ಮುಂಬೈ : ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ-50 ಶುಕ್ರವಾರದ ವಹಿವಾಟಿನಲ್ಲಿ ಸಮತಟ್ಟಾಗಿ ಕೊನೆಗೊಂಡಿವೆ. ಮಾಹಿತಿ ತಂತ್ರಜ್ಞಾನ (ಐಟಿ), ಬ್ಯಾಂಕ್, ಲೋಹ ಮತ್ತು ತೈಲ ಮತ್ತು ಅನಿಲ ಷೇರುಗಳ ಮಾರಾಟದಿಂದ ಮಾರುಕಟ್ಟೆಗಳು ಅಲ್ಪ ಇಳಿಕೆಯಾದವು.
ಸಕಾರಾತ್ಮಕ ಜಾಗತಿಕ ಸೂಚನೆಗಳ ನಡುವೆ ಬೆಂಚ್ ಮಾರ್ಕ್ ಸೂಚ್ಯಂಕಗಳು ಶುಕ್ರವಾರದ ಅಧಿವೇಶನದಲ್ಲಿ ಸಣ್ಣ ಲಾಭದೊಂದಿಗೆ ಪ್ರಾರಂಭವಾದವು. ನಿಫ್ಟಿ-50 ಸೂಚ್ಯಂಕವು ಸತತ ಐದನೇ ದಿನವೂ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಜಾಗತಿಕ ಈಕ್ವಿಟಿ ರ್ಯಾಲಿಯ ಮಧ್ಯೆ ಐಟಿ ಮತ್ತು ಬ್ಯಾಂಕ್ ಷೇರುಗಳ ಏರಿಕೆಯಿಂದ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ-50 ಉತ್ತೇಜಿಸಲ್ಪಟ್ಟಿದ್ದರೂ, ಲಾಭದ ಬುಕಿಂಗ್ ನಡುವೆ ಅದು ಫ್ಲಾಟ್ ಆಗಿ ಕೊನೆಗೊಂಡಿತು.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 15.44 ಪಾಯಿಂಟ್ಸ್ ಅಥವಾ ಶೇ 0.02 ರಷ್ಟು ಕುಸಿದು 73,142.80 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 4.75 ಪಾಯಿಂಟ್ಸ್ ಅಥವಾ ಶೇ 0.02 ರಷ್ಟು ಕುಸಿದು 22,212.70 ಮಟ್ಟದಲ್ಲಿ ಕೊನೆಗೊಂಡಿತು. ವಿಶಾಲ ಮಾರುಕಟ್ಟೆಯಲ್ಲಿ ನಿಫ್ಟಿ ಮಿಡ್ ಕ್ಯಾಪ್-100 ಶೇಕಡಾ 0.31 ರಷ್ಟು ಏರಿಕೆ ಕಂಡರೆ, ನಿಫ್ಟಿ ಸ್ಮಾಲ್ ಕ್ಯಾಪ್-100 ಶೇಕಡಾ 0.38 ರಷ್ಟು ಹೆಚ್ಚಾಗಿದೆ.
ನಿಫ್ಟಿ-50 ಸೂಚ್ಯಂಕದಲ್ಲಿ 20 ಷೇರುಗಳು ಏರಿಕೆಯಲ್ಲಿ ಕೊನೆಗೊಂಡರೆ, ಉಳಿದ 30 ಷೇರುಗಳು ಇಳಿಕೆಯಲ್ಲಿ ಕೊನೆಗೊಂಡವು. ಬಜಾಜ್ ಫಿನ್ ಸರ್ವ್ ಲಿಮಿಟೆಡ್ (ಶೇ 1.47), ಎಸ್ ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಶೇ 1.35), ಎಚ್ ಡಿಎಫ್ ಸಿ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಶೇ 1.07), ಎಲ್ ಟಿಐ ಮೈಂಡ್ ಟ್ರೀ ಲಿಮಿಟೆಡ್ (ಶೇ 0.97) ಮತ್ತು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ (ಶೇ 0.96) ಷೇರುಗಳು ಏರಿಕೆ ಕಂಡಿವೆ.
ವಲಯ ಸೂಚ್ಯಂಕಗಳ ಪೈಕಿ, ನಿಫ್ಟಿ ಬ್ಯಾಂಕ್ (ಶೇ 0.23 ಕುಸಿತ), ನಿಫ್ಟಿ ಎಫ್ಎಂಸಿ (ಶೇ 0.15 ಕುಸಿತ), ನಿಫ್ಟಿ ಐಟಿ (0.22% ಕುಸಿತ), ನಿಫ್ಟಿ ಮೆಟಲ್ (0.27%), ನಿಫ್ಟಿ ಪಿಎಸ್ ಯು ಬ್ಯಾಂಕ್ (1.15% ಕುಸಿತ) ಮತ್ತು ನಿಫ್ಟಿ ಆಯಿಲ್ & ಗ್ಯಾಸ್ (0.43% ಕುಸಿತ) ಇಳಿಕೆಯಲ್ಲಿ ಕೊನೆಗೊಂಡವು. ಮತ್ತೊಂದೆಡೆ, ನಿಫ್ಟಿ ಆಟೋ (0.18%), ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ (0.28%), ನಿಫ್ಟಿ ಮೀಡಿಯಾ (1.36%), ನಿಫ್ಟಿ ಫಾರ್ಮಾ (0.42%), ನಿಫ್ಟಿ ರಿಯಾಲ್ಟಿ (1%) ಮತ್ತು ನಿಫ್ಟಿ ಕನ್ಸೂಮರ್ ಡ್ಯೂರೇಬಲ್ಸ್ (0.60%) ಏರಿಕೆಯಲ್ಲಿ ಕೊನೆಗೊಂಡವು.
ಇದನ್ನೂ ಓದಿ : ಡಿಸೆಂಬರ್ನಲ್ಲಿ 13 ಲಕ್ಷ ಚಂದಾದಾರರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ