ETV Bharat / bharat

ಪ್ಯಾರಾಚೂಟ್​ ಸಾಹಸ: ಸೀರೆಯುಟ್ಟು 5,000 ಅಡಿ ಎತ್ತರದಿಂದ ಜಿಗಿದ ಪದ್ಮಶ್ರೀ ಪುರಸ್ಕೃತೆ - ಶೀತಲ್ ಮಹಾಜನ್

ಪದ್ಮಶ್ರೀ ಪುರಸ್ಕೃತೆ ಶೀತಲ್ ಮಹಾಜನ್ 5 ಸಾವಿರ ಅಡಿ ಎತ್ತರದಿಂದ ಜಿಗಿದು ಇತಿಹಾಸ ಸೃಷ್ಟಿಸಿದ್ದಾರೆ. ಬಿಜೆಪಿ ಸಂಸದ ಕೀರ್ತಿ ವರ್ಧನ್ ಕೂಡ ಪ್ಯಾರಾಗ್ಲೈಡಿಂಗ್ ಮಾಡಿದ್ದಾರೆ.

Sheetal Mahajan parachuting
ಶೀತಲ್ ಮಹಾಜನ್ ಪ್ಯಾರಾಚೂಟಿಂಗ್
author img

By ETV Bharat Karnataka Team

Published : Feb 24, 2024, 10:18 AM IST

Updated : Feb 24, 2024, 12:20 PM IST

ಶೀತಲ್ ಮಹಾಜನ್ ಪ್ಯಾರಾಚೂಟಿಂಗ್

ಗೊಂಡಾ (ಉತ್ತರ ಪ್ರದೇಶ): ಪದ್ಮಶ್ರೀ ಪುರಸ್ಕೃತ ಕ್ರೀಡಾಪಟು ಶೀತಲ್ ಮಹಾಜನ್ ಅವರು 5 ಸಾವಿರ ಅಡಿ ಎತ್ತರದಿಂದ ಜಿಗಿದು ಎಲ್ಲರ ಗಮನ ಸೆಳೆದಿದ್ದಾರೆ. ಬಿಜೆಪಿ ಸಂಸದರಾದ ಕೀರ್ತಿ ವರ್ಧನ್ ಸಿಂಗ್ ಕೂಡ ಪ್ಯಾರಾಗ್ಲೈಡಿಂಗ್ ಮಾಡಿದ್ದಾರೆ. ಇಬ್ಬರೂ ಮಾಂಕಾಪುರದಿಂದ ಅಯೋಧ್ಯೆಯ 27 ಕಿಲೋಮೀಟರ್ ಪ್ರಯಾಣವನ್ನು ಕೇವಲ 22 ನಿಮಿಷಗಳಲ್ಲಿ ಪೂರ್ಣಗೊಳಿಸಿದರು.

ಶೀತಲ್ ಮಹಾಜನ್ 5 ಸಾವಿರ ಅಡಿ ಎತ್ತರದಿಂದ ಜಿಗಿದ ಸಂದರ್ಭ, ಪ್ಯಾರಾಚೂಟ್ ಇಲ್ಲದೇ 1,000 ಅಡಿಗಳ ಅಂತರದಲ್ಲಿ ಗಾಳಿಯಲ್ಲಿ ತೇಲುತ್ತಿದ್ದರು. ಇದಾದ ಬಳಿಕ 4 ಸಾವಿರ ಅಡಿ ಎತ್ತರದ ವೇಳೆ ಪ್ಯಾರಾಚೂಟ್ ತೆರೆದರು. ಕೀರ್ತಿ ಮತ್ತು ಶೀತಲ್ ಅವರ ಪ್ಯಾರಾಗ್ಲೈಡ್​ ಮತ್ತು ಪ್ಯಾರಾಚೂಟ್ ಸರಯೂ ನದಿಯ ಬಯಲಿನಲ್ಲಿ ಇಳಿದ ನಂತರ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬಿಜೆಪಿ ಸಂಸದರಾಗಿರುವ ಕೀರ್ತಿ ವರ್ಧನ್ ಸಿಂಗ್ ಮಂಕಾಪುರದಿಂದ ಅಯೋಧ್ಯೆಗೆ ಪ್ಯಾರಾಗ್ಲೈಡಿಂಗ್ ಮಾಡಿದರು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಶೀತಲ್ ಮಹಾಜನ್ ಕೂಡ ಬಹಳ ದಿನಗಳ ತಯಾರಿ ಬಳಿಕ ಶುಕ್ರವಾರದಂದು ಪ್ಯಾರಾಚೂಟಿಂಗ್​​ ಸಾಹಸ ಮಾಡಿದರು. ಇಬ್ಬರೂ ತಮ್ಮ ಪ್ರಚಾರಕ್ಕಾಗಿ ಗೊಂಡಾ ಮತ್ತು ಅಯೋಧ್ಯೆ ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದರು. ಇದನ್ನು ಹೊರತುಪಡಿಸಿ, ಅಯೋಧ್ಯೆ ವಿಮಾನ ನಿಲ್ದಾಣ ಪ್ರಾಧಿಕಾರವು ಇತರ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇವರಿಗೆ ಅನುಮತಿ ನೀಡಿತ್ತು.

ಇದನ್ನೂ ಓದಿ: ವಿಶೇಷಚೇತನರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ: ಶ್ರೀಕಾಂತ್​ ದೇಶಪಾಂಡೆ

ಇಬ್ಬರೂ ಮಾಂಕಾಪುರದಿಂದ ಅಯೋಧ್ಯೆಗೆ 27 ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ. ಈ ಪ್ರಯಾಣವನ್ನು ಪೂರ್ಣಗೊಳಿಸಲು ಇಬ್ಬರೂ 22 ನಿಮಿಷಗಳನ್ನು ತೆಗೆದುಕೊಂಡರು. ಇಬ್ಬರೂ ಸರಯೂ ನದಿ ಬಯಲಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆದರು. ಸಂಸದ ಮತ್ತು ಶೀತಲ್ ಮಹಾಜನ್ ಒಟ್ಟಾಗಿ ಈ ಪ್ರಯಾಣವನ್ನು ನಿರ್ಧರಿಸಿದ್ದರು. ಪ್ಯಾರಾಗ್ಲೈಡಿಂಗ್ ಮತ್ತು ಪ್ಯಾರಾಚೂಟ್ ಲ್ಯಾಂಡಿಂಗ್ ನಂತರ, ಅಯೋಧ್ಯೆಯ ಸರಯೂ ಭೂಮಿಯಲ್ಲಿ ಜೈ ಶ್ರೀ ರಾಮ್ ಘೋಷಣೆಗಳು ಮೊಳಗಿದವು. ನಂತರ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ: ರೈತರ ಪ್ರತಿಭಟನೆ: ಇಂದು ದೇಶಾದ್ಯಂತ ಕ್ಯಾಂಡಲ್ ಮೆರವಣಿಗೆ, ದೆಹಲಿ ಚಲೋ ನಿರ್ಧಾರ ಫೆಬ್ರವರಿ 29ಕ್ಕೆ ಮುಂದೂಡಿಕೆ

ಶೀತಲ್ ಮಹಾಜನ್ ಇಲ್ಲಿಯವರೆಗೆ ಮೌಂಟ್​ ಎವರೆಸ್ಟ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಪ್ಯಾರಾಚೂಟ್ ಮೂಲಕ ಜಿಗಿದಿದ್ದಾರೆ. ಶೀತಲ್ ಅವರಿಗೆ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರವನ್ನು ನಿರ್ಮಿಸಲಾಗಿದೆ. ಹಾಗಾಗಿ ಸ್ಕೈ ಡೈವ್ ಮಾಡಲು ಇದು ಸರಿಯಾದ ಸಮಯ. ವರ್ಷಗಳ ತಯಾರಿಯ ನಂತರ, ಇದೀಗ ಭಗವಾನ್ ರಾಮನ ಪುಣ್ಯಭೂಮಿಯಲ್ಲಿ ಸ್ಕೈ ಡೈವಿಂಗ್ ಮಾಡುವ ನನ್ನ ಕನಸು ನನಸಾಯಿತು ಎಂದು ತಿಳಿಸಿದರು.

Last Updated : Feb 24, 2024, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.