ETV Bharat / bharat

ಅಸ್ಸೋಂನ 19 ಸ್ಥಳದಲ್ಲಿ ಬಾಂಬ್ ದಾಳಿಗೆ ಸಂಚು​; ತಾಂತ್ರಿಕ ಕಾರಣದಿಂದ ತಪ್ಪಿತು ದುರಂತ - ULFA I claim it places Bombs - ULFA I CLAIM IT PLACES BOMBS

ಇದೇ ವೇಳೆ ಯಾವ ಯಾವ ಸ್ಥಳಗಳಲ್ಲಿ ಬಾಂಬ್​ ಇರಿಸಲಾಗಿತ್ತು ಎಂದು ಕೂಡ ತಿಳಿಸಿದ್ದು, ಸ್ಥಳೀಯರಿಗೆ ಅದನ್ನು ನಿಷ್ಕ್ರಿಯಗೊಳಿಸುವಂತೆ ಕೋರಲಾಗಿದೆ.

ULFA I claim it places Bombs At 19 Locations In Assam on I DAy
ಪೊಲೀಸರ ಶೋಧ (ETV Bharat)
author img

By ETV Bharat Karnataka Team

Published : Aug 15, 2024, 2:14 PM IST

ನವದೆಹಲಿ: ಇಡೀ ದೇಶ 78ನೇ ಸ್ವಾತಂತ್ರ್ಯವ ದಿನದ ಸಂಭ್ರಮ ಆಚರಣೆಯಲ್ಲಿದ್ದು, ಈ ಮಧ್ಯೆ ಆತಂಕದ ಸುದ್ದಿಯೊಂದು ಹೊರಬಿದ್ದಿದೆ. ಶಾಂತಿ ಕದಡುವ ಉದ್ದೇಶದಿಂದ ಅಸ್ಸೋಂ ವಿವಿಧೆಡೆ 19 ಸ್ಥಳಗಳಲ್ಲಿ ಬಾಂಬ್​ ಇರಿಸಿದ್ದು, ತಾಂತ್ರಿಕ ಕಾರಣದಿಂದ ಅವು ಸ್ಫೋಟಗೊಂಡಿಲ್ಲ ಎಂದು ನಿಷೇಧಿತ ಸಂಘಟನೆಯಾಗಿರುವ ಯುನೈಟೆಡ್​ ಲಿಬರೇಷನ್​ ಫ್ರಂಟ್​ ಅಸ್ಸೋಂ- ಇಂಡಿಪೆಂಡೆಂಟ್​ (ಉಲ್ಫಾ) ಸ್ಫೋಟಕ ಹೇಳಿಕೆ ನೀಡಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಮ್ಯಾನ್ಮಾರ್ ಮೂಲದ ಸಂಘಟನೆ, ಇದೇ ವೇಳೆ ಯಾವ ಯಾವ ಸ್ಥಳಗಳಲ್ಲಿ ಬಾಂಬ್​ ಇರಿಸಲಾಗಿತ್ತು ಎಂದು ಕೂಡ ತಿಳಿಸಿದ್ದು, ಸ್ಥಳೀಯರಿಗೆ ಅದನ್ನು ನಿಷ್ಕ್ರಿಯಗೊಳಿಸುವಂತೆ ಕೋರಿದೆ. ಅದರಲ್ಲಿ 8 ಬಾಂಬ್​ಗಳನ್ನು ಗುವಾಹಟಿಯಲ್ಲಿಯೇ ಇರಿಸಲಾಗಿದೆ ಎಂದು ತಿಳಿಸಿದೆ.

ಈ ಪ್ರಕಟಣೆಯಲ್ಲಿ ನಿಷೇಧಿತ ಸಂಘಟನೆಯ ಎರಡನೇ ಲೆಫ್ಟಿನೆಂಟ್​ ಇಶಾನ್​ ಅಸೊಂ ಸಹಿ ಇದೆ. ಯುನೈಟೆಡ್​ ಲಿಬರೇಷನ್​ ಫ್ರಂಟ್​ ಅಸ್ಸೋಂ (ಇಂಡಿಪೆಂಡೆಟ್​​) ಸಂಘಟನೆ ಪರವಾಗಿ ಅಸ್ಸೋಂನ ಸ್ಥಳೀಯರಿಗೆ ನೀಡುವ ಮಾಹಿತಿ ಇದಾಗಿದೆ. ಆಗಸ್ಟ್​ 15ರಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರ ವರೆಗೆ ಹಲವು ಕಡೆ ಭಯೋತ್ಪಾದಕ ದಾಳಿ ನಡೆಸಲು ನಿಗದಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಇದು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸ್ಥಳಗಳನ್ನು ಸಾರ್ವಜನಿಕಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನರು ಬಾಂಬ್​ಗಳನ್ನು ಪತ್ತೆ ಮಾಡಿ ಅವುಗಳನ್ನು ನಿಷ್ಕ್ರಿಯಗೊಳಿಸುವಂತೆ ತಿಳಿಸಿದ್ದಾರೆ. ಈ ಸ್ಥಳಗಳಲ್ಲಿ ಬಾಂಬ್​ ನಿಷ್ಕ್ರಿಯಗೊಳಿಸುವಂತೆ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇದೇ ವೇಳೆ ಪಾನಿಟೋಲಾ ಜೊತೆಗೆ ತಿನ್ಸುಕಿಯಾದಲ್ಲಿ ಎರಡು ಸ್ಥಳಗಳು, ದಿಬ್ರುಗಢ್‌ನಲ್ಲಿ ಒಂದು ಸ್ಥಳ ಮತ್ತು ಗೋಲಾಘಾಟ್- ಸರುಪಥರ್‌ನ ಎರಡು ಕಡೆದ ಬಾಂಬ್​ ಇರಿಸಲಾಗಿದ್ದ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಈ ಹೇಳಿಕೆ ಎಷ್ಟು ಸತ್ಯ ಎಂಬುದು ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿ ತನಿಖೆ ನಡೆಸಬೇಕಿದೆ.

ಇದನ್ನೂ ಓದಿ: ಅವರ ತ್ಯಾಗ ಎಂದಿಗೂ ಮರೆಯಲಾಗುವುದಿಲ್ಲ": ಹುತಾತ್ಮ ಕ್ಯಾಪ್ಟನ್ ದೀಪಕ್ ಸಿಂಗ್‌ಗೆ ಸೇನೆಯಿಂದ ಗೌರವ ನಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.