ETV Bharat / bharat

ಶಂಭು ಗಡಿ ಬಳಿ ಪ್ರತಿಭಟನಾನಿರತ ರೈತರ ಮೇಲೆ ಆಶ್ರುವಾಯು ಬಳಕೆ - FARMERS AT SHAMBHU BORDER

ರೈತರು ಈ ಹಿಂದೆ ಎರಡು ಬಾರಿ ಡಿಸೆಂಬರ್​ 6 ಮತ್ತು ಡಿಸೆಂಬರ್​ 8 ರಂದು ದೆಹಲಿಯತ್ತ ಮೆರವಣಿಗೆ ಕೈಗೊಂಡರೂ ಯಶಸ್ವಿಯಾಗಿಲ್ಲ. ಶಂಭುಗಡಿ ಬಳಿಯೇ ಪೊಲೀಸರು ರೈತರನ್ನು ತಡೆದು ನಿಲ್ಲಿಸಿದ್ದರು.

punjab-tear-gas-water-cannon-used-against-protesting-farmers-at-shambhu-border
ಶಂಭು ಗಡಿ ಬಳಿ ರೈತರನ್ನು ತಡೆದ ಪೊಲೀಸರು (ANI)
author img

By PTI

Published : 3 hours ago

ಚಂಡೀಗಢ: ದೆಹಲಿಯತ್ತ ಕಾಲ್ನಡಿಗೆಗೆ ಮುಂದಾಗಿದ್ದ ರೈತರ ಮೆರವಣಿಗೆ ಶಂಭು ಗಡಿ ದಾಟಲು ಯತ್ನಿಸಿದಾಗ ಅವರ ಮೇಲೆ ಹರಿಯಾಣ ಪೊಲೀಸರು ಆಶ್ರವಾಯು ಪ್ರಯೋಗಿಸಿದ್ದಾರೆ.

101 ರೈತರ ಗುಂಪು ಕಾಲ್ನಡಿಗೆ ಜಾಥವು ದೆಹಲಿಯತ್ತ ಇಂದು ಸಾಗಿತು. ಈ ಹಿನ್ನೆಲೆ ಶಂಭು ಗಡಿ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಧ್ಯಾಹ್ನ 12ರ ಸುಮಾರಿಗೆ ಪಂಜಾಬ್​ ಹರಿಯಾಣ ಗಡಿ ಶಂಭು ಬಳಿ ಪ್ರತಿಭಟನಾಕಾರರು ಮುನ್ನುಗ್ಗಲು ಪ್ರಯತ್ನಿಸಿದರು. ಅವರನ್ನು ನಿಯಂತ್ರಿಸಲು ಹಾಕಿದ್ದ ಬ್ಯಾರಿಕೇಡ್​ ಸಮೀಪಿಸುತ್ತಿದ್ದಂತೆ ಪೊಲೀಸರು ರೈತರನ್ನು ತಡೆಯಲು ಮುಂದಾದರು.

ಆಶ್ರುವಾಯು ಪ್ರಯೋಗದಿಂದ ಗಾಯಗೊಂಡ ರೈತರನ್ನು ಪ್ರತಿಭಟನಾ ಸ್ಥಳದಲ್ಲಿದ್ದ ಅಂಬ್ಯುಲೆನ್ಸ್​​ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಇದಕ್ಕೂ ಮೊದಲು, ಅಂಬಾಲಾ ಡೆಪ್ಯುಟಿ ಕಮಿಷನರ್ ಪಾರ್ಥ್ ಗುಪ್ತಾ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಎಸ್ ಭೋರಿಯಾ ಅವರು ಪ್ರತಿಭಟನಾನಿರತ ರೈತರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ರಾಷ್ಟ್ರ ರಾಜಧಾನಿ ಕಡೆಗೆ ಹೋಗಲು ದೆಹಲಿಯಿಂದ ಅನುಮತಿ ಪಡೆಯಲು ಮನವೊಲಿಸಲು ಪ್ರಯತ್ನಿಸಿದರು. ಆದಾಗ್ಯೂ ರೈತರು ಇದನ್ನು ನಿರಾಕರಿಸಿ, ದೆಹಲಿಯತ್ತ ತಮ್ಮನ್ನು ಹೋಗಲು ಬಿಡುವಂತೆ ಭದ್ರತಾ ಸಿಬ್ಬಂದಿಗಳಿಗೆ ಒತ್ತಾಯಿಸಿದರು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ, ರೈತರ ಗುಂಪನ್ನು ಹರಿಯಾಣ ಪೊಲೀಸರು ಬ್ಯಾರಿಕೇಡ್‌ ಬಳಿ ತಡೆದು ಮುಂದೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ತಿಳಿಸಿದರು.

ರೈತರು ಈ ಹಿಂದೆ ಎರಡು ಬಾರಿ ಡಿಸೆಂಬರ್​ 6 ಮತ್ತು ಡಿಸೆಂಬರ್​ 8ರಂದು ದೆಹಲಿಯತ್ತ ಮೆರವಣಿಗೆ ಕೈಗೊಂಡರೂ ಇವು ಯಶಸ್ವಿಯಾಗಿರಲಿಲ್ಲ. ಶಂಭು ಗಡಿ ಬಳಿಯೇ ಪೊಲೀಸರು ರೈತರನ್ನು ತಡೆದು ನಿಲ್ಲಿಸಿದರು.

ಸಂಯುಕ್ತ ಕಿಸಾನ್​ ಮೋರ್ಚಾ ಮತ್ತು ಕಿಸಾನ್​ ಮಜ್ದೂರ್​​ ಮೋರ್ಚಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್​ಪಿ) ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ತಮ್ಮೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.

ರೈತ ಪ್ರತಿಭಟನೆ ಹಿನ್ನೆಲೆ ಅಂಬಲಾದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್​ 163 ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಐದು ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡುವಂತಿಲ್ಲ ಎಂದು ತಿಳಿಸಿದೆ.

ರೈತರ ದೆಹಲಿ ಚಲೋ ಹಿನ್ನೆಲೆಯಲ್ಲಿ ಅಂಬಾಲದಲ್ಲಿ ಇಂಟರ್​ನೆಟ್​ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಡಿಸೆಂಬರ್​ 17ರ ವರೆಗೆ ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಇಂದು ಮತ್ತೆ ದೆಹಲಿಯತ್ತ ರೈತರ ನಡಿಗೆ; ಶಂಭು ಗಡಿಯಲ್ಲಿ ಭಾರಿ ಬಿಗಿ ಬಂದೋಬಸ್ತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.