ಕಾಲಕಾಲಕ್ಕೆ IRCTC ಪ್ರವಾಸೋದ್ಯಮವು ಪ್ರಸಿದ್ಧ ನಾಡಿನ ಆಧ್ಯಾತ್ಮಿಕ ತಾಣಗಳು ಮತ್ತು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಬಯಸುವವರಿಗೆ ಹೊಸ ಪ್ಯಾಕೇಜ್‌ಗಳನ್ನು ಪ್ರಕಟಿಸುತ್ತದೆ. ಇತ್ತೀಚೆಗಷ್ಟೇ ಹೈದರಾಬಾದ್ ಕರ್ನಾಟಕದ ಹಲವು ಭಾಗಗಳನ್ನು ನೋಡಲು ಟೂರ್ ಪ್ಯಾಕೇಜ್ ಘೋಷಿಸಿದೆ. ರೈಲು ಪ್ರಯಾಣದ ಮೂಲಕ ಈ ಪ್ರವಾಸದಲ್ಲಿ ನೀವು ಅನೇಕ ಪ್ರವಾಸಿ ಸ್ಥಳಗಳನ್ನು ಆನಂದಿಸಬಹುದು.
IRCTC ಕರ್ನಾಟಕದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲು 'ಡಿವೈನ್ ಕರ್ನಾಟಕ' ಎಂಬ ಪ್ರವಾಸೋದ್ಯಮ ಪ್ಯಾಕೇಜ್ ಘೋಷಿಸಿದೆ. ಈ ಪ್ರವಾಸವನ್ನು ಹೈದರಾಬಾದ್ನ ರೈಲು ಜರ್ನಿ ನಿರ್ವಹಿಸುತ್ತದೆ. ಈ ಪ್ರವಾಸವು 5 ರಾತ್ರಿ ಮತ್ತು 6 ದಿನಗಳ ಕಾಲ ಇರುತ್ತದೆ. ಕರ್ನಾಟಕದ ಉಡುಪಿ, ಮಂಗಳೂರು, ಶೃಂಗೇರಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಬಹುದು. ಪ್ರವಾಸದ ರೈಲು ಪ್ರತಿ ಮಂಗಳವಾರ ಹೈದರಾಬಾದ್‌ನಿಂದ ಹೊರಡುತ್ತದೆ.
ಪ್ರಯಾಣದ ವಿವರಗಳು:
- ಮೊದಲ ದಿನ ಕಾಚಿಗುಡ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12789) ರೈಲು ಕಾಚಿಗುಡ ರೈಲು ನಿಲ್ದಾಣದಿಂದ ಬೆಳಗ್ಗೆ 06.05ಕ್ಕೆ ಹೊರಡಲಿದೆ. ಇದು ಇಡೀ ರಾತ್ರಿ ಪ್ರಯಾಣವಾಗಿರುತ್ತದೆ.
- ಎರಡನೇ ದಿನ ಬೆಳಗ್ಗೆ 09.30ಕ್ಕೆ ಮಂಗಳೂರು ಕೇಂದ್ರ ನಿಲ್ದಾಣ ತಲುಪಲಿದೆ. ಅಲ್ಲಿಂದ ನೇರ ಉಡುಪಿಗೆ. ಹೋಟೆಲ್‌ನಲ್ಲಿ ಚೆಕ್ ಇನ್ ಆದ ನಂತರ ಶ್ರೀಕೃಷ್ಣ ದೇವಸ್ಥಾನ, ಸೇಂಟ್ ಮೇರಿ ದ್ವೀಪ ಮತ್ತು ಮಲ್ಪೆ ಬೀಚ್‌ಗೆ ಭೇಟಿ. ರಾತ್ರಿ ಉಡುಪಿಯಲ್ಲಿ ವಾಸ್ತವ್ಯ.
- ಮೂರನೇ ದಿನ ಬೆಳಗ್ಗೆ ತಿಂಡಿ ಮುಗಿಸಿ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಶೃಂಗೇರಿಗೆ ಹೊರಡಬೇಕು. ಅಲ್ಲಿ ನೀವು ಶೃಂಗೇರಿ ಶಾರದಾಂಬಾ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ. ಮಧ್ಯಾಹ್ನದ ಊಟದ ನಂತರ ಮತ್ತೆ ಮಂಗಳೂರಿನತ್ತ ಪ್ರಯಾಣ ಆರಂಭ. ಮಂಗಳೂರು ತಲುಪಿ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಬೇಕು. ಅಂದು ರಾತ್ರಿ ಮಂಗಳೂರಿನಲ್ಲಿ ವಾಸ್ತವ್ಯ.
- ನಾಲ್ಕನೇ ದಿನ ಬೆಳಗ್ಗೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳುವುದು. ಅಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣ. ಸುಬ್ರಹ್ಮಣ್ಯನ ದರ್ಶನದ ಬಳಿಕ ಸಂಜೆ ಮಂಗಳೂರಿಗೆ ಹಿಂತಿರುಗಿ ರಾತ್ರಿ ಅಲ್ಲಿ ತಂಗಬೇಕು.
- ಐದನೇ ದಿನ, ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಮತ್ತು ಮಂಗಳೂರಿನ ಸ್ಥಳೀಯ ದೇವಸ್ಥಾನಗಳು, ಮಂಗಳಾದೇವಿ ದೇವಸ್ಥಾನ ಮತ್ತು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಭೇಟಿ. ನೀವು ಸ್ಥಳೀಯವಾಗಿ ಶಾಪಿಂಗ್ ಕೂಡಾ ಮಾಡಬಹುದು. ಸಂಜೆ ತನ್ನೀರುಬಾವಿ ಬೀಚ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ. ಸಂಜೆ 7:00 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪುತ್ತೇವೆ. ಅಲ್ಲಿ ರೈಲು ನಂ.12790 ರಾತ್ರಿ 08:05 ಗಂಟೆಗೆ ಹೈದರಾಬಾದ್‌ಗೆ ಪ್ರಯಾಣ ಬೆಳೆಸುತ್ತೇವೆ. ಇದು ರಾತ್ರಿ ಪ್ರಯಾಣ.
- ಆರನೇ ದಿನ ರಾತ್ರಿ 11:40ಕ್ಕೆ ಕಾಚಿಗುಡ ತಲುಪುವ ಮೂಲಕ ಪ್ರವಾಸ ಮುಕ್ತಾಯ.
ಪ್ಯಾಕೇಜ್ ಬೆಲೆ ವಿವರಗಳು:
- 1 - 3 ಅಂದ್ರೆ ಮೂವರು ಬುಕ್ ಮಾಡಿದರೆ: ಕಂಫರ್ಟ್ ಸೆಕ್ಷನ್ನಲ್ಲಿ- ಸಿಂಗಲ್ ಶೇರಿಂಗ್ ರೂ. 37,770 ಶುಲ್ಕ ವಿಧಿಸಲಾಗುತ್ತದೆ. ಡಬಲ್ ಶೇರಿಂಗ್‌ಗೆ ರೂ. 22,260, ಟ್ರಿಪಲ್ ಶೇರಿಂಗ್‌ಗೆ ರೂ. 17,990 ನಿಗದಿಪಡಿಸಲಾಗಿದೆ. ವಿತ್ ಬೆಡ್ ಐದರಿಂದ ಹನ್ನೊಂದು ವರ್ಷದ ಮಕ್ಕಳಿಗೆ ರೂ. 11,330, ಅದೇ ವಿತ್ ಔಟ್ ಬೆಡ್ ರೂ. 9,800 ಪಾವತಿಸಬೇಕು.
- ಸ್ಟ್ಯಾಂಡರ್ಡ್‌ನಲ್ಲಿ- ಸಿಂಗಲ್ ಶೇರಿಂಗ್ ಗೆ ರೂ.34,770, ಟ್ವಿನ್ ಶೇರಿಂಗ್ ಗೆ ರೂ.19,260, ಟ್ರಿಪಲ್ ಶೇರಿಂಗ್ ಗೆ ರೂ.15,000. ವಿತ್ ಬೆಡ್ 5-11 ವರ್ಷದೊಳಗಿನ ಮಕ್ಕಳಿಗೆ 8,330 ರೂ. ಮತ್ತು ವಿತ್ ಔಟ್ ಬೆಡ್ 6,800 ಪಾವತಿಸಬೇಕು.
ನಾಲ್ಕರಿಂದ 6 ಜನ ಒಟ್ಟಿಗೆ ಬುಕ್ ಮಾಡಿದರೆ:
- ಕಂಫರ್ಟ್ನಲ್ಲಿ- ಡಬಲ್ ಶೇರಿಂಗ್‌ಗೆ ರೂ.19,030 ಮತ್ತು ಟ್ರಿಪಲ್ ಶೇರಿಂಗ್‌ಗೆ ರೂ.16,960. ವಿತ್ ಬೆಡ್ ಇರುವ 5-11 ವರ್ಷದೊಳಗಿನ ಮಕ್ಕಳಿಗೆ ರೂ. 11,330, ವಿತ್ ಔಟ್ ಬೆಡ್ ರೂ.9,800.
- ಸ್ಟ್ಯಾಂಡರ್ಡ್‌ನಲ್ಲಿ- ಡಬಲ್ ಶೇರಿಂಗ್‌ಗೆ ರೂ. 16,030 ಮತ್ತು ಟ್ರಿಪಲ್ ಹಂಚಿಕೆಗೆ ರೂ.13,960. ವಿತ್ ಬೆಡ್ 5-11 ವರ್ಷದೊಳಗಿನ ಮಕ್ಕಳಿಗೆ 8,300 ರೂ. ವಿತ್ ಔಟ್ ಬೆಡ್ 6,800 ಪಾವತಿಸಬೇಕು.
- ಈ ಪ್ಯಾಕೇಜ್‌ನ ಸಂಪೂರ್ಣ ವಿವರಗಳು ಮತ್ತು ಬುಕಿಂಗ್‌ಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ಶಿರಡಿಗೆ ಹೋಗುವ ಪ್ಲ್ಯಾನ್ ಇದೆಯೇ? ಕೈಗೆಟುಕುವ ದರದಲ್ಲಿ IRCTC ಟೂರ್ ಪ್ಯಾಕೇಜ್! - IRCTC Tour Package