ETV Bharat / business

2025 ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ 7ಕ್ಕೆ ಹೆಚ್ಚಿಸಿದ ಏಷ್ಯನ್​ ಡೆವಲಪ್​​ಮೆಂಟ್​ ಬ್ಯಾಂಕ್​ - GDP growth forecast - GDP GROWTH FORECAST

ಭಾರತದ ಜಿಡಿಪಿ 2024- 25ನೇ ಸಾಲಿನಲ್ಲಿ ಶೇ 7ರಷ್ಟು ಇರಲಿದೆ ಎಂದು ಏಷ್ಯನ್​ ಡೆವಲಪ್​ಮೆಂಟ್​ ಬ್ಯಾಂಕ್​ ಅಂದಾಜಿಸಿದೆ. ಈ ಮೊದಲು ಅದು 6.7 ರಷ್ಟು ಇರಲಿದೆ ಎಂದು ಹೇಳಿತ್ತು.

2025 ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ 7ಕ್ಕೆ ಹೆಚ್ಚಿಸಿದ ಏಷ್ಯನ್​ ಡೆವಲಪ್​​ಮೆಂಟ್​ ಬ್ಯಾಂಕ್​

author img

By PTI

Published : Apr 11, 2024, 10:02 AM IST

ನವದೆಹಲಿ: ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಎಡಿಬಿ, 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯನ್ನ ಈ ಹಿಂದಿನ ಶೇಕಡಾ 6.7 ರಿಂದ ಶೇಕಡಾ ಶೇ 7ಕ್ಕೆ ಏರಿಸಿದೆ, ಸಾರ್ವಜನಿಕ ಮತ್ತು ಖಾಸಗಿ ವಲಯದ ಹೂಡಿಕೆಯಲ್ಲಿ ಕಂಡು ಬಂದ ಬೇಡಿಕೆಯಿಂದಾಗಿ ಸದೃಢ ಆರ್ಥಿಕ ಬೆಳವಣಿಗೆ ಉಂಟಾಗಿದೆ ಎಂದು ಎಡಿಬಿ ಹೇಳಿದೆ.

2024-25ರ ಬೆಳವಣಿಗೆಯ ಅಂದಾಜಿನ ಪ್ರಕಾರ, 2022-23ರ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ದರ 7.6 ಪ್ರತಿ ಶತಕ್ಕಿಂತ ಕಡಿಮೆ ಇತ್ತು. ಬಲವಾದ ಹೂಡಿಕೆಯು 2022 - 23ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಗೆ ಕಾರಣವಾಗಿದೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ಎಡಿಬಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತೀಯ ಆರ್ಥಿಕತೆಯು 2024-25 ರ ಆರ್ಥಿಕ ವರ್ಷದಲ್ಲಿ ಶೇಕಡಾ 6.7 ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜು ಮಾಡಿತ್ತು. ಇದೀಗ ಈ ಅಂದಾಜನ್ನು ಏಷ್ಯನ್​ ಡೆವಲಪ್​ಮೆಂಟ್ ಬ್ಯಾಂಕ್​ ಪರಿಷ್ಕರಿಸಿದೆ.

2023 ರ ಆರ್ಥಿಕ ವರ್ಷದಲ್ಲಿ ಉತ್ಪಾದನೆ ಮತ್ತು ಸೇವೆಗಳಲ್ಲಿ ಬಲವಾದ ಆವೇಗ ಕಂಡು ಬಂದಿದ್ದರಿಂದ ಭಾರತದ ಆರ್ಥಿಕತೆಯು ದೃಢವಾಗಿ ಬೆಳವಣಿಗೆ ಕಂಡಿದೆ. ಬಲವಾದ ಬೇಡಿಕೆ ಹಾಗೂ ಹಣದುಬ್ಬರದ ಇಳಿಮುಖ ಪ್ರವೃತ್ತಿಯಿಂದಾಗಿ ಆರ್ಥಿಕತೆ ಮತ್ತಷ್ಟು ಚೇತರಿಕೆ ಕಂಡಿದೆ. ಶುಕ್ರವಾರ ಬಿಡುಗಡೆಯಾದ ಏಷ್ಯನ್ ಡೆವಲಪ್‌ಮೆಂಟ್ ಔಟ್‌ಲುಕ್‌ನ ಏಪ್ರಿಲ್ ಆವೃತ್ತಿಯಲ್ಲಿ ಹೇಳಲಾಗಿದೆ.

2024 ಮತ್ತು 2025ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಮಧ್ಯಮವಾಗಿದ್ದರೂ ದೃಢವಾದ ಬೆಳವಣಿಗೆಯನ್ನು ತೋರಿಸಿದೆ ಎಂದು ಅದು ಹೇಳಿದೆ. 2025-26 ರ ಆರ್ಥಿಕ ವರ್ಷದಲ್ಲಿ, ಎಡಿಬಿ ಭಾರತದ ಬೆಳವಣಿಗೆಯನ್ನು ಶೇಕಡಾ 7.2 ಎಂದು ಅಂದಾಜಿಸಿದೆ. ಪ್ರಮುಖ ಮುಂದುವರಿದ ಆರ್ಥಿಕತೆಗಳಲ್ಲಿನ ಬೆಳವಣಿಗೆಯು ನಿಧಾನಗತಿಯಲ್ಲಿ ಸಾಗಿರುವುದರಿಂದ ಈ ಹಣಕಾಸು ವರ್ಷದಲ್ಲಿ ರಫ್ತುಗಳು ತುಲನಾತ್ಮಕವಾಗಿ ಯಥಾಸ್ಥಿತಿಯಲ್ಲೇ ಮುಂದುವರೆಯುವ ಸಾಧ್ಯತೆ ಇದೆ ಎಂದು ADB ಹೇಳಿದೆ.

ಹಣದುಬ್ಬರ ಕಡಿಮೆಯಾದಂತೆ ವಿತ್ತೀಯ ನೀತಿಯ ಬೆಳವಣಿಗೆಗೆ ಇದು ಸಹಕಾರಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಧ್ಯಮಾವಧಿಯಲ್ಲಿ ರಫ್ತುಗಳನ್ನು ಹೆಚ್ಚಿಸಲು ಭಾರತವು ಜಾಗತಿಕ ಮೌಲ್ಯ ಸರಪಳಿಗಳಿಗೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿದೆ ಎಂದು ಎಡಿಬಿ ವರದಿಯಲ್ಲಿ ಹೇಳಲಾಗಿದೆ.

ಭಾರತೀಯ ರಿಸರ್ವ್​ ಬ್ಯಾಂಕ್​ ಸಹ ದೇಶದ ಜಿಡಿಪಿ 7 ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿತ್ತು. ಹಣದುಬ್ಬರ ನಿಯಂತ್ರಣ ಹಾಗೂ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರ್​ಬಿಐ ರೆಪೋ ರೇಟ್​ನಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾ ಸ್ಥಿತಿ ಕಾಪಾಡಿಕೊಂಡಿದೆ.

ಇದನ್ನು ಓದಿ: ಸ್ವಂತ ಬಿಸ್ನೆಸ್‌ ಮಾಡಲು ಬಯಸುತ್ತಿದ್ದೀರಾ?: ನಿಮಗೆ ಸೂಕ್ತವಾದ ಲೋನ್‌ಗಳ ಬಗ್ಗೆ ತಿಳಿಯಿರಿ - Business Loans

ETV Bharat Logo

Copyright © 2024 Ushodaya Enterprises Pvt. Ltd., All Rights Reserved.