ETV Bharat / business

ಕಳೆದ 10 ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳ ಲಾಭ 4 ಪಟ್ಟು ಹೆಚ್ಚಳ: ಸಿಎಲ್​ಎಸ್​ಎ ವರದಿ - Indian banks

ಭಾರತೀಯ ಬ್ಯಾಂಕುಗಳ ಲಾಭದ ಪ್ರಮಾಣ ಕಳೆದ ಒಂದು ದಶಕದಲ್ಲಿ 4 ಪಟ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

ಭಾರತೀಯ ಬ್ಯಾಂಕುಗಳ ಲಾಭ 4 ಪಟ್ಟು ಹೆಚ್ಚಳ
ಭಾರತೀಯ ಬ್ಯಾಂಕುಗಳ ಲಾಭ 4 ಪಟ್ಟು ಹೆಚ್ಚಳ (IANS (ಸಾಂದರ್ಭಿಕ ಚಿತ್ರ))
author img

By ETV Bharat Karnataka Team

Published : Jun 17, 2024, 1:25 PM IST

ನವದೆಹಲಿ : ಕಳೆದ 10 ವರ್ಷಗಳಲ್ಲಿ ಭಾರತೀಯ ಬ್ಯಾಂಕುಗಳ ಲಾಭದ ಪ್ರಮಾಣ 4 ಪಟ್ಟು ಹೆಚ್ಚಳವಾಗಿದ್ದು, ದೇಶದ ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆ ಪುಟಿದೆದ್ದಿದೆ ಎಂದು ಬಂಡವಾಳ ಮಾರುಕಟ್ಟೆ ಮತ್ತು ಹೂಡಿಕೆ ಸಂಸ್ಥೆ ಸಿಎಲ್ಎಸ್ಎ ವರದಿ ತಿಳಿಸಿದೆ. ಅಲ್ಲದೆ ಇದೇ ಅವಧಿಯಲ್ಲಿ ಭಾರತೀಯ ಬ್ಯಾಂಕುಗಳ ಮರುಪಾವತಿಯಾಗಬೇಕಾದ ಸಾಲಗಳ ಪ್ರಮಾಣ ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

"ಭಾರತೀಯ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್​ಗಳು ಒಂದು ದಶಕದಲ್ಲಿಯೇ ಅತ್ಯಂತ ಪ್ರಬಲವಾಗಿವೆ ಮತ್ತು ಲಾಭವು ತೀವ್ರವಾಗಿ ಏರಿದೆ (10 ವರ್ಷಗಳಲ್ಲಿ ನಾಲ್ಕು ಪಟ್ಟು)" ಎಂದು ವರದಿ ಹೇಳಿದೆ.

ಈಗ ಉತ್ತಮ ಆಸ್ತಿ ಗುಣಮಟ್ಟ, ಬಲವಾದ ನಿಬಂಧನೆ ಬಫರ್​ಗಳು ಮತ್ತು ಸುಧಾರಿತ ಬಂಡವಾಳ ಸ್ಥಿತಿಯಿಂದಾಗಿ ಈ ಹಿಂದೆ ಭಾರತೀಯ ಬ್ಯಾಂಕಿಂಗ್ ವಲಯಕ್ಕೆ ಅಡ್ಡಿಯಾಗಿದ್ದ ಅನುತ್ಪಾದಕ ಸಾಲಗಳು (ನಿವ್ವಳ ಎನ್ ಪಿಎಲ್) ದಶಕದ ಕನಿಷ್ಠ ಮಟ್ಟಕ್ಕೆ ಇಳಿದಿವೆ ಎಂದು ವರದಿ ಗಮನಸೆಳೆದಿದೆ.

2012-22ರ ಹಣಕಾಸು ವರ್ಷದಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಸರಾಸರಿ ಶೇಕಡಾ 10 ರಿಂದ 15 ಕ್ಕೆ ಏರಿರುವ ಸಾಲದ ಬೆಳವಣಿಗೆಯ ವೇಗದೊಂದಿಗೆ ಠೇವಣಿ ಬೆಳವಣಿಗೆಯು ಹೊಂದಿಕೆಯಾಗಬೇಕು ಎಂದು ಅದು ಹೇಳಿದೆ. ಕಳೆದ ವರ್ಷ ಮತ್ತು ಕಳೆದ ಐದು ವರ್ಷಗಳಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು ಖಾಸಗಿ ವಲಯದ ಬ್ಯಾಂಕುಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ವರದಿ ತಿಳಿಸಿದೆ.

ಆದಾಗ್ಯೂ, ಕಳೆದ ದಶಕದಲ್ಲಿ ಖಾಸಗಿ ವಲಯದ ಬ್ಯಾಂಕುಗಳು ಚಾಲ್ತಿ ಖಾತೆ (ಸಿಎ) ಠೇವಣಿಗಳ ವಿಚಾರದಲ್ಲಿ ಪಿಎಸ್​ಯು ಬ್ಯಾಂಕುಗಳನ್ನು ಮೀರಿಸಿವೆ ಮತ್ತು ಠೇವಣಿ ರಹಿತ ಸಾಲಗಳನ್ನು ಸಹ ಕಡಿಮೆ ಮಾಡಿಕೊಂಡಿವೆ ಎಂದು ವರದಿ ಹೇಳಿದೆ. ದೀರ್ಘಾವಧಿಯಲ್ಲಿ, ಸಾಲದ ಬೆಳವಣಿಗೆ ಮತ್ತು ಠೇವಣಿ ಬೆಳವಣಿಗೆಯು ಸಮನ್ವಯಗೊಂಡಿದೆ. ಕಾರ್ಪೊರೇಟ್ ಸಾಲದ ಗುಣಮಟ್ಟವೂ ಕಳೆದ 5 ರಿಂದ 7 ವರ್ಷಗಳಲ್ಲಿ ಸುಧಾರಿಸಿದೆ ಎಂದು ವರದಿ ತಿಳಿಸಿದೆ.

100 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಣೆಗೆ ಮುಂದಾದ ಓಯೋ: ಹೋಟೆಲ್ ಕ್ಷೇತ್ರದ ಮುಂಚೂಣಿ ಕಂಪನಿಯಾಗಿರುವ ಓಯೋ 2.5 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಈಗ 100 ರಿಂದ 125 ಮಿಲಿಯನ್ ಡಾಲರ್ ಹೊಸ ಬಂಡವಾಳ ಸಂಗ್ರಹಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಈ ಕ್ರಮದೊಂದಿಗೆ, ಕಂಪನಿಯು ಮೊದಲ ವರ್ಷದಲ್ಲಿ $ 8-10 ಮಿಲಿಯನ್ ಮತ್ತು ನಂತರ $ 15-17 ಮಿಲಿಯನ್ ವಾರ್ಷಿಕ ಉಳಿತಾಯ ಮಾಡುವ ಗುರಿಯನ್ನು ಹಾಕಿಕೊಂಡಿದೆ.

ಇದನ್ನೂ ಓದಿ : ಕಳೆದ ವಾರ $202 ಮಿಲಿಯನ್ ನಿಧಿ ಸಂಗ್ರಹಿಸಿದ ಸ್ಟಾರ್ಟ್​ಅಪ್​ಗಳು: ಫಂಡಿಂಗ್​ ಶೇ 100ರಷ್ಟು ಹೆಚ್ಚಳ - Indian startups

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.