ETV Bharat / bharat

ಮೋದಿ 3.0 ಸಂಪುಟಕ್ಕೆ ಅಚ್ಚರಿಯ ಎಂಟ್ರಿ: ಯಾರು ಈ ಪಬಿತ್ರಾ ಮಾರ್ಗರಿಟಾ? - Pabitra Margherita

author img

By ETV Bharat Karnataka Team

Published : Jun 10, 2024, 3:27 PM IST

ಪ್ರಧಾನಿ ಮೋದಿ ಅವರ ಹೊಸ ಸರ್ಕಾರಕ್ಕೆ ಸಚಿವರಾಗಿ ಈಶಾನ್ಯ ರಾಜ್ಯ ಅಸ್ಸಾಂನ ಪಬಿತ್ರಾ ಮಾರ್ಗರಿಟಾ ಸೇರ್ಪಡೆಯಾಗಿದ್ದಾರೆ. ಯಾರಿವರು? ವಿಶೇಷ ವರದಿ ಓದಿ.

Pabitra Margherita
ಪಬಿತ್ರಾ ಮಾರ್ಗರಿಟಾ (ETV Bharat)

ಗುವಾಹಟಿ: ಅಸ್ಸಾಂನ ಬಿಜೆಪಿ ಸಂಸದ ಪಬಿತ್ರಾ ಮಾರ್ಗರಿಟಾ ಅವರು ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ 30 ಸಂಪುಟ​ ದರ್ಜೆ ಸಚಿವರು, ಐವರು ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ರಾಜ್ಯ ಖಾತೆ ಸಚಿವರು ಸೇರಿ ಒಟ್ಟು 24 ರಾಜ್ಯಗಳ 71 ಸಂಸದರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಈ ಪೈಕಿ ಪಬಿತ್ರಾ ಮಾರ್ಗರಿಟಾ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಶಾನ್ಯ ರಾಜ್ಯದಿಂದ ಮೂವರು ಸಂಪುಟ ಸೇರಿದ್ದು, ಈ ಪೈಕಿ ಪಬಿತ್ರಾ ಒಬ್ಬರು. ಇನ್ನುಳಿದಂತೆ ಸರ್ಬಾನಂದ ಸೋನೋವಾಲ್, ಕಿರಣ್ ರಿಜಿಜು ಸಚಿವರಾಗಿದ್ದಾರೆ.

ಸೋನೋವಾಲ್ ನಂತರ ಪಬಿತ್ರಾ ಮಾರ್ಗರಿಟಾ ಅಸ್ಸಾಂನಿಂದ ಮೋದಿ ಸಂಪುಟ ಸೇರ್ಪಡೆಗೊಂಡ ಎರಡನೇ ಅದೃಷ್ಟಶಾಲಿ. ಮೋದಿ ತಂಡದಲ್ಲಿ ಸ್ಥಾನ ಪಡೆಯಲು ಅನೇಕ ಸಂಸದರ ಸ್ಪರ್ಧೆಯ ನಡುವೆ ಮಾರ್ಗರಿಟಾ ರಾಜ್ಯ ಸಚಿವರಾಗಿ ಹೊರಹೊಮ್ಮಿದ್ದಾರೆ.

ಪಬಿತ್ರಾ ಮಾರ್ಗರಿಟಾ ರಾಜಕೀಯ ಪಯಾಣ: ಪಬಿತ್ರಾ ಮಾರ್ಗರಿಟಾ ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡ ರಾಜಕಾರಣಿ. ಅನೇಕ ಹೋರಾಟದಲ್ಲಿ ಭಾಗಿಯಾಗಿರುವ ಇವರು ಒಂದು ದಶಕದಲ್ಲಿ ರಾಜ್ಯಸಭಾ ಸಂಸದರಾಗಿ, ಕೇಂದ್ರ ಸಚಿವರೂ ಆಗಿದ್ದಾರೆ. 2014ರಲ್ಲಿ ಬಿಜೆಪಿ ಸೇರಿದ ಬಳಿಕ ಪಕ್ಷದ ಮುಖ್ಯ ವಕ್ತಾರರಾಗಿ ಗುರುತಿಸಿಕೊಂಡಿದ್ದು, 2017ರಿಂದ 2021 ರವರೆಗೆ ಜ್ಯೋತಿ ಚಿತ್ರಬನ್ ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ (ಈಗಿನ ಡಾ.ಭೂಪೇನ್ ಹಜಾರಿಕಾ ಪ್ರಾದೇಶಿಕ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ) ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.

ನವೆಂಬರ್ 2021ರಿಂದ ಮಾರ್ಚ್ 2022ರವರೆಗೆ ರಾಜ್ಯ ಮಟ್ಟದ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಸೋಶಿಯಲ್ ಮೀಡಿಯಾ ಸೆಲ್, ಅಸ್ಸಾಂ ಬಿಜೆಪಿಯ ಪ್ರಭಾರಿ ಮತ್ತು ಕಾಮ್ರೂಪ್ (ಉತ್ತರ) ಜಿಲ್ಲಾ ಬಿಜೆಪಿಯ ಜಿಲಾ ಪ್ರಭಾರಿಯಾಗಿಯೂ ಸೇವೆ ಸಲ್ಲಿಸಿದರು. ಮಾರ್ಚ್ 2022ರಲ್ಲಿ ರಾಜ್ಯಸಭೆಗೂ ಆಯ್ಕೆಯಾದರು. ಈ ಅವಧಿಯಲ್ಲಿ, ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮಾ ಅವರ ರಾಜಕೀಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾಗಿಯೂ ಕೆಲಸ ಮಾಡಿರುವ ಮಾರ್ಗರಿಟಾ ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮಾರ್ಗರಿಟಾ ಅಸ್ಸಾಂನ ಪ್ರಬಲ ಅಹೋಮ್ ಸಮುದಾಯಕ್ಕೆ ಸೇರಿದವರು. ಅಹೋಮ್ ನಾಯಕರೊಬ್ಬರು ಮೋದಿ ತಂಡದಲ್ಲಿದ್ದರೆ ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವವನ್ನು ಬಲಪಡಿಸಬಹುದೆಂಬ ಕಾರ್ಯತಂತ್ರ ಇದೆಂದು ವಿಶ್ಲೇಷಿಸಲಾಗುತ್ತಿದೆ. ಅಹೋಮ್ ಪ್ರಾಬಲ್ಯದ ಜೋರ್ಹತ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ನ ಗೌರವ್ ಗೊಗೊಯ್ ಎದುರು ಬಿಜೆಪಿ ಸೋತಿರುವುದು ಕೂಡ ಇದಕ್ಕೊಂದು ಕಾರಣ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ರಾಜಕೀಯ ಸೇರುವ ಮುನ್ನ: ಅಕ್ಟೋಬರ್ 13, 1974ರಂದು ಜನಿಸಿದ್ದ ಪಬಿತ್ರಾ ಮಾರ್ಗರಿಟಾ ಅವರ ನಿಜವಾದ ಹೆಸರು ಪಬಿತ್ರಾ ಗೊಗೊಯ್. ನಂತರ ಅವರು ತನ್ನ ಜನ್ಮಸ್ಥಳದ ಹೆಸರಾದ 'ಮಾರ್ಗೆರಿಟಾ'ವನ್ನು ಉಪನಾಮವಾಗಿ ಬಳಸಲಾರಂಭಿಸಿದರು. 2014ರಲ್ಲಿ ರಾಜಕೀಯ ಸೇರುವ ಮುನ್ನ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು. 1998ರಿಂದ 2002ರವರೆಗೆ 'ಮಾಯಾ' ಎಂಬ ಮಾಸಿಕ ಸಾಂಸ್ಕೃತಿಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. 2002ರಿಂದ 2005ರವರೆಗೆ ಅಸ್ಸಾಂನ ಮತ್ತೊಂದು ಸಾಂಸ್ಕೃತಿಕ ಮಾಸಿಕ 'ಸರೆಗಮ' ದ ಸಂಸ್ಥಾಪಕ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜಕಾರಣಿಯಾಗುವ ಮುನ್ನ ಮಾರ್ಗರಿಟಾ ಚಲನಚಿತ್ರ ನಿರ್ಮಾಣ ಮತ್ತು ವಿಡಿಯೋ ಆಲ್ಬಂ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ಅನೇಕ ಅಸ್ಸಾಮಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇದರಲ್ಲಿ ಜುಬೀನ್ ಗಾಗ್ ಅಭಿನಯದ ಸೂಪರ್‌ಹಿಟ್ ಚಿತ್ರ 'ಮೋನ್ ಜೈ' ಕೂಡ ಒಂದು. 'ಜೋನ್‌ಬೈ' ಎಂಬ ಪ್ರಸಿದ್ಧ ಅಸ್ಸಾಮಿ ವಿಡಿಯೊ ಕ್ಯಾಸೆಟ್ ಮತ್ತು ವಿಡಿಯೊ ಚಲನಚಿತ್ರ ಸರಣಿ ನಿರ್ಮಿಸಿದ್ದಾರೆ. 2007ರಲ್ಲಿ ಪ್ರಸಿದ್ಧ ಅಸ್ಸಾಮಿ ನಟಿ ಮತ್ತು ನರ್ತಕಿ ಗಾಯತ್ರಿ ಮಹಂತ ಅವರನ್ನು ವಿವಾಹವಾದರು.

ಇದನ್ನೂ ಓದಿ: ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಸಹಿ ಹಾಕಿದ ಮೊದಲ ಕಡತ ಯಾವುದು ಗೊತ್ತಾ? : ನಿಮ್ಮ ನಿಮ್ಮ ಖಾತೆಗಳಿಗೆ ಹಣ ಬಂದಿದೆಯಾ ಚೆಕ್​ ಮಾಡಿಕೊಳ್ಳಿ! - PM Modi first decision

ETV Bharat Logo

Copyright © 2024 Ushodaya Enterprises Pvt. Ltd., All Rights Reserved.