ಹೈದರಾಬಾದ್: ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗಲಾಟೆ ಸೃಷ್ಟಿಸಿದ್ದ. ಬಲವಂತವಾಗಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದ. ಆತನ ಈ ವರ್ತನೆಯಿಂದ ಎಲ್ಲಾ ಪ್ರಯಾಣಿಕರು ಭಯಭೀತರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಭದ್ರತಾ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಮಂಗಳವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಶಂಶಾಬಾದ್ ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಹೈದರಾಬಾದ್‌ನ ಗಾಜುಲರಾಮರಂ ನಿವಾಸಿ ಅನಿಲ್ (35) ಜಿಮ್ ತರಬೇತುದಾರನಾಗಿದ್ದಾನೆ. ಮಧ್ಯಪ್ರದೇಶದ ಉಜ್ಜಯಿನಿಗೆ ದೇವರ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನದ ಬಳಿಕ ಹಿಂದಿರುಗುವ ಪ್ರಯಾಣದಲ್ಲಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ಹಾರುವ ವೇಳೆ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಏರ್ ಲೈನ್ ಸಿಬ್ಬಂದಿ ಆತನನ್ನು ಛೀಮಾರಿ ಹಾಕಿ ಕ್ಯಾಬಿನ್ನ ಮುಂದಿನ ಸೀಟಿನಲ್ಲಿ ಕೂಡುವಂತೆ ಹೇಳಿ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ಇದನ್ನು ಅರಗಿಸಿಕೊಳ್ಳಲಾಗದ ಅನಿಲ್ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಪ್ರಯಾಣಿಕರು ಮತ್ತು ವಿಮಾನಯಾನ ಸಿಬ್ಬಂದಿ ಆತನ ಈ ಯತ್ನವನ್ನು ಒಟ್ಟಿಗೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಿಂದ ವಿಮಾನದಲ್ಲಿದ್ದವರು ಆತಂಕಕ್ಕೆ ಒಳಗಾಗಿದ್ದರು. ಮತ್ತೊಂದು ಕಡೆ ಹಾರಾಟದ ವೇಳೆ ರಂಪ ರಾಮಾಯಣ ಮಾಡಿದ ಆತನನ್ನು ಶಂಶಾಬಾದ್‌ನಲ್ಲಿ ವಿಮಾನ ಇಳಿಯುವಾಗ ಆರ್‌ಜಿಐಎ ಪೊಲೀಸರಿಗೆ ಒಪ್ಪಿಸಲಾಯಿತು. ಅನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಆರ್ಜಿಐಎಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಕೃತಕ ಬುದ್ಧಿಮತ್ತೆ ತಂತ್ರದಿಂದ 13 ವರ್ಷದ ಹಿಂದೆ ಕಾಣೆಯಾದ ಮಗುವಿಗೆ ಹುಡುಕಾಟ! - AI Generated Photo Of Missing Girl