ನವದೆಹಲಿ: ದೇಶದ ಅಭಿವೃದ್ಧಿಗೆ ಕೈಗಾರಿಕಾ ಕ್ಷೇತ್ರದ ಪಾಲು ಹೆಚ್ಚಿರುವ ಕಾರಣ ಕೇಂದ್ರ ಸರ್ಕಾರ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮದ ಅಡಿಯಲ್ಲಿ 12 ಕೈಗಾರಿಕಾ ಪಾರ್ಕ್‌ಗಳನ್ನು ಮಂಜೂರು ಮಾಡುವುದಾಗಿ ಘೋಷಿಸಿದೆ.
ಸಂಸತ್ತಿನಲ್ಲಿ ಮಂಗಳವಾರ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ 12 ಕೈಗಾರಿಕಾ ಪಾರ್ಕ್‌ಗಳನ್ನು ಮಂಜೂರು ಮಾಡಲಾಗುವುದು. ಕಾರ್ಮಿಕರಿಗೆ ಬಾಡಿಗೆ ಮನೆಗಳನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.
ಹಡಗು ಉದ್ಯಮದ ಸುಧಾರಣೆ: ಭಾರತೀಯ ಹಡಗು ಉದ್ಯಮದ ವ್ಯಾಪ್ತಿ ಮತ್ತು ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಭಾರತೀಯ ಹಡಗು ಉದ್ಯಮ ಕ್ಷೇತ್ರವನ್ನು ಸುಧಾರಿಸುವುದು ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಸಲು ಉದ್ಯಮದ ಮಾಲೀಕತ್ವ, ಗುತ್ತಿಗೆ ಮತ್ತು ಅದನ್ನು ಮುನ್ನಡೆಸುವ ಬಗ್ಗೆ ಹೆಚ್ಚಿನ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಸೀತಾರಾಮನ್ ಹೇಳಿದರು.
Union Budget 2024-25 proposes:
— Ministry of Finance (@FinMinIndia) July 23, 2024
👉 Financial sector vision and strategy document to set agenda for next 5 years
👉 Taxonomy for climate finance to increase availability of capital for climate action#Budget2024 #BudgetForViksitBharat pic.twitter.com/IeojmeanjT
ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸಲು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (DPI) ಆ್ಯಪ್ಗಳನ್ನು ಅಭಿವೃದ್ಧಿಪಡಿಸಲು ಬಜೆಟ್ ಪ್ರಸ್ತಾಪಿಸಿದೆ. ಖಾಸಗಿ ವಲಯದಿಂದ ಉತ್ಪಾದಕತೆ ಲಾಭಗಳು, ವ್ಯಾಪಾರ ಅವಕಾಶಗಳು ಮತ್ತು ನಾವೀನ್ಯತೆಗಳಿಗಾಗಿ ಜನಸಂಖ್ಯೆಗೆ ಅನುಗುಣವಾಗಿ ಡಿಪಿಐ ಅಪ್ಲಿಕೇಶನ್‌ಗಳ ಅಭಿವೃದ್ಧಿ ಅಗತ್ಯವಾಗಿದೆ ಎಂದರು.
ಉದ್ಯೋಗ ಮತ್ತು ಅಭಿವೃದ್ಧಿಗಾಗಿ ಒಂಬತ್ತು ಆದ್ಯತೆಗಳನ್ನು ಗುರುತಿಸಿದ ಹಣಕಾಸು ಸಚಿವೆ, ಕೃಷಿ, ಉದ್ಯೋಗ, ಕೌಶಲ್ಯ, ಉತ್ಪಾದನೆ, ಸೇವೆಗಳಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಒತ್ತು ನೀಡಬೇಕಿದೆ. ಫೆಬ್ರವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್ನಲ್ಲಿ ಪ್ರಸ್ತಾಪಿಸಿದಂತೆ, ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಅಭಿವೃದ್ಧಿಯು ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮಕ್ಕಳ ಹೆಸರಿನಲ್ಲೂ ಆರಂಭಿಸಬಹುದು ಪಿಂಚಣಿ ಯೋಜನೆ: ಇಲ್ಲಿದೆ ವಾತ್ಸಲ್ಯ ಸ್ಕೀಂ ಮಾಹಿತಿ - NPS VATSALYA