ಕೋಟಾ: ಪ್ರಸ್ತುತ ಬೆಳ್ಳುಳ್ಳಿಯ ಬೆಲೆ ಗಗನಕ್ಕೇರಿದೆ. 2023 ಕ್ಕೆ ಹೋಲಿಸಿದರೆ 2024ರಲ್ಲಿ ಈ ಖಾರಿಫ್ ಬೆಳೆಯನ್ನು ಸುಮಾರು 90 ಪ್ರತಿಶತದಷ್ಟು ಹೆಚ್ಚು ಮಾರಾಟ ಮಾಡಿದ್ದಾರೆ. 2024ರಲ್ಲಿ ಬೆಳ್ಳುಳ್ಳಿ ಬೆಳೆದ ರೈತರಿಗೆ 535 ಕೋಟಿ ರೂಪಾಯಿಗಳ ಲಾಭ ಗಳಿಸಿದ್ದಾರೆ. ಹೆಚ್ಚಿದ ಬೇಡಿಕೆ ಮತ್ತು ಕಡಿಮೆ ಪೂರೈಕೆ ಇದ್ದ ಹಿನ್ನೆಲೆ ಬೆಳ್ಳುಳ್ಳಿ ಬೆಳೆ ಉತ್ತಮ ಬೆಲೆ ಬಂದಿದೆ. ಸದ್ಯ ಕೋಟಾ ಮಾರುಕಟ್ಟೆಗೆ ನಿತ್ಯ 5 ಸಾವಿರದಿಂದ 7 ಸಾವಿರ ಕ್ವಿಂಟಲ್ ಬೆಳ್ಳುಳ್ಳಿ ಬರುತ್ತಿದ್ದು, ಪ್ರತಿ ಕ್ವಿಂಟಲ್ ಗೆ ಸರಾಸರಿ 15 ಸಾವಿರ ರೂ.ಗೆ ಮಾರಾಟವಾಗುತ್ತಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಬೆಳ್ಳುಳ್ಳಿಯ ಬೆಲೆ ಕೆಜಿಗೆ ₹300ರಿಂದ ₹400ಕ್ಕೆ ಏರಿಕೆಯಾಗಿತ್ತು. ವಿವಿಧ ಭಾಗಗಳಲ್ಲಿರುವ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹150 ರಿಂದ ₹250 ದರದಲ್ಲಿ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹300 ರಿಂದ ₹400ರ ನಡುವೆ ಮಾರಾಟವಾಗುತ್ತಿದೆ. ನಿರ್ದಿಷ್ಟವಾಗಿ ವಸಂತ ಋತುವಿನ ವಿಳಂಬದಿಂದಾಗಿ ಬೆಳ್ಳುಳ್ಳಿಯ ಬೆಲೆ ಏರಿಕೆಯು ಸಾಕಷ್ಟು ಸಮಯದವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಈ ಬೆಲೆ ಏರಿಕೆಯ ಮಧ್ಯೆ, ಕುಟುಂಬಗಳು ತಮ್ಮ ಬಜೆಟ್‌ಗೆ ಹೊಂದಿಕೊಳ್ಳಲು ಮಸಾಲೆ ಪದಾರ್ಥ ಸೇವನೆಯನ್ನು ಕಡಿಮೆ ಮಾಡಿವೆ. ಸೆಪ್ಟೆಂಬರ್-ಅಕ್ಟೋಬರ್‌ನಿಂದ ಆರಂಭಗೊಂಡು, ಈ ವರ್ಷದ ಜನವರಿವರೆಗೆ ಬೆಳ್ಳುಳ್ಳಿ ಸೇರಿದಂತೆ ತಾಜಾ ತರಕಾರಿಗಳು ಬೆಲೆಗಳು ನಿರಂತರವಾಗಿ ಏರಿಕೆ ಕಂಡಿವೆ. ಈಗ ಪೂರೈಕೆ ಕಡಿಮೆಯಾಗಿದೆ, ಆದ್ರೆ ಬೇಡಿಕೆ ಇನ್ನೂ ಹೆಚ್ಚಿದ್ದು, ಇದರಿಂದ ರೈತರು ಗಣನೀಯ ಲಾಭ ಗಳಿಸಲು ಸಹಕಾರಿಯಾಗಿದೆ.
ಕೃಷಿ ಮಾರುಕಟ್ಟೆ ಇಲಾಖೆಯ ಜಂಟಿ ನಿರ್ದೇಶಕ ಶಶಿ ಶೇಖರ್ ಶರ್ಮಾ ಮಾತನಾಡಿ, ಕಳೆದ ವರ್ಷ ಏಪ್ರಿಲ್ನಿಂದ ಜೂನ್ವರೆಗೆ ಬೆಳ್ಳುಳ್ಳಿ ಬೆಲೆ ಕ್ವಿಂಟಲ್ಗೆ 5,100 ರೂ.ಗಳಾಗಿದ್ದರೆ, 2024ರಲ್ಲಿ ಇದೇ ಅವಧಿಯಲ್ಲಿ 10,800 ರೂ. ಇದೆ. ಕಳೆದ ವರ್ಷ ಬೆಳ್ಳುಳ್ಳಿ ಉತ್ಪಾದಕ ರೈತರು 575.82 ಕೋಟಿ ಗಳಿಸಿದ್ದರೆ, ಈ ವರ್ಷ 1110.83 ಕೋಟಿ ರೂ. ಗಳಿಸಿದ್ದಾರೆ.
''2023ರಲ್ಲಿ ಕ್ವಿಂಟಲ್ ಬೆಳ್ಳುಳ್ಳಿಗೆ 9,800 ರೂ. ಇತ್ತು. ಈ ವರ್ಷ ಕ್ವಿಂಟಾಲ್ ಬೆಳ್ಳುಳ್ಳಿಯನ್ನು 13,500 ರೂ. ದರದಲ್ಲಿ ಮಾರಾಟ ಮಾಡಿದ್ದೇನೆ'' ಎಂದು ಖೇದರ್‌ಸೂಲ್‌ಪುರ ಸಮೀಪದ ಚಂದಿಂದ ಗ್ರಾಮದ ನಿವಾಸಿ ಸುರೇಂದ್ರ ಮೇಘವಾಲ್ ಹೇಳಿದ್ದಾರೆ.
ಒಂದು ಬೆಳ್ಳುಳ್ಳಿ ಬೆಳೆ ವಿಫಲವಾಗಿರುವುದು ಮತ್ತು ಇನ್ನೊಂದು ಬೆಳೆ ಕಟಾವು ವಿಳಂಬವಾಗುತ್ತಿರುವುದು ಕಳೆದ ವರ್ಷ ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿತ್ತು. ಖಾರಿಫ್ ಮತ್ತು ರಬಿ ಋತುಗಳಲ್ಲಿ ಬೆಳ್ಳುಳ್ಳಿಯನ್ನು ಬೆಳೆಯಲಾಗುತ್ತದೆ. ಛತ್ತೀಸ್‌ಗಢ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ರಾಜಸ್ಥಾನದ ರೈತರು ಖಾರಿಫ್ ಋತುವಿನಲ್ಲಿ ಬೆಳೆಯುತ್ತಾರೆ. ಬಿಹಾರ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಬೆಳ್ಳುಳ್ಳಿ ಬೆಳೆಗಳನ್ನು ರಬಿ ಋತುವಿನಲ್ಲಿ ಬೆಳೆಯುತ್ತಾರೆ.
ಮಧ್ಯಪ್ರದೇಶವು ದೇಶದ ಅತಿದೊಡ್ಡ ಬೆಳ್ಳುಳ್ಳಿ ಬೆಳೆ ಉತ್ಪಾದಕ ರಾಜ್ಯವಾಗಿದೆ. ಈ ರಾಜ್ಯದಲ್ಲಿ 2023ರಲ್ಲಿ ಬೆಳ್ಳುಳ್ಳಿಯನ್ನು ಬೆಳೆಯುವುದನ್ನು ಮುಂದೂಡಲಾಗಿತ್ತು. ಹಾಗಾಗಿ ನವೆಂಬರ್ ಅಂತ್ಯದ ವೇಳೆಗೆ ಬೆಳೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಜನವರಿ 2024ರ ವೇಳೆಗೆ ಬೆಳ್ಳುಳ್ಳಿಯ ಮಾರುಕಟ್ಟೆಯ ಪೂರೈಕೆಯು ಸಾಮಾನ್ಯವಾಗುತ್ತದೆ ಎಂದು ವಿಶ್ಲೇಷಕರು ಊಹಿಸಿದ್ದರು.
ಇದನ್ನೂ ಓದಿ: ಬಯಲು ಸೀಮೆಯಲ್ಲಿ 'ಅರೇಬಿಕ್' ತಳಿಯ ಕಾಫಿ ಬೆಳೆ: ಹವಾಮಾನವನ್ನೇ ಮೀರಿ ಯಶಸ್ಸು ಕಂಡ ರೈತ ಕುಟುಂಬ! - Arabic coffee breed