ನವದೆಹಲಿ: ಭಾರತದ ಯುವಜನತೆಯ ಬೇಡಿಕೆ ಅನುಸಾರ ಅತ್ಯುತ್ತಮ ತಂತ್ರಜ್ಞಾನದ ಮೂಲಕ ಸಂಗೀತದ ಅನುಭವ ನೀಡುವ ಮೂಲಕ ಎಲೆಕ್ಟ್ರಾನಿಕ್ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಸ್ವದೇಶಿ ಸಂಸ್ಥೆ ಬೋಟ್ ಆಗಿದೆ. ಈ ಸಂಸ್ಥೆಯ ಆಡಿಯೋ ಉತ್ಪನ್ನಗಳ ಮೇಲೆ ಬಾಲಿವುಡ್ ನಟ ರಣವೀರ್ ಸಿಂಗ್ ಹೂಡಿಕೆ ನಡೆಸಿದ್ದಾರೆ. ಸಂಸ್ಥೆಯಲ್ಲಿ ಭಾರೀ ಮೊತ್ತದ ಹೂಡಿಕೆ ಮಾಡುವ ರಣವೀರ್ ಸಿಂಗ್ ಕಂಪನಿಯ ಪ್ರಮುಖ ಷೇರುದಾರರಾಗಿದ್ದಾರೆ. ರಣವೀರ್ ಸಿಂಗ್ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಮೂಲಕ ಬೋಟ್ ಕುಟುಂಬವನ್ನು ಸೇರಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಆದರೆ, ನಟನ ಹೂಡಿಕೆ ಎಷ್ಟಿದೆ ಎಂಬ ಮಾಹಿತಿಯನ್ನು ನೀಡಿಲ್ಲ.
ಈ ಕುರಿತು ತಿಳಿಸಿರುವ ಬೋಟ್, ರಣವೀರ್ ಸಿಂಗ್ ಹೂಡಿಕೆಯು ಬ್ರಾಂಡ್ ವಿಷನ್ ಮತ್ತು ಭವಿಷ್ಯದಲ್ಲಿ ನಮ್ಮ ಸಂಸ್ಥೆಯು ಭಾರತ ಮತ್ತು ಜಗತ್ತಿನಲ್ಲಿ ಬೆಳವಣಿಗೆಗೆ ಹೊಸ ಉತ್ತೇಜನವನ್ನು ನೀಡಿದೆ ಎಂದಿದೆ.
ಬೋಟ್ನ ಉಪ ಬ್ರಾಂಡ್ 'ನಿರ್ವಾಣ ಸರಣಿ'ಯಲ್ಲಿ ಪ್ರಚಾರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರವಹಿಸಲಿದ್ದಾರೆ. ಬೋಟ್ನ ಈ ಉಪ ಬ್ರಾಂಡ್ನ ಪ್ರೀಮಿಯಂ ಮತ್ತು ಉನ್ನತ ಆಡಿಯೋ ಉತ್ಪನ್ನದ ಮೂಲಕ ಗ್ರಾಹಕರಿಗೆ ಅದ್ಭುತ ಅನುಭವ ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇನ್ನು ಸಂಸ್ಥೆಯಲ್ಲಿ ಹೂಡಿಕೆ ಕುರಿತು ಮಾತನಾಡಿರುವ ನಟ ರಣವೀರ್ ಸಿಂಗ್, ಬೋಟ್ನ ಸೌಂಡ್ ಗುಣಮಟ್ಟ ಮತ್ತು ಯುವ ಜನತೆ ಸಂಪರ್ಕದ ಬದ್ಧತೆಯು ನನ್ನೊಂದಿಗೆ ಪ್ರತಿಧ್ವನಿಸುತ್ತದೆ. ಅವರ ಈ ಪ್ರಯಾಣದಲ್ಲಿ ನನ್ನ ಹೂಡಿಕೆಯು ಹಣದ ವಹಿವಾಟಿನ ನಿರ್ಧಾರಕ್ಕಿಂತ ಹೆಚ್ಚಿನದಾಗಿದೆ. ಭಾರತದಲ್ಲಿ ಈ ಹಿಂದೆ ಕಂಡರಿಯದ ಸೌಂಡ್ ಅಂಪ್ಲಿಫೈಗೆ ಸಿದ್ಧರಾಗಿ ಎನ್ನುವ ಮೂಲಕ ಪೋಸ್ಟ್ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಲಾಸ್ಟ್ ಇನ್ ನಿರ್ವಾಣ' ಪ್ರಚಾರದಲ್ಲಿ ಗ್ರಾಹಕರು ಅದ್ಭುತ ಫೀಚರ್ಗಳ ವಿವಿಧ ಬಗೆಯ ಅನುಭವ ಪಡೆಬಹುದಾಗಿದೆ. 120 ಗಂಟೆಗಳ ಬ್ಯಾಟರಿ ಲೈಫ್ಅನ್ನು ಇದು ಹೊಂದಿದ್ದು, ಬೋಟ್ ಸಿಗ್ನೇಚರ್ ಸೌಂಡ್ ಮತ್ತು ಅತ್ಯಾಧುನಿಕ ಸಕ್ರಿಯ ಶಬ್ಧ ರದ್ದತಿ ತಂತ್ರಜ್ಞಾನ ಇದರಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.
ಬೋಟ್ ನಿರ್ವಾಣ: ಕೈಗೆಟುಕುವ ದರ ಮತ್ತು ಅಧಿಕ ವೈಶಿಷ್ಟ್ಯಗಳ ಮಿಡ್ ರೇಂಜ್ ಇಯರ್ ಫೋನ್ಗಳ ಸೆಗ್ಮೆಂಟ್ನಲ್ಲಿ ಬೋಟ್ ಈ ನಿರ್ವಾಣ ಅನ್ನು ಹೊರ ತರುತ್ತಿದೆ. ಭಾರತದ ಯುವಜನತೆಯ ಬೇಡಿಕೆಗೆ ಅನುಗುಣವಾಗಿ ಇದರ ಸ್ಟೈಲ್, ಫೀಚರ್ಗಳನ್ನು ನಿರ್ಮಾಣ ಮಾಡಲಾಗಿದೆ. ಬೋಟ್ ಇಯರ್ಬಡ್ಸ್ ಮತ್ತು ಟಿಡಬ್ಲ್ಯೂಎಸ್ (ವೈರ್ಲೆಸ್ ಸ್ಟಿರಿಯೋ) ಇಯರ್ಫೋನ್ 120 ಗಂಟೆಗಳ ಕೇಳುವಿಕೆ ಸಾಮರ್ಥ್ಯವನ್ನು ಹೊಂದಿದೆ. (ಐಎಎನ್ಎಸ್)
ಇದನ್ನೂ ಓದಿ: ಪೂರ್ಣಕಾಲಿಕ ನೌಕರರ ನೇಮಕಾತಿ ಕುಸಿತ; ಹೊರಗುತ್ತಿಗೆ ಸೇವೆಗೆ ಹೆಚ್ಚಿದ ಬೇಡಿಕೆ