ETV Bharat / bharat

ಟಾಟಾ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಯಾರು? ಟಾಟಾ ಕುಟುಂಬದ ಪ್ರಮುಖರ ಪರಿಚಯ - SUCCESSION PLAN OF TATA GROUP

ದೇಶದ ಹೆಸರಾಂತ ಉದ್ಯಮ ದೈತ್ಯ ರತನ್ ಟಾಟಾ ನಿಧನದ ಹಿನ್ನೆಲೆಯಲ್ಲಿ 150 ಬಿಲಿಯನ್ ಡಾಲರ್‌ ಮೌಲ್ಯದ ಬೃಹತ್ ಟಾಟಾ ಗ್ರೂಪ್‌ನ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ನಡೆಯುತ್ತಿದೆ.

ratan-tata-passes-away-what-will-be-succession-plan-of-tata-group
ರತನ್​ ಟಾಟಾ (ETV Bharat)
author img

By ETV Bharat Karnataka Team

Published : Oct 10, 2024, 3:20 PM IST

ನವದೆಹಲಿ: ದೇಶದ ಬೃಹತ್ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಗ್ರೂಪ್​ನ ರತನ್​ ಟಾಟಾ ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ದೂರದೃಷ್ಟಿ, ದಾರ್ಶನಿಕತೆಯ ವ್ಯಕ್ತಿತ್ವದ ಇವರು ಸಂಸ್ಥೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದರು. ಅಷ್ಟು ಮಾತ್ರವಲ್ಲದೇ, ತಮ್ಮ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿ ಭಾರತದ ಆರ್ಥಿಕತೆಗೂ ಅಷ್ಟೇ ದೊಡ್ಡ ಮಟ್ಟದ ಕೊಡುಗೆ ನೀಡಿದವರು. 20 ವರ್ಷ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಟಾಟಾ, ನಂತರ ವಿಶ್ರಾಂತ ಜೀವನ ನಡೆಸುತ್ತಿದ್ದರು. ಇದೀಗ ನಿಧನರಾಗಿದ್ದು, ಟಾಟಾ ಸಮೂಹವನ್ನು ಮುನ್ನಡೆಸುವ ಹೊಣೆಗಾರಿಕೆ ಯಾರದ್ದು ಎಂಬ ವಿಷಯ ಚರ್ಚೆಯಾಗುತ್ತಿದೆ.

150 ಬಿಲಿಯನ್‌ ಡಾಲರ್‌ಗೂ ಹೆಚ್ಚು ಮೌಲ್ಯದ ಟಾಟಾ ಗ್ರೂಪ್​ ಉದ್ಯಮದ ಮುಂದಿನ ಉತ್ತರಾಧಿಕಾರಿ ಯಾರೆಂಬ ಕುರಿತು ಈಗಾಗಲೇ ಯೋಜನೆ ಸಿದ್ಧಗೊಂಡಿದೆ. 2017ರಲ್ಲಿ ಎನ್​.ಚಂದ್ರಶೇಖರನ್​ ಅವರು ಟಾಟಾ ಸನ್ಸ್​ನ ಅಧ್ಯಕ್ಷರಾಗಿ ನೇಮಕವಾದರು. ಟಾಟಾ ಕುಟುಂಬದ ಇತರೆ ಸದಸ್ಯರು ಕೂಡ ಸಮೂಹದ ಇತರೆ ವಿಭಾಗದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದು, ಭವಿಷ್ಯದ ನಾಯಕತ್ವದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಪೈಕಿ ಮುಖ್ಯ ವ್ಯಕ್ತಿಗಳು ಇವರು.

ನೊಯೆಲ್​ ಟಾಟಾ: ನೊಯೆಲ್​ ಟಾಟಾ ಅವರು ನವಲ್​ ಟಾಟಾ (ರತನ್​ ಟಾಟಾ ತಂದೆ) ಅವರ ಎರಡನೇ ಪತ್ನಿ ಸಿಮೊನ್​ ಡುನೊಯೆರ್​ ಅವರ ಪುತ್ರ. ಟಾಟಾ ಪರಂಪರೆಯಲ್ಲಿ ನೊಯೆಲ್​ ಟಾಟಾ ಪ್ರಮುಖ ವ್ಯಕ್ತಿ. ಇವರ ಮಕ್ಕಳಾದ ಮಾಯಾಮ ನೆವಿಲ್ಲೆ ಮತ್ತು ಲೆಹ್​ ಟಾಟಾ ಕೂಡ ಟಾಟಾ ಆಸ್ತಿಗೆ ಸಮರ್ಥ ಉತ್ತರಾಧಿಕಾರಿಯಾಗಬಲ್ಲರು.

ಮಯಾ ಟಾಟಾ: 43 ವರ್ಷದ ಮಯಾ ಟಾಟಾ ಈಗಾಗಲೇ ಟಾಟಾ ಸಮೂಹದಲ್ಲಿ ಗಮನಾರ್ಹ ಬದಲಾವಣೆಯ ಹಿಂದಿರುವ ಶಕ್ತಿ. ಬಯೇಸ್​ ಬ್ಯುಸಿನೆಸ್​ ಸ್ಕಾಲ್​ ಮತ್ತು ವರ್ವಿಕ್​ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿರುವ ಇವರು ಟಾಟಾ ಅಪರ್ಚುನಿಟಿ ಫಂಡ್​ ಮತ್ತು ಟಾಟಾ ಡಿಜಿಟಲ್​ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಟಾಟಾ ನ್ಯೂ ಆ್ಯ​ಪ್ ಪರಿಚಯಿಸುವಲ್ಲಿ ಇವರ ಪಾತ್ರ ಹಿರಿದಾಗಿತ್ತು.

ನೆವಿಲ್ಲೆ ಟಾಟಾ: 32 ವರ್ಷದ ನೆವಿಲ್ಲೆ ಟಾಟಾ ಕೂಡ ಕುಟುಂಬದ ಉದ್ಯಮದಲ್ಲಿ ಸಕ್ರಿಯರು. ಇವರು ಟೊಯೊಟಾ ಕಿರ್ಲೋಸ್ಕರ್​​ ಗ್ರೂಪ್‌ ಕುಟುಂಬದ ಮಾನ್ಸಿ ಕಿರ್ಲೋಸ್ಕರ್​ ಅವರನ್ನು ಮದುವೆಯಾಗಿದ್ದಾರೆ. ಸ್ಟಾರ್​ ಬಜಾರ್​ ಮುಖ್ಯಸ್ಥರಾಗಿರುವ ಇವರು, ಟಾಟಾ ಗ್ರೂಪ್​ನ ಭವಿಷ್ಯದ ನಾಯಕತ್ವ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.

ಲೆಹ್​ ಟಾಟಾ: 39 ವರ್ಷದ ಲೆಹ್​ ಅವರು ಟಾಟಾ ಗ್ರೂಪ್​ನ ಆತಿಥ್ಯ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಪೇನ್​ನ ಐಇ ಬ್ಯುಸಿನೆಸ್​ ಸ್ಕೂಲ್​ನಲ್ಲಿ ಪದವಿ ಪಡೆದಿದ್ದಾರೆ. ತಾಜ್​ ಹೋಟೆಲ್ಸ್​ ರೆಸಾರ್ಟ್ಸ್​​ ಮತ್ತು ಪ್ಯಾಲೇಸ್​ಗೆ ಇವರ ಕೊಡುಗೆ ಅಪಾರ.

ಇದನ್ನೂ ಓದಿ: 86ನೇ ವಯಸ್ಸಿನಲ್ಲೂ ಫಿಟ್ ಆಗಿದ್ದ ರತನ್ ಟಾಟಾ: ಸೂರ್ಯ ನಮಸ್ಕಾರ ಮಾಡುತ್ತಿದ್ದ ಕೈಗಾರಿಕೋದ್ಯಮಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.