ETV Bharat / bharat

ಪುಣೆಯಲ್ಲಿ 2 ಹಿಟ್​-ಅಂಡ್​-ರನ್ ಕೇಸ್​: ಇಬ್ಬರು ಪೊಲೀಸರ ಸಾವು, ಓರ್ವನಿಗೆ ಗಾಯ - Pune hit and run - PUNE HIT AND RUN

ಪುಣೆಯಲ್ಲಿ ನಡೆದ ಎರಡು ಅಪಘಾತ ಪ್ರಕರಣಗಳಲ್ಲಿ ಇಬ್ಬರು ಪೊಲೀಸರು ಸಾವಿಗೀಡಾಗಿದ್ದು, ಓರ್ವ ಪೇದೆ ಗಾಯಗೊಂಡಿದ್ದಾರೆ.

ಅಪಘಾತಕ್ಕೀಡಾದ ಪುಣೆ ಪೊಲೀಸ್​ ಕಾನ್​ಸಟೆಬಲ್​ಗಳು
ಅಪಘಾತಕ್ಕೀಡಾದ ಪುಣೆ ಪೊಲೀಸ್​ ಕಾನ್​ಸಟೆಬಲ್​ಗಳು (IANS)
author img

By ETV Bharat Karnataka Team

Published : Jul 8, 2024, 2:09 PM IST

ಪುಣೆ (ಮಹಾರಾಷ್ಟ್ರ) : ನಗರದಲ್ಲಿ ಇಂದು (ಸೋಮವಾರ) ನಡೆದ ಹಿಟ್​ ಅಂಡ್​ ರನ್ ಮಾದರಿಯ ಅಪಘಾತದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ್ದು, ಅವರ ಸಹೋದ್ಯೋಗಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಖಾಡ್ಕಿ ಪೊಲೀಸ್ ಠಾಣೆಗೆ ಸೇರಿದ ಇವರಿಬ್ಬರು ಹಳೆಯ ಹೆದ್ದಾರಿಯ ಬೊಪೊಡಿ ಪ್ರದೇಶದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಮುಂಜಾನೆ 1.45 ರ ಸುಮಾರಿಗೆ ಹ್ಯಾರಿಸ್ ಸೇತುವೆ ಬಳಿ ಈ ಘಟನೆ ನಡೆದಿದೆ.

ವೇಗವಾಗಿ ಚಲಿಸುತ್ತಿದ್ದ ಅಪರಿಚಿತ ವಾಹನವು ಇದ್ದಕ್ಕಿದ್ದಂತೆ ಇಬ್ಬರೂ ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್​ಗೆ ರಭಸದಿಂದ ಡಿಕ್ಕಿ ಹೊಡೆದಿದೆ ಮತ್ತು ಸ್ವಲ್ಪ ಸಮಯದ ನಂತರ ಘಟನಾ ಸ್ಥಳದಿಂದ ಕತ್ತಲೆಯಲ್ಲಿ ಕಣ್ಮರೆಯಾಯಿತು ಎಂದು ಮೂಲಗಳು ತಿಳಿಸಿವೆ. ನಂತರ, ಕೆಲವು ಸ್ಥಳೀಯ ಗ್ರಾಮಸ್ಥರು ಅಪಘಾತದ ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು.

ಅಪಘಾತದ ರಭಸಕ್ಕೆ ಬೈಕ್​ನಿಂದ ಗಾಳಿಯಲ್ಲಿ ಹಾರಿ ನೆಲಕ್ಕೆ ಬಿದ್ದ ಕಾನ್​ಸ್ಟೆಬಲ್ ಸಮಾಧಾನ್ ಕೋಲಿ (42) ತಕ್ಷಣ ಸಾವನ್ನಪ್ಪಿದರೆ, ಗಾಯಗೊಂಡಿರುವ ಅವರ ಕಿರಿಯ ಸಹೋದ್ಯೋಗಿ ಸಂಜೋಗ್ ಶಿಂಧೆ (36) ಅವರನ್ನು ಪುಣೆ ನಗರದ ರೂಬಿ ಹಾಲ್ ಕ್ಲಿನಿಕ್​ಗೆ ದಾಖಲಿಸಲಾಗಿದೆ.

ಪುಣೆ ಪೊಲೀಸರು ಮತ್ತು ಇತರ ತಂಡಗಳು ಅಪಘಾತ ಮಾಡಿದ ಆರೋಪಿಯ ಪತ್ತೆಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಹೆದ್ದಾರಿ ಮತ್ತು ಮಾರ್ಗದಲ್ಲಿನ ಇತರ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತೀದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶಿಂಧೆ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ: ಪುಣೆಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ, ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಮೃತಪಟ್ಟಿದ್ದಾರೆ. ಕಾನ್​ಸ್ಟೆಬಲ್​ ಸಚಿನ್ ವಿಷ್ಣು ಮಾನೆ (48) ಭಾನುವಾರ ರಾತ್ರಿ 10.30 ರ ಸುಮಾರಿಗೆ ಪಿಂಪ್ಲೆ ಸೌದಾಗರ್ ಪ್ರದೇಶದಲ್ಲಿ ಸಾಗುತ್ತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ.

ಕಾನ್​ಸ್ಟೆಬಲ್ ಮಾನೆ ಪ್ರಸ್ತುತ ಸಿಐಡಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ಆಸ್ಪತ್ರೆಯಲ್ಲಿ ಪರಿಚಯದವರನ್ನು ಭೇಟಿ ಮಾಡಿದ ನಂತರ ಮನೆಗೆ ತೆರಳುತ್ತಿದ್ದರು. ಇವರಿಗೆ ಡಿಕ್ಕಿ ಹೊಡೆದ ವಾಹನ ಇನ್ನೂ ಪತ್ತೆಯಾಗಿಲ್ಲ ಎಂದು ಸಾಂಗ್ವಿ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಮಹೇಶ್ ಬನ್ಸೋಡೆ ಹೇಳಿದ್ದಾರೆ.

ಇದನ್ನೂ ಓದಿ : ಜಾಮೀನು ನೀಡುವಾಗ ಗೂಗಲ್​ ಲೊಕೇಶನ್ ಶೇರ್ ಮಾಡುವ ಷರತ್ತು ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ - Bail Conditions

ETV Bharat Logo

Copyright © 2025 Ushodaya Enterprises Pvt. Ltd., All Rights Reserved.