ETV Bharat / bharat

ಕೋಟಾದಲ್ಲಿ ಮತ್ತೊಬ್ಬ ಕೋಚಿಂಗ್ ವಿದ್ಯಾರ್ಥಿ ಆತ್ಮಹತ್ಯೆ - Coaching student commits suicide - COACHING STUDENT COMMITS SUICIDE

ಖಾಸಗಿ ಕೋಚಿಂಗ್ ಸಂಸ್ಥೆಯೊಂದರ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜಸ್ಥಾನದಲ್ಲಿ ನಡೆದಿದೆ.

STUDENT COMMITTED SUICIDE IN KOTA  UP STUDENT SUICIDE IN KOTA  SUICIDE IN KOTA
ಕೋಟಾದಲ್ಲಿ ಮತ್ತೊಬ್ಬ ಕೋಚಿಂಗ್ ವಿದ್ಯಾರ್ಥಿ ಆತ್ಮಹತ್ಯೆ
author img

By ETV Bharat Karnataka Team

Published : Mar 26, 2024, 2:51 PM IST

ಕೋಟಾ (ರಾಜಸ್ಥಾನ): ಕೋಟಾ ಮತ್ತೊಬ್ಬ ಕೋಚಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಂಗಳವಾರ ಇಲ್ಲಿನ ವಿಜ್ಞಾನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ವಿದ್ಯಾರ್ಥಿಯು ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ಓದುತ್ತಿದ್ದನು. ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ವಿದ್ಯಾರ್ಥಿ ಮೂಲತಃ ಉತ್ತರ ಪ್ರದೇಶದ ಕನೌಜ್ ನಿವಾಸಿ ಎಂದು ತಿಳಿದುಬಂದಿದೆ.

ಕಳೆದ ಒಂದು ವರ್ಷದಿಂದ ಈ ವಿದ್ಯಾರ್ಥಿ ಕೋಟಾದಲ್ಲಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಯ ವಯಸ್ಸು ಸುಮಾರು 19 ವರ್ಷ ಎಂದು ಅಂದಾಜಿಸಲಾಗಿದೆ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಕೋಟಾದಲ್ಲಿ ಈ ವರ್ಷ ನಡೆದ ಆರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.

ಬೋರ್ಡ್ ಪರೀಕ್ಷೆ ಸರಿಯಾಗದ ಕಾರಣ ಆತ್ಮಹತ್ಯೆ ಯತ್ನ: ನಗರದ ನಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ವಿದ್ಯಾರ್ಥಿಯೂ ಇತ್ತೀಚಿಗೆ ಆತ್ಮಹತ್ಯೆಗೆ ಯತ್ನಿಸಿದ್ದನು. ವಿದ್ಯಾರ್ಥಿ ಕೋಟಾ ನಗರದ ಖಂಡ್ ಗಾಂಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ. ಮೂಲತಃ ಬರಾನ್ ಜಿಲ್ಲೆಯ ಅಂತಾ ತಹಸಿಲ್ ನಿವಾಸಿ. ವಿದ್ಯಾರ್ಥಿ 12ನೇ ಬೋರ್ಡ್ ಪರೀಕ್ಷೆ ಬರೆದಿದ್ದ. ಇದರಲ್ಲಿ ಆತನ ಪರೀಕ್ಷೆಗಳು ಸರಿಯಾಗದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದನು. ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ. ಸದ್ಯ ಆತನ ಸ್ಥಿತಿ ಸ್ಥಿರವಾಗಿದೆ.

ಇದನ್ನೂ ಓದು: ಬಿಜಾಪುರದಲ್ಲಿ ರಕ್ತಸಿಕ್ತ ಘಟನೆ : ಅಪರಿಚಿತ ದಾಳಿಕೋರರಿಂದ ಗ್ರಾಮಸ್ಥರ ಮೇಲೆ ಹಲ್ಲೆ; ಮೂವರ ಸಾವು - Unidentified assailants attacked

ETV Bharat Logo

Copyright © 2025 Ushodaya Enterprises Pvt. Ltd., All Rights Reserved.