜಿ ಅಂಡ್ ಕನ್ಸಲ್ಟೆನ್ಸಿ ಮಲ್ಟಿನ್ಯಾಷನಲ್ ಷೇರು 2.33ರಷ್ಟು ಏರಿಕೆ ಕಂಡಿದೆ. ಇದರ ಜೊತೆಗೆ ಡಾ ರೆಡ್ಡಿಸ್ ಲ್ಯಾಬ್ ವಹಿವಾಟಿನಲ್ಲಿ 1.12ರಷ್ಟು ಏರಿಕೆ ಕಂಡರೆ, ಇನ್ಫೋಸಿಸ್ 0.6ರಷ್ಟು ಏರಿಕೆ ಕಂಡಿದೆ.
ಭಾರತದಲ್ಲಿನ ಷೇರು ವಹಿವಾಟಿನ ಉತ್ಸಾಹಕತೆಯ ಪ್ರಭಾವವೂ ನ್ಯೂಯಾರ್ಕ್ ಷೇರುಗಳ ಮೇಲೆ ಬೀರಿದೆ. ಭಾರತದಲ್ಲಿ ಕೂಡ ಸೆನ್ಸೆಕ್ಸ್ 3.39 ನಿಷ್ಟಿ 50 ಸೂಚ್ಯಂಕ ಕಂಡಿದೆ.
ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೆಂಜ್ನಲ್ಲಿ ಅಮೆರಿಕದ 10 ಗುಂಪಿನ ವಿರುದ್ಧ ಡಾಲರ್ ದುರ್ಬಲಗೊಂಡಿದೆ. ಗ್ರೂಪ್ ಏಷ್ಯಾದ ಕರೆನ್ಸಿಗಳಾದ ಮಲೇಷಿಯಾದ ರಿಂಗಿಟ್ ಮತ್ತು ದಕ್ಷಿಣ ಕೊರಿಯನ್ ವನ್ ಷೇರು ಮಾರುಕಟ್ಟೆಯಲ್ಲಿ ಬಲಗೊಂಡಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಬಾಂಡ್ಗಳು ಏರಿಕೆ ಕಂಡಿವೆ. ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗೊಳಿಸಿದ ವಾರದ ಬಳಿಕ ಲಾಭದ ಹಾದಿಯಲ್ಲಿ ಸಾಗಿವೆ. ಆದರೆ, ಏಷ್ಯಾದ ಷೇರುಗಳು ಇಳಿಕೆ ಕಂಡಿದೆ. ನ್ಯೂಯಾರ್ಕ್ನ ಷೇರು ಮಾರುಕಟ್ಟೆಯಲ್ಲಿ ನಿರ್ಬಂಧಿತ ಹೂಡಿಕೆ ಮತ್ತು ಎರವಲು ವೆಚ್ಚಗಳು ತೋಳಲಾಟ ನಡೆಸುತ್ತಿದೆ ಎಂದು ಅಮೆರಿಕದ ಷೇರು ಮಾರುಕಟ್ಟೆ ದತ್ತಾಂಶ ತೋರಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಷೇರು ಮಾರುಕಟ್ಟೆ ಸಾರ್ವಕಾಲಿಕ ಎತ್ತರಕ್ಕೆ: ಸೆನ್ಸೆಕ್ಸ್ 2507 & ನಿಫ್ಟಿ 733 ಅಂಕ ಏರಿಕೆ