ETV Bharat / business

ಭಾರತದಲ್ಲಿ ಇನ್ನೂ ಅನ್ವೇಷಿಸದ ಅದ್ಭುತ ಅವಕಾಶಗಳಿವೆ: ಬಿಲಿಯನೇರ್ ಹೂಡಿಕೆದಾರ ವಾರೆನ್ ಬಫೆಟ್ - Warren Buffett - WARREN BUFFETT

ಭಾರತದ ಮಾರುಕಟ್ಟೆಯಲ್ಲಿ ಅದ್ಭುತ ಅವಕಾಶಗಳಿವೆ ಎಂದು ಬಿಲಿಯನೇರ್ ಹೂಡಿಕೆದಾರ ವಾರೆನ್ ಬಫೆಟ್ ಅವರು ಬರ್ಕ್‌ಷೈರ್ ಹ್ಯಾಥ್‌ವೇ ವಾರ್ಷಿಕ ಸಭೆಯಲ್ಲಿ ಹೇಳಿದರು.

BERKSHIRE HATHAWAY  INDIAN STOCK MARKET  GDP GROWTH  BILLIONAIRE INVESTOR WARREN BUFFETT
ವಾರೆನ್ ಬಫೆಟ್ (IANS)
author img

By PTI

Published : May 6, 2024, 11:22 AM IST

ವಾಷಿಂಗ್ಟನ್(ಅಮೆರಿಕ): ''ಭಾರತದಲ್ಲಿ ಇನ್ನೂ ಅನ್ವೇಷಿಸದ ಅವಕಾಶಗಳಿವೆ. ತಮ್ಮ ಕಂಪೆನಿ ಬರ್ಕ್‌ಷೈರ್ ಹ್ಯಾಥ್‌ವೇ ಭವಿಷ್ಯದಲ್ಲಿ ಈ ಅವಕಾಶಗಳನ್ನು ಅನ್ವೇಷಿಸಲು ಬಯಸುತ್ತದೆ'' ಎಂದು ಅಮೆರಿಕದ ಬಿಲಿಯನೇರ್ ಹೂಡಿಕೆದಾರ ವಾರೆನ್ ಬಫೆಟ್ ತಿಳಿಸಿದರು. ಬಫೆಟ್‌ ಅವರನ್ನು ವಿಶ್ವದ ಅತಿ ದೊಡ್ಡ ಹೂಡಿಕೆದಾರ ಎಂದು ಪರಿಗಣಿಸಲಾಗಿದೆ.

ವಾರೆನ್ ಬಫೆಟ್ ಅವರ ಬರ್ಕ್‌ಷೈರ್ ಹ್ಯಾಥ್‌ವೇ ವಾರ್ಷಿಕ ಸಭೆಯನ್ನು ಆರ್ಥಿಕ ಜಗತ್ತು ಕುತೂಹಲದಿಂದ ಗಮನಿಸುತ್ತಿದೆ. ಈ ಸಭೆಯಲ್ಲಿ ತಮ್ಮ ಭವಿಷ್ಯದ ಯೋಜನೆಗಳು, ಹೂಡಿಕೆ, ಕಾರ್ಪೊರೇಟ್ ಆಡಳಿತ ಮತ್ತು ಆರ್ಥಿಕತೆಯಂತಹ ಅನೇಕ ವಿಷಯಗಳ ಬಗ್ಗೆ ಬಫೆಟ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನಾವು ಇನ್ನೂ ಭಾರತವನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಬಫೆಟ್ ಷೇರುದಾರರಿಗೆ ತಿಳಿಸಿದ್ದಾರೆ. ಆದರೆ, ನಮಗೆ ಅಲ್ಲಿ ವಿಫುಲ ಅವಕಾಶಗಳಿವೆ. ಈ ಏಷ್ಯಾ ದೇಶದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ನಮ್ಮ ಮುಂದಿನ ಆಡಳಿತ ಮಂಡಳಿ ಈ ಕೆಲಸವನ್ನು ಮಾಡಬೇಕಿದೆ ಎಂದರು.

ಭಾರತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ''ಭಾರತಕ್ಕೆ ಸಂಬಂಧಿಸಿದಂತೆ ನಾವು ಸ್ಪಷ್ಟ ಕಾರ್ಯತಂತ್ರ ಮಾಡಬೇಕಾಗಿದೆ. ಬರ್ಕ್‌ಷೈರ್ ಹಾಥ್‌ವೇ ಯಾವ ವಲಯದಲ್ಲಿ ಎಷ್ಟು ಲಾಭ ಗಳಿಸಬಹುದು ಎಂಬುದನ್ನು ನೋಡಬೇಕು. ನಾವು ಅಲ್ಲಿ ಹೂಡಿಕೆ ಮಾಡಬೇಕೆಂದು ಭಾರತವೂ ಬಯಸುತ್ತದೆ. ಆದರೆ, ಮುಂದಿನ ಆಡಳಿತ ಮಂಡಳಿ ಈ ಕೆಲಸ ಮಾಡಿದರೆ ಉತ್ತಮ'' ಎಂದು ಹೇಳಿದರು.

ಜಪಾನ್‌ನಲ್ಲಿ ಅತ್ಯುತ್ತಮ ಫಲಿತಾಂಶ: ''ಜಪಾನ್‌ನಲ್ಲಿ ನಮ್ಮ ಹೂಡಿಕೆಯ ಫಲಿತಾಂಶಗಳು ಅತ್ಯುತ್ತಮವಾಗಿವೆ'' ಎಂದ ಅವರು, ''ಭಾರತದಲ್ಲೂ ಇಂತಹ ಹಲವು ಸಾಧ್ಯತೆಗಳಿವೆ. ಈ ಬಗ್ಗೆ ಬರ್ಕ್‌ಷೈರ್ ಹ್ಯಾಥ್‌ವೇ ಯುವ ಆಡಳಿತ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನೀವು ಹೆಚ್ಚು ಕಾಯಬೇಕಾಗಿಲ್ಲ ಎಂದರು.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತ: ''ಕಳೆದ ಕೆಲವು ವರ್ಷಗಳಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ಅದ್ಭುತವಾಗಿದೆ. ಜಗತ್ತಿನಲ್ಲಿ ಹಲವಾರು ಸಮಸ್ಯೆಗಳಿದ್ದರೂ, ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 8.4 ರಷ್ಟಿತ್ತು. ಟೆಸ್ಲಾ ಮತ್ತು ಬರ್ಕ್‌ಷೈರ್ ಹ್ಯಾಥ್‌ವೇಯಂತಹ ದೊಡ್ಡ ಕಂಪನಿಗಳು ಈಗ ಭಾರತದತ್ತ ಭರವಸೆಯಿಂದ ನೋಡುತ್ತಿರುವುದಕ್ಕೆ ಇದೇ ಕಾರಣ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ವಾರ 340 ಮಿಲಿಯನ್ ಡಾಲರ್​ ಫಂಡಿಂಗ್ ಸಂಗ್ರಹಿಸಿದ 27 ಸ್ಟಾರ್ಟ್​ಅಪ್​ಗಳು - startup funding

ETV Bharat Logo

Copyright © 2025 Ushodaya Enterprises Pvt. Ltd., All Rights Reserved.