ETV Bharat / business

UTSನಲ್ಲಿ ರೈಲು ಟಿಕೆಟ್ ಬುಕಿಂಗ್ ಇನ್ನು ಸುಲಭ! - UTS Mobile App

ರೈಲ್ವೆ ಜನರಲ್​ ಟಿಕೆಟ್ ಬುಕಿಂಗ್‌ಗೆ UTS ಮೊಬೈಲ್ ಅಪ್ಲಿಕೇಶನ್ ಅತ್ಯುತ್ತಮ ಆಯ್ಕೆ. ಈ ಅಪ್ಲಿಕೇಶನ್ ಮೂಲಕ ಜನರಲ್​ ಟಿಕೆಟ್‌ಗಳನ್ನು ಬುಕ್ ಮಾಡಲು ಇಲ್ಲಿಯವರೆಗೆ ಕೆಲವು ಜಿಯೋ-ಫೆನ್ಸಿಂಗ್ ನಿರ್ಬಂಧಗಳಿದ್ದವು.

author img

By ETV Bharat Karnataka Team

Published : May 31, 2024, 11:30 AM IST

UTS APP DISTANCE RESTRICTION  PURCHASING E TICKETS  RAILWAYS APP FOR PEOPLE  GENERAL TICKET
ಭಾರತೀಯ ರೈಲ್ವೇ (Getty Images)

ನವದೆಹಲಿ: ರೈಲು ಟಿಕೆಟ್ ಕೌಂಟರ್ ಬಳಿ ಸರತಿ ಸಾಲಿನಲ್ಲಿ ನಿಲ್ಲದೇ ಜನರಲ್​ ಟಿಕೆಟ್ ಬೇಕಿದ್ದರೆ ಯುಟಿಎಸ್ (ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ) ಮೊಬೈಲ್ ಆ್ಯಪ್ ಅತ್ಯುತ್ತಮ ಆಯ್ಕೆಯಾಗಿದೆ. ಇದನ್ನು ಅಧಿಕೃತವಾಗಿ ರೈಲ್ವೇ ಇಲಾಖೆ ಸಿದ್ಧಪಡಿಸಿದೆ. ಅನೇಕ ರೈಲು ಪ್ರಯಾಣಿಕರು ಜನರಲ್​ ಟಿಕೆಟ್‌ಗಳನ್ನು ಕಾಯ್ದಿರಿಸಲು ಈ ಅಪ್ಲಿಕೇಶನ್ ಅನ್ನು ನಿಯಮಿತವಾಗಿ ಬಳಸುತ್ತಾರೆ. ಈಗ ಹೊಸ ಅಪ್‌ಡೇಟ್ ಏನೆಂದರೆ, ಈ ಅಪ್ಲಿಕೇಶನ್ ಮೂಲಕ ಸಾಮಾನ್ಯ ಟಿಕೆಟ್‌ಗಳನ್ನು ಬುಕ್ ಮಾಡಲು ಇಲ್ಲಿಯವರೆಗೆ ಕೆಲವು ಜಿಯೋ-ಫೆನ್ಸಿಂಗ್ ನಿರ್ಬಂಧಗಳಿದ್ದವು. ಇವುಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಯುಟಿಎಸ್ ಆ್ಯಪ್ ಮೂಲಕ ಸಾಮಾನ್ಯ (ಜನರಲ್​) ಟಿಕೆಟ್ ಬುಕ್ಕಿಂಗ್ ಹೆಚ್ಚಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ಈ ಮೊದಲು ಉಪನಗರ ಪ್ರದೇಶಗಳಿಂದ ಈ ಆ್ಯಪ್ ಮೂಲಕ ರೈಲ್ವೆ ಟಿಕೆಟ್ ಕಾಯ್ದಿರಿಸಲು 20 ಕಿ.ಮೀ ದೂರದ ಮಿತಿ ಇತ್ತು. ಉಪನಗರೇತರ ಪ್ರದೇಶಗಳ ಜನರಿಗೆ ಟಿಕೆಟ್ ಕಾಯ್ದಿರಿಸಲು 50 ಕಿ.ಮೀ ದೂರದ ಮಿತಿ ಇತ್ತು. ಅಂದರೆ, ಅಷ್ಟು ದೂರದಲ್ಲಿರುವ ರೈಲು ನಿಲ್ದಾಣಗಳ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.

ಹೊಸ ನಿಯಮ: ಪರಿಷ್ಕೃತ ಹೊಸ ನಿಯಮಗಳ ಪ್ರಕಾರ, ಈಗ ಅಂತಹ ಯಾವುದೇ ನಿರ್ಬಂಧವಿಲ್ಲ. ಅಂದರೆ ಇನ್ನು ಮುಂದೆ ನಾವು ಯುಟಿಎಸ್ ಆ್ಯಪ್ ಮೂಲಕ ದೂರವನ್ನು ಲೆಕ್ಕಿಸದೆ ಯಾವುದೇ ರೈಲು ನಿಲ್ದಾಣಕ್ಕೆ ಯಾವುದೇ ಟಿಕೆಟ್ ಬುಕ್ ಮಾಡಬಹುದು. ಆದರೆ ಹೊಸ ನಿಯಮವನ್ನು ನೆನಪಿಡಬೇಕು. ಅಂದರೆ UTS ಮೂಲಕ ಟಿಕೆಟ್ ಖರೀದಿಸಿದ ನಂತರ ಒಂದು ಗಂಟೆಯೊಳಗೆ ಪ್ರಯಾಣವನ್ನು ಪ್ರಾರಂಭಿಸಬೇಕು. ರೈಲು ಹತ್ತಿರದ ರೈಲು ನಿಲ್ದಾಣವನ್ನು ತಲುಪಲು ಒಂದು ಗಂಟೆ ಬಾಕಿ ಇರುವಾಗ ನಾವು ಟಿಕೆಟ್ ಕಾಯ್ದಿರಿಸಬೇಕು. ರೈಲು ನಿಲ್ದಾಣದ ಬಳಿ ಬರುವ ಯುಟಿಎಸ್ ಮೂಲಕ ನೀವು ಟಿಕೆಟ್ ಕಾಯ್ದಿರಿಸಲು ಬಯಸಿದರೆ, ನಿಲ್ದಾಣದಿಂದ ಕನಿಷ್ಠ 5 ಮೀಟರ್ ದೂರದಲ್ಲಿರಬೇಕು. ನಿಲ್ದಾಣದಿಂದ ದೂರದಲ್ಲಿದ್ದರೆ ಮಾತ್ರ ಯುಟಿಎಸ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು. UTS ಅಪ್ಲಿಕೇಶನ್ ಮೂಲಕ ನಾವು ಪ್ಲಾಟ್‌ಫಾರ್ಮ್ ಮತ್ತು ಸೀಸನ್ ಟಿಕೆಟ್‌ಗಳನ್ನೂ ಸಹ ಖರೀದಿಸಬಹುದು.

ಶೇ.3ರಷ್ಟು ರಿಯಾಯಿತಿ: ಯುಟಿಎಸ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುವುದರಿಂದ ಮತ್ತೊಂದು ಪ್ರಯೋಜನವಿದೆ. ಈ ಅಪ್ಲಿಕೇಶನ್ R-Wallet ಒಳಗೊಂಡಿದೆ. ಅದರಲ್ಲಿ ಹಣ ಸೇರಿಸಿ. ಬಳಿಕ ಈ ವ್ಯಾಲೆಟ್ ಮೂಲಕ ಟಿಕೆಟ್​ಗಳನ್ನು ಖರೀದಿಸಿದಾಗ ನೀವು ಮಾಡಿರುವ ಹಣ ಪಾವತಿಯಲ್ಲಿ ಶೇ.3ರಷ್ಟು ರಿಯಾಯಿತಿ ಲಭ್ಯವಿದೆ. ಟಿಕೆಟ್​ಗಾಗಿ ಹಣ ಪಾವತಿಗಳನ್ನು ಮಾಡಲು Google Pay, Phone Pay, Paytmನಂತಹ UPI ಗೇಟ್‌ವೇಗಳನ್ನು ಈ ಅಪ್ಲಿಕೇಶನ್‌ಗೆ ಸೇರಿಸಲಾಗಿದೆ. ಇದು ಪಾವತಿಯನ್ನು ತುಂಬಾ ಸುಲಭ ಮತ್ತು ತ್ವರಿತವಾಗಿ ಮಾಡುತ್ತದೆ.

ಇದನ್ನೂ ಓದಿ: 'ಈಟಿವಿ ಬಾಲ್ ಭಾರತ್' ಪೈಂಟಥಾನ್: ಮೆಗಾ ವಿಜೇತೆ ಅನನ್ಯಾಗೆ ₹ 1 ಲಕ್ಷ ಬಹುಮಾನ - ETV Bal Bharat Paintathon 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.