ETV Bharat / bharat

ಪಶ್ಚಿಮ ಬಂಗಾಳದ 3 ಕ್ಷೇತ್ರಗಳಿಗೆ ಚುನಾವಣೆ; ಟಿಎಂಸಿ-ಬಿಜೆಪಿ ಹಿಂಸಾಚಾರ ನಡುವೆಯೂ ಹೆಚ್ಚು ವೋಟಿಂಗ್! - Bengal Violence - BENGAL VIOLENCE

ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆ ವೇಳೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಅನೇಕ ಹಿಂಸಾಚಾರದ ಘಟನೆಗಳು ನಡೆದಿದೆ.

ಪಶ್ಚಿಮ ಬಂಗಾಳ ಹಿಂಸಾಚಾರ
ಪಶ್ಚಿಮ ಬಂಗಾಳ ಹಿಂಸಾಚಾರ
author img

By PTI

Published : Apr 19, 2024, 9:52 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಶುಕ್ರವಾರ ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಿಗೆ ಮತದಾನ ನಡೆದಿದೆ. ಚುನಾವಣೆ ವೇಳೆ ಅನೇಕ ಹಿಂಸಾಚಾರದ ಘಟನೆಗಳು ಸಂಭವಿಸಿವೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಘರ್ಷಣೆಗಳು ಉಂಟಾಗಿ ಹಲವರು ಗಾಯಗೊಂಡಿದ್ದಾರೆ. ಇದರ ನಡುವೆಯೂ ಸಂಜೆ 5 ಗಂಟೆಯವರೆಗೆ ಶೇ.77 ರಷ್ಟು ಮತದಾನವಾಗಿದೆ.

ದೇಶದ ಅತಿಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ಪಶ್ಚಿಮ ಬಂಗಾಳ ಕೂಡ ಒಂದಾಗಿದೆ. ರಾಜ್ಯದಲ್ಲಿ ಒಟ್ಟಾರೆ 42 ಕ್ಷೇತ್ರಗಳಿದ್ದು, ಶುಕ್ರವಾರ ಮೊದಲ ಹಂತದಲ್ಲಿ ಕೂಚ್ ಬೆಹಾರ್ (ಎಸ್‌ಸಿ), ಅಲಿಪುರ್​ ದುವಾರ್ಸ್​ (ಎಸ್​ಟಿ) ಮತ್ತು ಜಲ್ಪೈಗುರಿ (ಎಸ್‌ಸಿ) ಕ್ಷೇತ್ರಗಳಿಗೆ ಮತದಾನ ನಡೆಯಿತು. ಈ ಮೂರು ಮೀಸಲು ಕ್ಷೇತ್ರಗಳಲ್ಲಿ ಕಳೆದ 2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು.

ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯು ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಅಧಿಕಾರಿಗಳ ಪ್ರಕಾರ, ಸಂಜೆ 5 ಗಂಟೆಯವರೆಗೆ ಕೂಚ್ ಬೆಹಾರ್​ನಲ್ಲಿ ಶೇ.77.38. ಅಲಿಪುರ್​ ದುವಾರ್ಸ್​ನಲ್ಲಿ ಶೇ.75.54 ಮತ್ತು ಜಲ್ಪೈಗುರಿಯಲ್ಲಿ ಶೇ.79.33ರಷ್ಟು ಮತದಾನವಾಗಿದೆ. ಮತಗಟ್ಟೆಗಳ ಹೊರಗೆ ಇನ್ನೂ ಉದ್ದನೆಯ ಸರತಿ ಸಾಲುಗಳಲ್ಲಿ ಜನ ನಿಂತಿದ್ದರಿಂದ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಟಿಎಂಸಿ-ಬಿಜೆಪಿ ಪರಸ್ಪರ ಹೊಡೆದಾಟ, ದೂರು-ಪ್ರತಿದೂರು!: ಮತದಾನದ ಪ್ರಕ್ರಿಯೆ ವೇಳೆ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಹೊಡೆದಾಟ ನಡೆದಿದೆ. ಈ ಸಂಬಂಧ ಟಿಎಂಸಿ ಮತ್ತು ಬಿಜೆಪಿ ಕ್ರಮವಾಗಿ ಸುಮಾರು 100 ಮತ್ತು 50 ದೂರುಗಳನ್ನೂ ದಾಖಲಿಸಿವೆ. ಮತದಾನದ ವೇಳೆ ಹಿಂಸಾಚಾರ, ಮತದಾರರಿಗೆ ಬೆದರಿಕೆ, ಮತಗಟ್ಟೆ ಏಜೆಂಟರ ಮೇಲಿನ ಹಲ್ಲೆಗಳ ಕುರಿತು ದೂರು-ಪ್ರತಿದೂರು ನೀಡಲಾಗಿದೆ.

ಈಗಾಗಲೇ ಹಿಂಸಾಚಾರಪೀಡಿತ ಕೂಚ್ ಬೆಹರ್‌ನಲ್ಲಿ ಹೆಚ್ಚಿನ ಹಿಂಸಾಚಾರ ನಡೆದಿದೆ. ನಾವು ದೂರುಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಪರಿಶೀಲಿಸುತ್ತಿದ್ದೇವೆ. ಆದರೆ, ಇಲ್ಲಿಯವರೆಗೆ ಯಾವುದೇ ಪ್ರಮುಖ ಹಿಂಸಾಚಾರದ ಘಟನೆಗಳ ಬಗ್ಗೆ ನಮಗೆ ವರದಿಯಾಗಿಲ್ಲ. ಮತದಾನ ಶಾಂತಿಯುತವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ, ಬಿಇಒ ಕಚೇರಿಗೆ ಮಧ್ಯಾಹ್ನ 2 ಗಂಟೆವರೆಗೆ ವಿವಿಧ ಪಕ್ಷಗಳಿಂದ ಸುಮಾರು 500 ದೂರುಗಳು ಬಂದಿದ್ದು, ಬಹುತೇಕ ದೂರುಗಳನ್ನು ತ್ವರಿತವಾಗಿ ಪರಿಹರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ನಡುವೆ ಚುನಾವಣಾ ಆಯೋಗವು ಬಿಜೆಪಿ ಆಯೋಗದಂತೆ ಕಾರ್ಯನಿರ್ವಹಿಸುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಕೂಚ್ ಬೆಹಾರ್‌ನಲ್ಲಿ ರಾಜ್ಯ ಪಡೆಗಳನ್ನು ಹೊರತುಪಡಿಸಿ ಕೇಂದ್ರೀಯ ಪಡೆಗಳನ್ನು ಮಾತ್ರ ನಿಯೋಜಿಸುವ ಮೂಲಕ ಚುನಾವಣಾ ಆಯೋಗವು ಬಿಜೆಪಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ ಎಂದು ಅವರು ದೂರಿದ್ದಾರೆ. ಈ ರೀತಿಯಾಗಿ ಕೇಂದ್ರೀಯ ಪಡೆಗಳನ್ನು ಬಳಸುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಹೀಗಾಗಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ನಾವು ಹೇಗೆ ನಿರೀಕ್ಷಿಸಬಹುದು?, ಚುನಾವಣಾ ಆಯೋಗವು ಬಿಜೆಪಿಗೆ ಪಕ್ಷಪಾತ ತೋರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಮತಾ ಆರೋಪಿಸಿದ್ದಾರೆ.

ಮತ್ತೊಂದೆಡೆ, ಕೂಚ್ ಬೆಹಾರ್‌ನ ಕೆಲವು ಬೂತ್‌ಗಳಿಗೆ ಮತದಾರರನ್ನು ಪ್ರವೇಶಿಸದಂತೆ ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ. ಸೀತಾಲ್ಕುಚಿಯಲ್ಲಿ ಮತಗಟ್ಟೆ ನಮ್ಮ ಪಕ್ಷದ ಏಜೆಂಟರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟಿಸಿಎಂ ದೂರಿದೆ. ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಬದಲಿಗೆ ಟಿಎಂಸಿ ಕಾರ್ಯಕರ್ತರೇ ಮತದಾರರನ್ನು ಬೆದರಿಸಿದ್ದಾರೆ ಎಂದು ಮರು ಆರೋಪ ಮಾಡಿದೆ.

ಮಠಭಂಗ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನಕಲಿ ಮತಗಳ ಚಲಾವಣೆಗೆ ಕೇಂದ್ರ ಪಡೆಗಳ ನೆರವಾಗುತ್ತಿವೆ ಎಂದು ಆರೋಪಿಸಿ ಟಿಎಂಸಿ ಪ್ರತಿಭಟನೆ ಸಹ ನಡೆದಿದೆ. ಈ ವೇಳೆ, ಘರ್ಷಣೆಯಲ್ಲಿ ಬೆತ್ಗುರಿಯ ಟಿಎಂಸಿ ಬ್ಲಾಕ್ ಅಧ್ಯಕ್ಷ ಅನಂತ ಬರ್ಮನ್ ಮೇಲೆ ಬಿಜೆಪಿ ಸದಸ್ಯರ ಹಲ್ಲೆ ಮಾಡಿದ್ದಾರೆ ಎಂದೂ ದೂರಲಾಗಿದೆ. ಮತ್ತೊಂದೆಡೆ, ಕೂಚ್ ಬೆಹಾರ್ ದಕ್ಷಿಣದಲ್ಲಿ ಬಿಜೆಪಿ ಸದಸ್ಯರನ್ನು ಟಿಎಂಸಿ ಕಾರ್ಯಕರ್ತರು ಅಪಹರಿಸಿದ್ದಾರೆ. ಟಿಎಂಸಿ ಸದಸ್ಯರ ದಾಳಿಯ ನಂತರ ಐವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್​ಗಢದಲ್ಲಿ ಯೋಧ ಸಾವು, ಮಣಿಪುರದಲ್ಲಿ ಫೈರಿಂಗ್, ಉತ್ತರಾಖಂಡದಲ್ಲಿ ಇವಿಎಂ ಒಡೆದು ಹಾಕಿದ ವೃದ್ಧ! - Election Violence

ETV Bharat Logo

Copyright © 2025 Ushodaya Enterprises Pvt. Ltd., All Rights Reserved.