ETV Bharat / business

ಬಿಟಿ ಹತ್ತಿಯಿಂದ ಹೆಚ್ಚಿನ ಇಳುವರಿ, ರೈತರ ಆದಾಯವೂ ಹೆಚ್ಚಳ: ಲೋಕಸಭೆಗೆ ಕೇಂದ್ರದ ಮಾಹಿತಿ - Bt cotton adoption - BT COTTON ADOPTION

ಬಿಟಿ ಹತ್ತಿಯಿಂದ ರೈತರ ಆದಾಯ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.

ಬಿಟಿ ಹತ್ತಿ
ಬಿಟಿ ಹತ್ತಿ (IANS)
author img

By ETV Bharat Karnataka Team

Published : Aug 7, 2024, 12:46 PM IST

ನವದೆಹಲಿ : ಬಿಟಿ ಹತ್ತಿಯ ಬಿತ್ತನೆಯಿಂದ ಇಳುವರಿಯು ಎಕರೆಗೆ 3 ರಿಂದ 4 ಕ್ಷಿಂಟಲ್​ಗಳಷ್ಟು ಹೆಚ್ಚಾಗಿದ್ದು, ಆ ಮೂಲಕ ರೈತರ ಆದಾಯವೂ ಹೆಚ್ಚಾಗಿದೆ ಹಾಗೂ ಕಾಯಿಕೊರಕ ಹುಳುವಿನ ಬಾಧೆಯ ತಡೆಗೆ ಕೀಟನಾಶಕಗಳ ವೆಚ್ಚ ಕಡಿಮೆಯಾಗಿದೆ ಎಂದು ಐಸಿಎಆರ್-ಸಿಐಸಿಆರ್ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ರಾಮನಾಥ್ ಠಾಕೂರ್ ಲೋಕಸಭೆಗೆ ಮಾಹಿತಿ ನೀಡಿದರು.

ಸೂಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿಟಿ ಹತ್ತಿಯ ಪ್ರಸ್ತುತ ನಿವ್ವಳ ಆದಾಯ ಪ್ರತಿ ಹೆಕ್ಟೇರ್ ಗೆ 25,000 ರೂ ಎಂದು ಅಂದಾಜಿಸಲಾಗಿದೆ. ಬಿಟಿ ಹತ್ತಿಯನ್ನು ರೈತರು ವ್ಯಾಪಕವಾಗಿ ಅಳವಡಿಸಿಕೊಂಡಿದ್ದು, ಪ್ರಸ್ತುತ ಹತ್ತಿ ಕೃಷಿಯ ಶೇಕಡಾ 96 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯಲಾಗುತ್ತಿದೆ ಎಂದು ಅವರು ತಿಳಿಸಿದರು.

ನಾಗ್ಪುರದ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) - ಸೆಂಟ್ರಲ್ ಇನ್ ಸ್ಟಿಟ್ಯೂಟ್ ಫಾರ್ ಕಾಟನ್ ರಿಸರ್ಚ್ (ಸಿಐಸಿಆರ್) 2012-13 ಮತ್ತು 2013-14ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಬಿಟಿ ಹತ್ತಿಯ ಬಿತ್ತನೆಯ ಫಲಿತಾಂಶಗಳ ಮೌಲ್ಯಮಾಪನಕ್ಕಾಗಿ ಅಧ್ಯಯನ ನಡೆಸಿದೆ. ಅಲ್ಲದೇ ಬಿಟಿ ಹತ್ತಿಯ ಬಿತ್ತನೆಯಿಂದ ಮಣ್ಣಿನ ಮೇಲಾಗುವ ಪರಿಣಾಮಗಳ ಬಗ್ಗೆಯೂ ಐಸಿಎಆರ್ - ಸಿಐಸಿಆರ್ ಅಧ್ಯಯನ ಮಾಡಿದೆ.

ಸಮೀಕ್ಷೆಯ ಅವಧಿಯಲ್ಲಿ, ಹತ್ತಿಗೆ ಕಾಯಿಕೊರಕ ಕೀಟದ ಬಾಧೆ ತೀವ್ರವಾಗಿ ಕಡಿಮೆಯಾಗಿರುವುದು ಕಂಡು ಬಂದಿದ್ದು, ಕೀಟನಾಶಕಗಳ ಬಳಕೆಯ ಸಂಖ್ಯೆ ಎಂಟರಿಂದ ನಾಲ್ಕಕ್ಕೆ ಇಳಿಕೆಯಾಗಿದೆ. ಇದಲ್ಲದೆ, ಬಿಟಿ ಹತ್ತಿಯ ಬಿತ್ತನೆಯಿಂದ ಮಣ್ಣಿನ ಪೋಷಕಾಂಶಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಿಲ್ಲ ಎಂಬುದು ಐಸಿಎಆರ್ - ಸಿಐಸಿಆರ್ ಅಧ್ಯಯನದಲ್ಲಿ ತಿಳಿದು ಬಂದಿದೆ.

ಬಿಟಿ ಹತ್ತಿಯು ದೇಶದಲ್ಲಿ ವಾಣಿಜ್ಯ ಕೃಷಿಗಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜೆನೆಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (ಜಿಇಎಸಿ)ಯು 2002 ರಲ್ಲಿ ಅನುಮೋದಿಸಿದ ಏಕೈಕ ಜೆನೆಟಿಕ್ ಮಾರ್ಪಡಿಸಿದ (ಜಿಎಂ) ಹತ್ತಿ ಬೆಳೆಯಾಗಿದೆ ಎಂದು ಸಚಿವರು ಹೇಳಿದರು.

2023-24ನೇ ಸಾಲಿನಲ್ಲಿ ದೇಶದ 11 ಹತ್ತಿ ಉತ್ಪಾದಿಸುವ ರಾಜ್ಯಗಳ 129.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿಯನ್ನು ಬೆಳೆಯಲಾಗಿದೆ. ಈ ಸಾಲಿನಲ್ಲಿ ಬಿಟಿ ಹತ್ತಿಯ ಒಟ್ಟು ಉತ್ಪಾದನೆ 336.6 ಲಕ್ಷ ಬೇಲ್ ಗಳಾಗಿದ್ದು, ಇಳುವರಿಯನ್ನು ಪ್ರತಿ ಹೆಕ್ಟೇರ್​ಗೆ 443 ಕೆಜಿ ಎಂದು ಅಂದಾಜಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಅತ್ಯಧಿಕ 41.82 ಲಕ್ಷ ಹೆಕ್ಟೇರ್​ನಲ್ಲಿ ಬಿಟಿ ಹತ್ತಿ ಬೆಳೆಯಲಾಗುತ್ತಿದ್ದು, ಗುಜರಾತ್ 24.84 ಲಕ್ಷ ಹೆಕ್ಟೇರ್​ನೊಂದಿಗೆ ಎರಡನೇ ಸ್ಥಾನದಲ್ಲಿದೆ. ತೆಲಂಗಾಣದ 19.73 ಲಕ್ಷ ಹೆಕ್ಟೇರ್ ಮತ್ತು ಕರ್ನಾಟಕದ 9.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯಲಾಗಿದೆ. ಆಂಧ್ರಪ್ರದೇಶದಲ್ಲಿ 2022-23ರಲ್ಲಿ 7.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯಲಾಗಿದ್ದು, 4,73,345 ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ಭಾರ್ತಿ ಏರ್​ಟೆಲ್​ ನಿವ್ವಳ ಲಾಭ 4,160 ಕೋಟಿ ರೂ.ಗೆ ಏರಿಕೆ: 8 ಲಕ್ಷ ಹೊಸ ಚಂದಾದಾರರ ಸೇರ್ಪಡೆ - Bharti Airtel Net Profit

ETV Bharat Logo

Copyright © 2025 Ushodaya Enterprises Pvt. Ltd., All Rights Reserved.