ETV Bharat / business

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು ಗೊತ್ತೇ? ವಿವಿಧ ಬ್ಯಾಂಕ್‌ಗಳ ಮಾಹಿತಿ - Saving Accounts Minimum Balance

author img

By ETV Bharat Karnataka Team

Published : Aug 21, 2024, 5:27 PM IST

ನೀವು ಉಳಿತಾಯ ಖಾತೆ ತೆರೆಯಲು ಬಯಸುವಿರಾ? ಹೆಚ್ಚಿನ ಬ್ಯಾಂಕುಗಳು ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ವಿಧಿಸುತ್ತವೆ. ನಿಮ್ಮ ಖಾತೆ ಕನಿಷ್ಠ ಬ್ಯಾಲೆನ್ಸ್ ಅನ್ನು ಪೂರೈಸದಿದ್ದರೆ ದಂಡ ವಿಧಿಸುತ್ತಾರೆ. ಅದಕ್ಕಾಗಿಯೇ ಈ ಸ್ಟೋರಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ ನಿರ್ವಹಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಕುರಿತು ವಿವರವಾಗಿ ತಿಳಿಯೋಣ.

SBI SAVINGS ACCOUNT MINIMUM BALANCE  HDFC BANK ACCOUNT MINIMUM BALANCE  ICICI BANK ACCOUNT MINIMUM BALANCE  YES BANK ACCOUNT MINIMUM BALANCE
ಸಾಂದರ್ಭಿಕ ಚಿತ್ರ (Getty Images)

ನೀವು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಬಯಸಿದರೆ, ಅದರಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯ. ಆದರೆ, ಈ ಕನಿಷ್ಠ ಮೊತ್ತವು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ. ನಿಮ್ಮ ಖಾತೆಯಲ್ಲಿ ಈ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ, ಆಯಾ ಬ್ಯಾಂಕ್‌ಗಳು ದಂಡ ವಿಧಿಸಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಈ ಕ್ರಮಗಳನ್ನು ಅನುಸರಿಸಬಹುದು.

ವರದಿಯೊಂದರ ಪ್ರಕಾರ, ಕಳೆದ ಐದು ವರ್ಷಗಳಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದ ಗ್ರಾಹಕರಿಂದ ಒಟ್ಟು 8,495 ಕೋಟಿ ರೂ.ಗಳನ್ನು ದಂಡವಾಗಿ ವಿಧಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ವರ್ಷಗಳ ಹಿಂದೆ ಇಂತಹ ದಂಡವನ್ನು ರದ್ದುಗೊಳಿಸಿತು. ಆದರೆ, ಇತರ ಬ್ಯಾಂಕ್‌ಗಳು ಇವುಗಳಿಗೆ ಶುಲ್ಕ ವಿಧಿಸುತ್ತಲೇ ಇರುತ್ತವೆ.

ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು?: ಪ್ರತಿ ಬ್ಯಾಂಕಿನ ನಿಯಮಗಳ ಪ್ರಕಾರ, ನೀವು ತೆರೆದಿರುವ ಉಳಿತಾಯ ಖಾತೆಯಲ್ಲಿ ನೀವು ಯಾವಾಗಲೂ ಒಂದು ನಿರ್ದಿಷ್ಟ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಇದನ್ನು ಕನಿಷ್ಠ ಬ್ಯಾಲೆನ್ಸ್ ಎಂದು ಕರೆಯಲಾಗುತ್ತದೆ. ನಿಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಈ ಕನಿಷ್ಠ ಮೊತ್ತಕ್ಕಿಂತ ಕಡಿಮೆಯಿದ್ದರೆ, ಬ್ಯಾಂಕ್ ನಿಮಗೆ ದಂಡ ವಿಧಿಸಬಹುದು. ಆದಾಗ್ಯೂ, ದಂಡಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತವೆ. ಇದು ನಿಮ್ಮ ಖಾತೆಯ ಪ್ರಕಾರ, ಆಯಾ ಬ್ಯಾಂಕ್ ನೀಡುವ ಉಚಿತ ಸೇವೆಗಳು ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಹಾಗಾದರೆ ಯಾವ ಯಾವ ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಈಗ ತಿಳಿಯೋಣ.

ಎಸ್‌ಬಿಐ ಉಳಿತಾಯ ಖಾತೆ ಕನಿಷ್ಠ ಬ್ಯಾಲೆನ್ಸ್: ಎಸ್‌ಬಿಐ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಯಾವುದೇ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ಬಯಸುವುದಿಲ್ಲ. ಏಕೆಂದರೆ 2020ರಲ್ಲಿಯೇ SBI ಈ ರೀತಿಯ ದಂಡವನ್ನು ರದ್ದುಗೊಳಿಸಿತು.

HDFC ಉಳಿತಾಯ ಖಾತೆ ಕನಿಷ್ಠ ಬ್ಯಾಲೆನ್ಸ್: ನೀವು ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ HDFC ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ತೆರೆದರೆ, ನೀವು ಕನಿಷ್ಟ 10,000 ರೂ. ಅಥವಾ ಒಂದು ವರ್ಷ + 1 ದಿನದ ಅವಧಿಯೊಂದಿಗೆ ಒಂದು ಲಕ್ಷ ರೂಪಾಯಿಗಳನ್ನು ಸ್ಥಿರ ಠೇವಣಿ ಇಡಬೇಕು. ಸೆಮಿ- ಅರ್ಬನ್​ ಪ್ರದೇಶಗಳಾಗಿದ್ದರೆ, ನಿಮ್ಮ ಖಾತೆಯಲ್ಲಿ ಕನಿಷ್ಠ 5,000 ರೂ. ಅಥವಾ ಸ್ಥಿರ ಠೇವಣಿ 50,000 ರೂ. ನಿಮ್ಮ ಖಾತೆಯು ಈ ಕನಿಷ್ಠ ಬ್ಯಾಲೆನ್ಸ್ ಹೊಂದಿಲ್ಲದಿದ್ದರೆ, ಕಡಿಮೆ ಮೊತ್ತಕ್ಕೆ ಶೇ 6ರವರೆಗೆ ಅಥವಾ 600 ರೂ. ದಂಡವನ್ನು ವಿಧಿಸಲಾಗುತ್ತದೆ. (ಯಾವುದು ಕಡಿಮೆಯೋ ಅದಕ್ಕೆ ಶುಲ್ಕ ವಿಧಿಸಲಾಗುತ್ತದೆ.)

ICICI ಉಳಿತಾಯ ಖಾತೆ ಕನಿಷ್ಠ ಬ್ಯಾಲೆನ್ಸ್: ICICI ಬ್ಯಾಂಕ್ ಖಾತೆದಾರರು ಕನಿಷ್ಠ ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ರೂ.5000 ಅನ್ನು ನಿರ್ವಹಿಸಬೇಕು. ನಿಮ್ಮ ಖಾತೆಯು ಈ ಕನಿಷ್ಠ ಮೊತ್ತವನ್ನು ಪೂರೈಸದಿದ್ದರೆ, MABಯ ಕಡಿಮೆ ಮೊತ್ತಕ್ಕೆ ರೂ.100 + 5% ದಂಡವನ್ನು ವಿಧಿಸಲಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಉಳಿತಾಯ ಖಾತೆ ಕನಿಷ್ಠ ಬ್ಯಾಲೆನ್ಸ್: ಗ್ರಾಮೀಣ ಪ್ರದೇಶದ ಗ್ರಾಹಕರು ಕನಿಷ್ಠ ರೂ.400 ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು. ಸೆಮಿ ಅರ್ಬನ್​ ಪ್ರದೇಶಗಳಲ್ಲಿ ಗ್ರಾಹಕರಿಗೆ ರೂ.500; ನಗರ/ಮೆಟ್ರೋ ಪ್ರದೇಶಗಳಲ್ಲಿನ ಖಾತೆಗಳು ತಮ್ಮ ಖಾತೆಗಳಲ್ಲಿ ಕನಿಷ್ಠ ರೂ.600 ಮೊತ್ತವನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಲು ವಿಫಲವಾದರೆ ನೀವು ವಾಸಿಸುವ ಪ್ರದೇಶವನ್ನು ಅವಲಂಬಿಸಿ ದಂಡವನ್ನು ವಿಧಿಸಲಾಗುತ್ತದೆ.

YES ಬ್ಯಾಂಕ್ ಉಳಿತಾಯ ಖಾತೆ ಕನಿಷ್ಠ ಬ್ಯಾಲೆನ್ಸ್: ಎಸ್ ಬ್ಯಾಂಕ್ ಖಾತೆದಾರರು ಯಾವುದೇ ಕನಿಷ್ಠ ಬ್ಯಾಲೆನ್ಸ್ ಅನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.

ಇದನ್ನೂ ಓದಿ: ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಲಾರಂಭಿಸಿದ KAPS-4 ಪರಮಾಣು ವಿದ್ಯುತ್​ ಘಟಕ - Nuclear Power Plant

ETV Bharat Logo

Copyright © 2024 Ushodaya Enterprises Pvt. Ltd., All Rights Reserved.