ETV Bharat / business

ಷೇರು ಮಾರುಕಟ್ಟೆ ಇಂದು: ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್​, ನಿಫ್ಟಿ - Mumbai Share Market - MUMBAI SHARE MARKET

ದೇಶೀಯ ಷೇರು ಮಾರುಕಟ್ಟೆಗಳು ಇಂದು ಉತ್ತಮ ಗಳಿಕೆಯೊಂದಿಗೆ ಏರುಗತಿಯಲ್ಲಿವೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು.

INDIAN STOCK MARKET  DALAL STREET  NATIONAL STOCK EXCHANGE  BROAD MARKET
ಸಾಂದರ್ಭಿಕ ಚಿತ್ರ (Getty Images)
author img

By ANI

Published : Jul 29, 2024, 10:22 AM IST

ಮುಂಬೈ(ಮಹಾರಾಷ್ಟ್ರ): ಇಂದು ದೇಶೀಯ ಷೇರು ಮಾರುಕಟ್ಟೆಗಳು ಉತ್ತಮ ಗಳಿಕೆಯೊಂದಿಗೆ ಆರಂಭಗೊಂಡಿವೆ. ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದವು. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸಕಾರಾತ್ಮಕ ಸಂಕೇತಗಳೇ ಇದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬೆಳಗ್ಗೆ 9.30ಕ್ಕೆ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 349 ಅಂಕ ಗಳಿಸಿ 81,681ರಲ್ಲಿ ಮುಂದುವರಿಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 85 ಪಾಯಿಂಟ್ ಏರಿಕೆ ಕಂಡು 24,920ರಲ್ಲಿ ವಹಿವಾಟು ನಡೆಸಿತು.

  • ಯಾರಿಗೆ ಲಾಭ?: ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ಎಲ್ & ಟಿ, ಎನ್‌ಟಿಪಿಸಿ, ಟಾಟಾ ಮೋಟಾರ್ಸ್, ಇನ್ಫೋಸಿಸ್, ರಿಲಯನ್ಸ್, ಟಾಟಾ ಸ್ಟೀಲ್ ಹಾಗು ಅದಾನಿ ಪೋರ್ಟ್ಸ್.
  • ಇವರಿಗೆ ನಷ್ಟ: ಟೈಟಾನ್, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರ, ಐಟಿಸಿ, ಪವರ್‌ಗ್ರಿಡ್, ಏಷ್ಯನ್ ಪೇಂಟ್ಸ್, ಸನ್‌ಫಾರ್ಮಾ, ಕೋಟಕ್ ಬ್ಯಾಂಕ್, ಎಚ್‌ಸಿಎಲ್ ಟೆಕ್ ಹಾಗು ನೆಸ್ಲೆ ಇಂಡಿಯಾ.

ಇದನ್ನೂ ಓದಿ: 500 ಕೋಟಿಗಿಂತ ಹೆಚ್ಚು ಆದಾಯ ಗಳಿಸಿದ ಬೆಳ್ಳುಳ್ಳಿ ಬೆಳೆದ ರೈತರು: ಈ ವರ್ಷದಲ್ಲೇ ಅಧಿಕ ಲಾಭ - More income from garlic crop

ETV Bharat Logo

Copyright © 2025 Ushodaya Enterprises Pvt. Ltd., All Rights Reserved.