ETV Bharat / bharat

ವಾಲ್ಮೀಕಿ ನಿಗಮದ ಹಗರಣದ ಕುರಿತು ರಾಜ್ಯಸಭಾ ಕಲಾಪದಲ್ಲಿ ಚರ್ಚೆ: ಗದ್ದಲ - ಕೋಲಾಹಲ ಸೃಷ್ಟಿ - Valmiki Corporation Scam

ಇಂದು ನಡೆದ ರಾಜ್ಯಸಭೆ ಕಾಲಾಪದ ಶೂನ್ಯವೇಳೆಯಲ್ಲಿ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಪಟ್ಟಂತೆ ಭಾರಿ ಚರ್ಚೆ ನಡೆಯಿತು.

Valmiki Corporation Scam  Rajya Sabha  Jagdeep Dhankhar
ವಾಲ್ಮೀಕಿ ನಿಗಮದ ಹಗರಣದ ಕುರಿತು ರಾಜ್ಯಸಭೆಯಲ್ಲಿ ಚರ್ಚೆ (ETV Bharat)
author img

By PTI

Published : Jul 26, 2024, 4:51 PM IST

Updated : Jul 26, 2024, 6:15 PM IST

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾನಾಡಿದರು. (ETV Bharat)

ನವದೆಹಲಿ: ಇಂದು (ಶುಕ್ರವಾರ) ನಡೆದ ರಾಜ್ಯಸಭೆ ಕಾಲಾಪದ ಶೂನ್ಯವೇಳೆಯಲ್ಲಿ ವಾಲ್ಮೀಕಿ ನಿಗಮದ ಹಗರಣದ ಕುರಿತು ಭಾರಿ ಚರ್ಚೆ ನಡೆಯಿತು. ಈ ವೇಳೆ ಕೆಲಹೊತ್ತು ಗದ್ದಲ ಕೂಡ ಸೃಷ್ಟಿಯಾಯಿತು.

ಕರ್ನಾಟಕದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ವಿಷಯವನ್ನು ಪ್ರಸ್ತಾಪಿಸಲು ಬಿಜೆಪಿಯ ಈರಣ್ಣ ಕಡಾಡಿ ಅವರಿಗೆ ಅಧ್ಯಕ್ಷರ ಅನುಮತಿ ನೀಡಿರುವುದಕ್ಕೆ ಪ್ರಮುಖವಾಗಿ ಕಾಂಗ್ರೆಸ್ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ನಮಗೂ ಮಾತನಾಡಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಎರಡೂ ಕಡೆಯ ಸದಸ್ಯರು ಈ ಸಂಬಂಧ ಮಾತಿನ ಚಕಮಕಿ ನಡೆಸಿದರು.

ಬಿಜೆಪಿಯ ಕಡಾಡಿ, ಬ್ರಿಜ್ ಲಾಲ್, ನರೇಶ್ ಬನ್ಸಾಲ್ ಮತ್ತು ಸುಧಾಂಶು ತ್ರಿವೇದಿ ನೋಟಿಸ್ ನೀಡಿದ್ದರು. ಆದರೆ, ಈ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳಿಂದ ಯಾವುದೇ ನೋಟಿಸ್​ ನೀಡದೇ ಇರುವುದರಿಂದ ಪ್ರತಿಪಕ್ಷಗಳ ಬೇಡಿಕೆಯನ್ನು ಸಭಾಪತಿಗಳು ತಿರಸ್ಕರಿಸಿದ್ದರು.

ಈ ನಡುವೆ, ಸಂಸದ ಈರಣ್ಣ ಕಡಾಡಿ ಮಾತು ಆರಂಭಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬೆಳಗ್ಗೆ ಸ್ಪೀಕರ್ ಹಾಕಿದ್ದ ಶೂನ್ಯವೇಳೆಯ ಕಲಾಪದ ಪಟ್ಟಿಯಲ್ಲಿ ಇವರ ಹೆಸರು ಇರಲಿಲ್ಲ ಎಂಬ ವಿಚಾರವನ್ನು ಗಮನಕ್ಕೆ ತಂದರು. ಕಲಾಪದಲ್ಲಿ ಮಾತನಾಡುವವರ ಪಟ್ಟಿಯಲ್ಲಿ ಕಡಾಡಿ ಹೆಸರು ಇಲ್ಲದ ಕಾರಣ ಅವರಿಗೆ ಬೇರೊಂದು ದಿನ ಮಾತನಾಡಲು ಅವಕಾಶ ಕೊಡಿ ಎಂದು ಕಾಂಗ್ರೆಸ್ ಸದಸ್ಯ ಪಿ. ಚಿದಂಬರಂ ಒತ್ತಾಯಿಸಿದರು.

ಕನ್ನಡದಲ್ಲಿ 'ವಾಲ್ಮೀಕಿ ನಿಗಮ ಹಗರಣ'ದ ಬಗ್ಗೆ ಪ್ರಸ್ತಾಪಿಸಿದ ಕಡಾಡಿ: ''ವಾಲ್ಮೀಕಿ ನಿಗಮದಿಂದ 270 ಬ್ಯಾಂಕ್​ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಈ ಹಣವನ್ನು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಗೆಲ್ಲುವುದಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ವರದಿಯಾಗಿದೆ. ಇ.ಡಿ ಅಧಿಕಾರಿಗಳು ಕರ್ನಾಟಕದ ಒಬ್ಬ ಸಚಿವರನ್ನು ಬಂಧಿಸಿದೆ. ಸ್ವತ್ರಂತ್ರವಾಗಿ ತನಿಖೆ ಮಾಡುತ್ತಿರುವ ಇ.ಡಿ ಅಧಿಕಾರಿಗಳ ಮೇಲೆ ಕೇಸ್​ಗಳನ್ನು ದಾಖಲು ಮಾಡುವ ಮೂಲಕ ಈ ಪ್ರಕರಣವನ್ನು ರಾಜಕೀರಣ ಮಾಡಲಾಗುತ್ತಿದೆ. ಇದರಿಂದಾಗಿ ನಾನು ಈ ವಿಚಾರವನ್ನು ಸದನದ ಗಮನಸೆಳೆಯಲು ಬಯಸಿದ್ದೇನೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಸದನದಲ್ಲಿ ತಿಳಿಸಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮ, ಮುಡಾ ಹಗರಣ ಸಿಬಿಐಗೆ ವಹಿಸಲು ಆಗ್ರಹ: ಸಂಸತ್ ಭವನದೆದುರು ಬಿಜೆಪಿ-ಜೆಡಿಎಸ್ ಪ್ರತಿಭಟನೆ - BJP JDS Protest

Last Updated : Jul 26, 2024, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.