ETV Bharat / bharat

'ಕೌನ್ ಬನೇಗಾ ಕರೋಡ್​​ಪತಿ 'ಯಲ್ಲಿ ಪವನ್ ಕಲ್ಯಾಣ್ ಬಗ್ಗೆ ಪ್ರಶ್ನೆ’: ಏನದು ಕ್ವೆಶ್ಚನ್?; ಸ್ಪರ್ಧಾಳು ಈ ಪ್ರಶ್ನೆಗೆ ಉತ್ತರ ನೀಡಿದರಾ? - PAWAN KALYAN QUESTION KBC - PAWAN KALYAN QUESTION KBC

ಕೌನ್​ ಬನೇಗಾ ಕರೋಡ್​ಪತಿಯಲ್ಲೂ ಪವನ್​ ಕಲ್ಯಾಣ ಮಿಂಚಿದ್ದಾರೆ. ಆ ಕಾರ್ಯಕ್ರಮದಲ್ಲಿ ಅವರ ಹೆಸರು ಹವಾ ಕ್ರಿಯೇಟ್​ ಮಾಡಿದ್ದೇಕೆ?

Etv Bharat
Etv Bharat (Etv Bharat)
author img

By ETV Bharat Karnataka Team

Published : Sep 14, 2024, 5:12 PM IST

ಹೈದರಾಬಾದ್: ನಾಯಕನಾಗಿ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಪವನ್ ಕಲ್ಯಾಣ್ ರಾಜಕೀಯದಲ್ಲೂ ಇತಿಹಾಸ ಸೃಷ್ಟಿಸಿದ್ದಾರೆ. ಜನಸೇನಾ ಪಕ್ಷದಿಂದ ಸ್ಪರ್ಧಿಸಿದ ಎಲ್ಲರೂ ಭಾರಿ ಬಹುಮತದೊಂದಿಗೆ ಗೆದ್ದಿರುವುದರಿಂದ ಜನಮೆಚ್ಚುಗೆ ಪಡೆದಿದ್ದಾರೆ. ಅಂದ ಹಾಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷದಿಂದ ಸ್ಪರ್ಧಿಸಿದ್ದ ಎಲ್ಲ 21 ಅಭರ್ಥಿಗಳು ಶಾಸಕರಾಗಿ ಆಯ್ಕೆ ಆಗಿದ್ದರು. ಅಷ್ಟೇ ಏಕೆ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲೂ ಜನಸೇನಾ ಪಕ್ಷದ ಇಬ್ಬರು ಅಭ್ಯರ್ಥಿಗಳು ಸಂಸದರಾಗಿ ಆಯ್ಕೆ ಆಗಿದ್ದಾರೆ.

ಇದರೊಂದಿಗೆ ಪವನ್ ಹೆಸರು ದೇಶಾದ್ಯಂತ ಜನಪ್ರಿಯವಾಯಿತು. ಈ ಎಲ್ಲ ವಿಶೇಷತಗೆಳ ನಡುವೆ ದೇಶದ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಪವನ್ ಕಲ್ಯಾಣ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಲಾಗಿದೆ.

ಸ್ಪರ್ಧಾಳುವಿಗ ಬಿಗ್​​​ ಬಿ ಅಮಿತಾಬ್​ ಬಚ್ಚನ್​ ಕೇಳಿದ ಪ್ರಶ್ನೆ ಯಾವುದು?: ಪ್ರಸ್ತುತ, ಕೌನ್ ಬನೇಗಾ ಕರೋಡ್​​ಪತಿಯ 16 ನೇ ಸೀಸನ್ ಆರಂಭವಾಗಿರುವುದು ಗೊತ್ತೇ ಇದೆ. ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಈ ಕಾರ್ಯಕ್ರಮದ ಹೋಸ್ಟ್ ಮಾಡುತ್ತಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ಬಿಗ್ ಬಿ ಸ್ಪರ್ಧಿಯೊಬ್ಬರಿಗೆ ಪವನ್ ಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದ್ದಾರೆ. 'ಜೂನ್ 2024 ರಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಟ ಯಾರು?', ಎಂಬ ಪ್ರಶ್ನೆಯನ್ನು ಅವರು ಸ್ಪರ್ಧಾರ್ಥಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಸ್ಪರ್ಧಿಯು 'ಪ್ರೇಕ್ಷಕರ ಸಮೀಕ್ಷೆ' ಆಯ್ಕೆಯನ್ನು ಆರಿಸಿಕೊಂಡರು. 50 ಕ್ಕೂ ಹೆಚ್ಚು ಪ್ರೇಕ್ಷಕರು ಪವನ್ ಕಲ್ಯಾಣ್ ಹೇಳಿದ್ದಾರೆ. ಇದರೊಂದಿಗೆ ಅವರು ಪವನ್ ಹೆಸರನ್ನು ಲಾಕ್ ಮಾಡಿದ್ದಾರೆ. ಅದು ಸರಿಯಾದ ಉತ್ತರವಾಗಿದ್ದರಿಂದ ಸ್ಪರ್ಧಿ 1.60 ಲಕ್ಷ ರೂ.ಗಳನ್ನು ಗೆದ್ದು ಮುಂದಿನ ಪ್ರಶ್ನೆಗೆ ಅವಕಾಶ ಪಡೆದುಕೊಂಡರು.

ಅವರ ಹೊಸ ಸಿನಿಮಾಗಳಿಗೆ ಅಭಿಮಾನಿಗಳ ಖಾತರ: ಸದ್ಯ ಪವನ್ ರಾಜಕೀಯದಲ್ಲಿ ಬ್ಯುಸಿ ಆಗಿರುವುದರಿಂದ ಅವರ ಸಿನಿಮಾಗಳಿಗಾಗಿ ಅವರ ಅಭಿನಯದ ಹೊಸ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅವರು ಓಜಿ, ಹರಿಹರ ವೀರಮಲ್ಲು ಮತ್ತು ಉಸ್ತಾದ್ ಭಗತ್ ಸಿಂಗ್ ಚಿತ್ರೀಕರಣವನ್ನು ಪೂರ್ಣಗೊಳಿಸಬೇಕಾಗಿದೆ. ಸಾರ್ವತ್ರಿಕ ಮತ್ತು ವಿಧಾನಸಭಾ ಚುನಾವಣೆಯ ಕಾರಣದಿಂದ ಆಯಾ ಚಿತ್ರಗಳ ಚಿತ್ರೀಕರಣವನ್ನು ಮುಂದೂಡಲಾಗಿತ್ತು. ಈ ಮೂರು ಸಿನಿಮಾಗಳ ಪ್ರೋಮೋಗಳು ಮತ್ತು ಗ್ಲಿಂಪ್ಸ್‌ಗಳು ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಇತ್ತೀಚೆಗಷ್ಟೇ ಪವನ್ ಅವರೇ ಸಿನಿಮಾದಲ್ಲಿ ನಟಿಸುವುದಾಗಿ ಘೋಷಿಸಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಬೋಲ್ಡ್​​ ಲುಕ್​​ಗೆ ಹುಬ್ಬೇರಿಸಿದ ಫ್ಯಾನ್ಸ್​​: ಗಂಡ, ಮಗಳೊಂದಿಗೆ ಫ್ರಾನ್ಸ್​​​ನಲ್ಲಿ ದೇಸಿ ಗರ್ಲ್​​ - Priyanka Chopra Stunning Pictures

ETV Bharat Logo

Copyright © 2025 Ushodaya Enterprises Pvt. Ltd., All Rights Reserved.