ETV Bharat / bharat

ಚಲಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ; ಆಕ್ಸಿಜನ್ ನೆರವಿನಲ್ಲಿದ್ದ ಗಂಡನ ರಸ್ತೆಗೆಸೆದು ಕ್ರೌರ್ಯ! - Rape Attempt In Moving Ambulance

author img

By ETV Bharat Karnataka Team

Published : Sep 5, 2024, 1:08 PM IST

Updated : Sep 5, 2024, 1:14 PM IST

ಉತ್ತರ ಪ್ರದೇಶದ ಸಿದ್ಧಾರ್ಥ್​​ನಗರ್​ ಜಿಲ್ಲೆಯ ಕಂಟೊನ್ಮೆಂಟ್​ ಪ್ರದೇಶದಲ್ಲಿ ಆಗಸ್ಟ್​ 29ರಂದು ಈ ಅಮಾನವೀಯ ಘಟನೆ ನಡೆದಿದೆ. ಸೆಪ್ಟೆಂಬರ್​ 1ರಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.

siddharthnagar-woman-rape-attempt-in-basti-moving-ambulance-husband-oxygen-mask-removed-thrown-garbage-death-lucknow-police
ಸಾಂದರ್ಭಿಕ ಚಿತ್ರ (ANI)

ಬಸ್ತಿ(ಲಕ್ನೋ,ಯುಪಿ): ಅನಾರೋಗ್ಯಪೀಡಿತ ಪತಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದ ಮಹಿಳೆಯ ಮೇಲೆ ಚಲಿಸುತ್ತಿದ್ದ ಆಂಬ್ಯುಲೆನ್ಸ್​ನಲ್ಲಿ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿರುವ ಹೀನ ಕೃತ್ಯ ಆಗಸ್ಟ್​ 29ರಂದು ಉತ್ತರ ಪ್ರದೇಶದ ಸಿದ್ಧಾರ್ಥ್​​ನಗರ್​ ಜಿಲ್ಲೆಯ ಕಂಟೊನ್ಮೆಂಟ್​ ಪ್ರದೇಶದಲ್ಲಿ ನಡೆದಿದೆ. ಈ ದುಷ್ಕೃತ್ಯಕ್ಕೂ ಮುನ್ನ ಆರೋಪಿಗಳು ಆಕ್ಸಿಜನ್​ ನೆರವಿನಲ್ಲಿ ಆಂಬ್ಯುಲೆನ್ಸ್​​ನಲ್ಲಿದ್ದ ಮಹಿಳೆಯ ಗಂಡನನ್ನು ರಸ್ತೆಯಲ್ಲಿದ್ದ ಕಸದ ತೊಟ್ಟಿಗೆಸೆದು ಮೃಗೀಯ ವರ್ತನೆ ತೋರಿದ್ದಾರೆ. ಸಂತ್ರಸ್ತೆ ಸೆಪ್ಟೆಂಬರ್​ 1ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣದ ಸಂಪೂರ್ಣ ವಿವರ: ಸಿದ್ಧಾರ್ಥ್​​ನಗರ​ ಜಿಲ್ಲೆಯ ಬನ್ಸಿ ಕೊಟ್ವಾಲಿ ಮೂಲದ ಮಹಿಳೆಯ ಗಂಡ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬಸ್ಥರು ಅವರನ್ನು ಬಸ್ತಿ ಮೆಡಿಕಲ್​ ಕಾಲೇಜ್​ಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ಆದರೆ, ಆರೋಗ್ಯ ತೀರಾ ಹದಗೆಟ್ಟ ಪರಿಣಾಮ ಲಕ್ನೋಗೆ ಕರೆತರಲಾಯಿತು. ಲಕ್ನೋ ಮೆಡಿಕಲ್​ ಕಾಲೇಜ್​ನಲ್ಲಿ ಹಾಸಿಗೆ​ ಕೊರತೆಯಿಂದ ಅಲ್ಲಿಂದ ಇಫೆರಿಯಾ ನ್ಯೂರೋಸೈನ್ಸ್​​ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು.

ಎರಡು ದಿನದ ಚಿಕಿತ್ಸೆಗೆ ಮಹಿಳೆ ಸಾಕಷ್ಟು ಹಣ ವ್ಯಯಿಸಿದ್ದರು. ಮುಂದಿನ ಚಿಕಿತ್ಸೆಗೆ ಹಣವಿಲ್ಲದ ಕಾರಣ ಗಂಡನನ್ನು ತನ್ನೂರಿನಲ್ಲಿ ಚಿಕಿತ್ಸೆಗೆ ಕರೆತರಲು ಮಹಿಳೆ ಮುಂದಾಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಯಾರೋ ಖಾಸಗಿ ಆಂಬ್ಯುಲೆನ್ಸ್​ ಫೋನ್‌ ನಂಬರ್​ ನೀಡಿದ್ದು, ಅದರಲ್ಲಿ ಕರೆತರಲು ಮಹಿಳೆ ಮುಂದಾಗಿದ್ದಾರೆ.

ರೋಗಿಯನ್ನು ರಸ್ತೆಗೆಸೆದು ಕ್ರೌರ್ಯ: ಆಗಸ್ಟ್​ 29ರಂದು ಸಿದ್ದಾರ್ಥ್​​ ನಗರ ಜಿಲ್ಲೆಗೆ ಗಂಡನನ್ನು ಆಂಬ್ಯುಲೆನ್ಸ್​ನಲ್ಲಿ ಕರೆತರುತ್ತಿದ್ದರು. ಸ್ವಲ್ಪ ದೂರ ಸಾಗಿದ ಬಳಿಕ ಆಂಬ್ಯುಲೆನ್ಸ್​ ಚಾಲಕ​ ಮತ್ತು ಆತನ ಸಹಚರರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಮಹಿಳೆಗೆ ಚಾಲಕನ ಪಕ್ಕದ ಆಸನದ ಪಕ್ಕದಲ್ಲಿ ಕೂರುವಂತೆ ಪೀಡಿಸಿದ್ದಾರೆ. ಬಳಿಕ ಸಂಚರಿಸುತ್ತಿದ್ದ ಆಂಬ್ಯುಲೆನ್ಸ್‌ನಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮಹಿಳೆ ನಿರಂತರವಾಗಿ ಪ್ರತಿರೋಧ ತೋರಿದಾಗ, ಗಂಡನಿಗೆ ನೀಡಿದ್ದ ಆಕ್ಸಿಜನ್​ ಮಾಸ್ಕ್​ ತೆಗೆದು ನಿರ್ಜನ ಪ್ರದೇಶದಲ್ಲಿದ್ದ ಕಸದ ತೊಟ್ಟಿಗೆ ಬಿಸಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಆಕ್ಸಿಜನ್​ ಮಾಸ್ಕ್​ ತೆಗೆಯುತ್ತಿದ್ದಂತೆ ಗಂಡನ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ತಕ್ಷಣ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಂಬ್ಯುಲೆನ್ಸ್​ ಮೂಲಕ ಅನಾರೋಗ್ಯಪೀಡಿತ ಪತಿಯನ್ನು ಸಿಎಚ್​ಸಿ ಹರ್ರಿಯಾಗೆ ದಾಖಲಿಸಿದ್ದಾರೆ. ಇದಾದ ಬಳಿಕ ಗೋರಖ್​ಪುರ್​ ಮೆಡಿಕಲ್​ ಕಾಲೇಜ್​ಗೆ ಶಿಫಾರಸು ಮಾಡಿದ್ದಾರೆ. ಆದರೆ, ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಸೆಪ್ಟೆಂಬರ್​ 1ರಂದು ಸಂತ್ರಸ್ತ ಮಹಿಳೆ ಲಕ್ನೋನ ಗಾಜಿಪುರ್​ ಪೊಲೀಸ್​ ಠಾಣೆಯಲ್ಲಿ ಆಂಬ್ಯುಲೆನ್ಸ್​ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಮೃತ್​ಸರ್​​ ಸರ್ಕಾರಿ ಆಸ್ಪತ್ರೆಯಲ್ಲೂ ವೈದ್ಯೆಗೆ ಲೈಂಗಿಕ ಕಿರುಕುಳ; ದೂರು ದಾಖಲು

Last Updated : Sep 5, 2024, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.