ಹೈದರಾಬಾದ್: ಪ್ರಾಣಿ ಪ್ರಪಂಚವೇ ಒಂದು ವಿಸ್ಮಯ. ಮೊಗೆದಷ್ಟೂ ಅದು ವಿಸ್ತೃತವೇ. ಪರಿಸರ ವ್ಯವಸ್ಥೆಯಲ್ಲಿ ಕಶೇರುಕಗಳು ಮತ್ತು ಉಭಯವಾಸಿಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಹಲವು ವಿಶೇಷ ಪ್ರಭೇದಗಳು ಭೂಮಿ ಮೇಲೆ ಇನ್ನೂ ಉಳಿದುಕೊಂಡಿದ್ದರೆ, ಇನ್ನೂ ಕೆಲವು ನಶಿಸಿ ಹೋಗಿವೆ. ಅಂತಹ ಅಪರೂಪದ ಉಭಯಚರ ಜೀವಿಯನ್ನು ವಿಜ್ಞಾನಿಗಳು ಆಂಧ್ರಪ್ರದೇಶದಲ್ಲಿ ಕಂಡು ಹಿಡಿದಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ಬೆಟ್ಟಗಳಲ್ಲಿ ಸ್ಯೂಡೋಫಿಲಾಟಸ್ ರೆಜಿಯಸ್ ಎಂಬ ಅಪರೂಪದ ಕಪ್ಪೆಯನ್ನು ಕಂಡುಹಿಡಿದಿದ್ದಾರೆ. ಜೊತೆಗೆ, ಗೌನಿತಿಮ್ಮೆಪಲ್ಲಿಯ ಪಲಮನೇರು ಕೌಂಡಿನ್ಯ ಅರಣ್ಯ ಪ್ರದೇಶದ ಬಳಿಯ ಕೊಳದಲ್ಲಿ ಶ್ರೀಲಂಕಾ ಮೂಲದ ಗೋಲ್ಡನ್ ಬ್ಯಾಕ್ಡ್ ಫ್ರಾಗ್ ರಾನಾ ಗ್ರ್ಯಾಸಿಲಿಸ್ ಎಂಬ ಮತ್ತೊಂದು ಕಪ್ಪೆಯನ್ನು ಪತ್ತೆ ಮಾಡಿದ್ದಾರೆ. ಆಂಧ್ರಪ್ರದೇಶ ಜೀವವೈವಿಧ್ಯ ಮಂಡಳಿಯ ಸದಸ್ಯರೊಂದಿಗೆ ಹೈದರಾಬಾದ್ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಇವನ್ನು ಕಂಡು ಹಿಡಿದಿದ್ದಾರೆ.
ಪಶ್ಚಿಮಘಟ್ಟಗಳಲ್ಲಿ ಹೆಚ್ಚಿದ ಜೀವವೈವಿಧ್ಯ: ವಿಶ್ವದಲ್ಲಿ ಹವಾಮಾನ ಬದಲಾವಣೆ ಮಾನವ ಸೇರಿ ಪ್ರಾಣಿ ಪ್ರಪಂಚವನ್ನೇ ಅಲುಗಾಡಿಸಿದೆ. ಹೀಗಾಗಿ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜೀವಿಗಳು ವಲಸೆ ಬರುತ್ತಿವೆ. ಪೂರ್ವ ಘಟ್ಟಗಳು ಉತ್ತಮ ಪರಿಸರ ಮತ್ತು ಜೀವವೈವಿಧ್ಯತೆಗೆ ಸಾಕ್ಷಿಯಾಗಿವೆ. ಇಲ್ಲಿ ಶ್ರೀಲಂಕಾ ಬ್ರೌನ್ ಇಯರ್ಡ್ ಪ್ರೆಬ್ ಫ್ರಾಗ್, ಶ್ರೀಲಂಕಾ ಗೋಲ್ಡನ್ ಬ್ಯಾಕ್ಡ್ ಕಪ್ಪೆ ಕಂಡುಬಂದಿದೆ. ಅವನ್ನು ಹೈದರಾಬಾದ್ನ ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ಝಡ್‌ಎಸ್‌ಐ ಕಚೇರಿಗೆ ತಂದು ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ.
ಬೇರೆ ದೇಶಗಳ ಅರಣ್ಯ ಪ್ರದೇಶದಲ್ಲಿ ಕಂಡುಬರುವ ಜೀವಿಗಳು ಭಾರತದ ಪೂರ್ವ ಘಟ್ಟಗಳು, ಹಿಮಾಲಯ, ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿರುವುದು ಸಂತಸದ ವಿಚಾರವಾಗಿದೆ. ಜೈವಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ. ಪೂರ್ವ ಘಟ್ಟಗಳಲ್ಲಿ ಇಂತಹ ಕಪ್ಪೆಗಳು ಹುಟ್ಟಿಕೊಂಡಿವೆ ಎಂದರೆ ಇಲ್ಲಿನ ಪರಿಸರಕ್ಕೆ ಅವು ಹೊಂದಿಕೊಳ್ಳುತ್ತಿವೆ ಎಂದರ್ಥ ಎನ್ನುತ್ತಾರೆ ವಿಜ್ಞಾನಿಗಳು.
ಪ್ರಸ್ತುತ ಪತ್ತೆಯಾದ ಅಪರೂಪದ ಕಪ್ಪೆಯನ್ನು 2005 ರಲ್ಲಿ ಶ್ರೀಲಂಕಾದಲ್ಲಿ ಕಂಡುಬಂದಿತ್ತು. ಆ ದೇಶದ ಕಾಡುಗಳಲ್ಲಿ ಇದು ಸಾಮಾನ್ಯ ಕಪ್ಪೆ. ಈ ಕಪ್ಪೆಗೆ ಸಂಬಂಧಿಸಿದ ಮೂರು ಜಾತಿಗಳನ್ನು ಪಶ್ಚಿಮ ಘಟ್ಟಗಳಲ್ಲಿ ಈಗಾಗಲೇ ಗುರುತಿಸಲಾಗಿದೆ.
ಪ್ರಪಂಚದಲ್ಲಿವೆ 7 ಸಾವಿರ ಕಪ್ಪೆ ಪ್ರಭೇದಗಳು : ಪ್ರಪಂಚದಲ್ಲಿ ಸುಮಾರು 7 ಸಾವಿರ ಕಪ್ಪೆ ಪ್ರಭೇದಗಳಿವೆ. ಭಾರತದಲ್ಲಿ ಬುರ್ರವಿಂಗ್, ಗ್ರೀನ್ ಫ್ರಾಗ್, ಪೇಯೆಂಟೆಡ್ ಫ್ರಾಗ್, ಏಷ್ಯನ್ ಕಾಮನ್ ಟೋಡ್ ಮುಂತಾದ ಕಪ್ಪೆಗಳು ಬಹಳ ಸೂಕ್ಷ್ಮವಾಗಿರುತ್ತವೆ. ಆವಾಸಸ್ಥಾನ ನಾಶ ಮತ್ತು ಬದಲಾಗುತ್ತಿರುವ ಹವಾಮಾನದಿಂದಾಗಿ ಅವು ವೇಗವಾಗಿ ಕಣ್ಮರೆಯಾಗುತ್ತಿವೆ. ದೇಶದಲ್ಲಿ ಸುಮಾರು 100 ಜಾತಿಯ ಕಪ್ಪೆಗಳು ಗುರುತಿಸಲ್ಪಟ್ಟಿವೆ. ಇವುಗಳಲ್ಲಿ ಹಲವು ಜಾತಿಗಳು ಸಂಶೋಧನೆಗೂ ಮೊದಲೇ ನಾಶವಾಗಿವೆ ಎಂದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇದನ್ನೂ ಓದಿ: ತೆಲಂಗಾಣದ ಕಡೆಂ ಅರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ: ಏನಿದರ ವಿಶೇಷತೆ!