ETV Bharat / business

ಸ್ಥಿರ ಠೇವಣಿಗಳ ಮೇಲೆ ಸಿಗುತ್ತಿದೆ ಹೆಚ್ಚಿನ ಬಡ್ಡಿ: ನಿಮ್ಮ ಹಣ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ? ಇಲ್ಲಿವೆ ಕೆಲ ಟಿಪ್ಸ್​! - Fixed Deposit

Fixed deposit: ಕಳೆದ ಕೆಲವು ವರ್ಷಗಳಿಂದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳು ಹೆಚ್ಚುತ್ತಿವೆ. ಹೆಚ್ಚಿನ ಬ್ಯಾಂಕುಗಳು 7.15-7.25 ಪ್ರತಿಶತದಷ್ಟು ಬಡ್ಡಿಯನ್ನು ನೀಡುತ್ತವೆ. ಹಿರಿಯ ನಾಗರಿಕರಿಗೆ ಇದರ ಮೇಲೆ ಅರ್ಧದಷ್ಟು ಹೆಚ್ಚು ಇರುತ್ತದೆ. ಮತ್ತೊಂದೆಡೆ ವಿಶೇಷ ಅವಧಿ ಠೇವಣಿಗಳನ್ನೂ ಪರಿಚಯಿಸಲಾಗುತ್ತಿದೆ. ಈ ಹಿಂದೆ ಕಡಿಮೆ ಬಡ್ಡಿ ಠೇವಣಿ ಇಟ್ಟಿದ್ದವರು ಮೆಚ್ಯೂರಿಟಿ ಅಥವಾ ಮಧ್ಯಂತರ ನಂತರ ಅದನ್ನು ರದ್ದುಪಡಿಸಿ ಹೊಸ ಠೇವಣಿಗಳಿಗೆ ಬದಲಾಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ನೋಡೋಣ ಬನ್ನಿ..

INTEREST RELATED INFORMATION  FIXED DEPOSIT DETAILS IN KANNADA  FIXED DEPOSIT CALCULATOR  FIXED DEPOSIT INTEREST
ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ (ETV Bharat)
author img

By ETV Bharat Karnataka Team

Published : Jul 12, 2024, 6:58 PM IST

Fixed deposit: ರಾಷ್ಟ್ರೀಕೃತ ಬ್ಯಾಂಕ್‌ಗಳ ಜೊತೆಗೆ ಖಾಸಗಿ ಬ್ಯಾಂಕ್‌ಗಳು ಸಹ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಹಿಂದಿನದಕ್ಕೆ ಹೋಲಿಸಿದರೆ, ಪರ್ಯಾಯ ಹೂಡಿಕೆಗಳು ಮತ್ತು ಹೊಸ ಸುರಕ್ಷಿತ ಯೋಜನೆಗಳು ಹೂಡಿಕೆದಾರರಿಗೆ ಲಭ್ಯವಿರುವುದರಿಂದ ಅನೇಕರು ಅವುಗಳತ್ತ ಒಲವು ತೋರುತ್ತಿದ್ದಾರೆ. ಮತ್ತೊಂದೆಡೆ ಠೇವಣಿದಾರರನ್ನು ಆಕರ್ಷಿಸಲು ಬ್ಯಾಂಕ್‌ಗಳು ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಮುಂದಿನ ಕೆಲವು ವರ್ಷಗಳವರೆಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬ ಸೂಚನೆಗಳ ಹಿನ್ನೆಲೆ ಠೇವಣಿದಾರರು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಹೂಡಿಕೆ ಮುನ್ನ ಎಲ್ಲಿ ಠೇವಣಿ ಇಡಬೇಕು. ಎಷ್ಟು ಇಡಬೇಕು. ಈ ಎಷ್ಟು ಸುರಕ್ಷಿತ. ಸೇಫ್​ ಬ್ಯಾಂಕ್​ಗಳು ಯಾವವು ಎಂಬ ಬಗ್ಗೆ ಪರಿಣತರಿಂದ ಮಾಹಿತಿ ಸಂಗ್ರಹಿಸಿ. ಸಂಪೂರ್ಣ ಪರಿಶೀಲನೆ ಬಳಿಕ ಸುರಕ್ಷಿತ ಬ್ಯಾಂಕ್​ಗಳಲ್ಲಿ ನಿಮ್ಮ ಹಣವನ್ನು ಠೇವಣಿ ಇಡಿ.

ಈ ಕೆಳಗಿನ ಸಲಹೆಗಳನ್ನು ಒಮ್ಮೆ ಗಮನಿಸಿ

  • ಒಂದು ದೊಡ್ಡ ಮೊತ್ತದ FD ಮಾಡುವ ಬದಲು ಅದನ್ನು ಸಣ್ಣ ಮೊತ್ತಗಳಾಗಿ ವಿಂಗಡಿಸಿ. ವಿವಿಧ ಅವಧಿಗಳ ಠೇವಣಿಗಳನ್ನು ಮಾಡಿ. ಕನಿಷ್ಠ ಮೂರು ಪ್ರತ್ಯೇಕ FD ಗಳು ಮಾಡುವುದು ಸೂಕ್ತ.
  • ಉದಾಹರಣೆಗೆ ವಿಶೇಷ ಅವಧಿಯ ಠೇವಣಿಗಳು ಅಂದರೆ 400 ದಿನಗಳು, 444 ದಿನಗಳಿಗೆ ಎರಡು ಅಥವಾ ಮೂರು ವರ್ಷಗಳ FD ಮಾಡಬೇಕು.
  • ಅಲ್ಪಾವಧಿಗೆ ಮಾಡಿದ ಎಫ್‌ಡಿಗಳನ್ನು ಸ್ವಯಂ ನವೀಕರಿಸಬಹುದಾದ ವ್ಯವಸ್ಥೆ ಮಾಡಬೇಕು. ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದರೆ, ಅವುಗಳನ್ನು ರದ್ದುಗೊಳಿಸಬಹುದು ಮತ್ತು ಹೊಸ ಠೇವಣಿ ಮಾಡಬಹುದಾಗಿದೆ.
  • ಸದ್ಯದ ಪರಿಸ್ಥಿತಿಯಲ್ಲಿ ಮಧ್ಯಮ ಅವಧಿಗೆ ಠೇವಣಿ ಇಡುವುದು ಉತ್ತಮ. ಎರಡರಿಂದ ನಾಲ್ಕು ವರ್ಷಗಳ ಠೇವಣಿಗಳ ಮೇಲೆ ಬ್ಯಾಂಕುಗಳು ಸ್ವಲ್ಪ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ.
  • ಅನೇಕ ಠೇವಣಿದಾರರು ತಮ್ಮ ಹಳೆಯ ಎಫ್‌ಡಿಗಳನ್ನು ರದ್ದುಗೊಳಿಸುತ್ತಿದ್ದಾರೆ. ಹೆಚ್ಚಿನ ಬಡ್ಡಿಯನ್ನು ಗಳಿಸುವ ಠೇವಣಿಗಳಲ್ಲಿ ಹಣ ಹೂಡಲು ನಿರೀಕ್ಷಿಸಲಾಗಿದೆ. ಇದರಿಂದ ಅವರ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ರದ್ದುಗೊಳಿಸಿದ ತಕ್ಷಣ, ಮರು-ಠೇವಣಿ ಮಾಡಲು ಸಲಹೆ ನೀಡಲಾಗುತ್ತದೆ. ಆಲಸ್ಯ ಮಾಡಿದ್ರೆ ನಿಮ್ಮ ಹಣ ಖರ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಎಫ್‌ಡಿಗಳ ಮಧ್ಯಾವಧಿಯ ರದ್ದತಿ ಶುಲ್ಕವನ್ನು ಒಳಗೊಂಡಿರುತ್ತದೆ. ಇವುಗಳನ್ನು ಮೀರಿ ಲಾಭ ಬಂದರೆ ಮಾತ್ರ ರದ್ದು ಮಾಡಬಹುದು.
  • ಸ್ಥಿರ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯನ್ನು ವೈಯಕ್ತಿಕ ಆದಾಯದಲ್ಲಿ ಸೇರಿಸಲಾಗುತ್ತದೆ ಮತ್ತು ಅನ್ವಯವಾಗುವ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆಗೆ ಒಳಪಟ್ಟಿರುತ್ತದೆ. ಉನ್ನತ ಶ್ರೇಣಿಯಲ್ಲಿರುವವರು ಇದನ್ನು ಗಮನಿಸಬೇಕು.

ಓದಿ: ಸ್ಟೆಪ್-ಅಪ್ Vs ಸ್ಟೆಪ್-ಡೌನ್‌ ಹೋಮ್ ಲೋನ್: ಇವುಗಳಲ್ಲಿ ಯಾವುದು ಅತ್ಯುತ್ತಮ ಆಯ್ಕೆ? - Step Up Home Loan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.