ETV Bharat / bharat

ಕಾಂಗ್ರೆಸ್​ ಪದಾಧಿಕಾರಿಗಳ ಆಯ್ಕೆಯಲ್ಲಿ ರಾಹುಲ್​ ಗಾಂಧಿ ಪ್ರಭಾವ: ಪಕ್ಷ ಬಲವರ್ಧನೆಗೆ ಬಿಗ್​ ಟಾಸ್ಕ್​ - AICC Reshuffle

ಮಂಕಾಗಿದ್ದ ಕಾಂಗ್ರೆಸ್​ ಪಕ್ಷಕ್ಕೆ ಹೊಸ ಚೈತನ್ಯ ತರಲು ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಯುವ ನಾಯಕರಿಗೆ ಮಹತ್ವದ ಹೊಣೆಗಾರಿಕೆ ನೀಡಿದ್ದಾರೆ. ಇದಕ್ಕೆ ಪಕ್ಷವೂ ಜೈ ಎಂದಿದೆ.

ಕಾಂಗ್ರೆಸ್​ ಪದಾಧಿಕಾರಿಗಳ ಆಯ್ಕೆಯಲ್ಲಿ ಯುವಕರಿಗೆ ಮಣೆ
ಕಾಂಗ್ರೆಸ್​ ಪದಾಧಿಕಾರಿಗಳ ಆಯ್ಕೆಯಲ್ಲಿ ಯುವಕರಿಗೆ ಮಣೆ (ETV Bharat)
author img

By ETV Bharat Karnataka Team

Published : Aug 31, 2024, 9:14 PM IST

ನವದೆಹಲಿ: ಬಿಜೆಪಿ ಪ್ರಖರತೆಯ ಮುಂದೆ ಮಂಕಾಗಿದ್ದ ಕಾಂಗ್ರೆಸ್​​ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಹೊಸ ಚೈತನ್ಯ ನೀಡಲು ಕಸರತ್ತು ನಡೆಸುತ್ತಿದ್ದಾರೆ. ಭಾರತ್​​ ಜೋಡೋ ಯಾತ್ರೆ ನಡೆಸುವ ಮೂಲಕ 2024ರ ಲೋಕಸಭೆ ಚುನಾವಣೆಗೂ ಮೊದಲು ದೊಡ್ಡ ಮಟ್ಟದಲ್ಲಿ ಸಂಘಟನೆ ನಡೆಸಿದ್ದರು. ಇದೀಗ ಪಕ್ಷದ ಬಲವರ್ಧನೆಗೆ ಯುವ ಪಡೆಯನ್ನು ಕಟ್ಟುತ್ತಿದ್ದಾರೆ.

ಶುಕ್ರವಾರದಂದು (ಆಗಸ್ಟ್​ 30) ಎಐಸಿಸಿ ಪದಾಧಿಕಾರಿಗಳ ಪುನಾರಚನೆ ಮಾಡಲಾಗಿದೆ. ಇದಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುದ್ರೆ ಹಾಕಿದ್ದಾರೆ. ಪದಾಧಿಕಾರಿಗಳ ಆಯ್ಕೆಯಲ್ಲಿ ರಾಹುಲ್​ ಗಾಂಧಿ ಅವರ ಪ್ರಭಾವ ದೊಡ್ಡದಾಗಿ ಕೆಲಸ ಮಾಡಿದೆ ಎಂಬುದು ಪಕ್ಷದ ಮೂಲಗಳ ಮಾಹಿತಿ.

ಪ್ರಕಟಿಸಲಾದ ಎಐಸಿಸಿ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಹಲವಾರು ವರ್ಷಗಳಿಂದ ತೆರೆಮರೆಯಲ್ಲಿ ಶ್ರಮಿಸುತ್ತಿರುವ ಹಲವಾರು ಯುವ ಮುಖಗಳನ್ನು ಸೇರ್ಪಡೆಗೊಳಿಸಲಾಗಿದೆ. ಭವಿಷ್ಯದ ಸವಾಲುಗಳಿಗೆ ಪಕ್ಷವನ್ನು ಸಜ್ಜುಗೊಳಿಸಲು ಹೊಸ ನಾಯಕರಿಗೆ ಹೊಣೆಗಾರಿಕೆ ನೀಡಲಾಗಿದೆ.

ಜಾತಿ, ವಯಸ್ಸು ಮಾನದಂಡ: ಜಾತಿಗಣತಿ ನಡೆಸಬೇಕು ಎಂದು ಆಗ್ರಹಿಸುತ್ತಿರುವ ರಾಹುಲ್​ ಗಾಂಧಿ ಅವರು, ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳಲ್ಲಿ ಸುಮಾರು 60 ಪ್ರತಿಶತ ಎಸ್​​ಸಿ, ಎಸ್​​ಟಿ, ಒಬಿಸಿ ಸಮುದಾಯಗಳಿಗೆ ಸೇರಿದ್ದಾರೆ. ಜೊತೆಗೆ '50 ಅಂಡರ್​​ 50' ಎಂಬ ನಿಯಮವನ್ನೂ ಅನುಸರಿಸಲಾಗಿದೆ. ಪದಾಧಿಕಾರಿಗಳ ವಯಸ್ಸು 50 ವರ್ಷಕ್ಕಿಂತ ಕಡಿಮೆ ಇರಬೇಕು ಎಂಬುದನ್ನು ರಾಜಸ್ಥಾನದ ಉದಯಪುರದಲ್ಲಿ 2022 ರಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ಅಂಗೀಕರಿಸಲಾಯಿತು.

ಇತ್ತೀಚೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಯುವ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಸಂಘಟನೆಯನ್ನು ಬಲಪಡಿಸುವ ಬಗ್ಗೆ ಅವರೊಂದಿಗೆ ಚರ್ಚಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳ ಹೊಣೆಗಾರಿಕೆ ಏನು, ಪಕ್ಷ ಅವರಿಂದ ಏನು ಬಯಸುತ್ತದೆ ಎಂಬುದನ್ನು ಸೆಪ್ಟೆಂಬರ್​ 3ನೇ ತಾರೀಖಿನಂದು ನಡೆಯುವ ಸಮಾವೇಶದಲ್ಲಿ ರಾಹುಲ್​ ಗಾಂಧಿ ಮತ್ತು ಮಲ್ಲಿಕಾರ್ಜುನ್​ ಖರ್ಗೆ ಅವರ ವಿವರಿಸಲಿದ್ದಾರೆ.

''ಹಲವು ವರ್ಷಗಳ ಹಿಂದೆ ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಈಗ ಮತ್ತೆ ಹಲವಾರು ಯುವಕರನ್ನು ಸೇರಿಸಿಕೊಳ್ಳಲಾಗಿದೆ. ಪ್ರಮುಖ ಜವಾಬ್ದಾರಿ ನೀಡಲಾಗಿದೆ. ರಾಹುಲ್ ಗಾಂಧಿ ಅವರು ಪಕ್ಷವನ್ನ ಬಲವರ್ಧನೆ ಮಾಡಲು ಉತ್ಸುಕರಾಗಿದ್ದಾರೆ. ಪಕ್ಷ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ'' ಎಂದು ಎಐಸಿಸಿ ಕಾರ್ಯಾಧ್ಯಕ್ಷ ಬಿಎಂ ಸಂದೀಪ್ ಈಟಿವಿ ಭಾರತ್‌ಗೆ ತಿಳಿಸಿದರು.

ಇದನ್ನೂ ಓದಿ: ಡಿಸಿಎಂ ಡಿಕೆಶಿ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಏನಿದೆ? - congress Appeal Governor

ETV Bharat Logo

Copyright © 2024 Ushodaya Enterprises Pvt. Ltd., All Rights Reserved.