ETV Bharat / bharat

ಪೋರ್ಷೆ ಕಾರು ಅಪಘಾತ ಪ್ರಕರಣ: ಆರೋಪಿ ಬಾಲಕನ ತಾಯಿಯನ್ನು ಬಂಧಿಸಿದ ಪುಣೆ ಪೊಲೀಸರು - Porsche car accident case

ಪೋರ್ಷೆ ಕಾರು ಅಪಘಾತ ಪ್ರಕರಣದ ಆರೋಪಿ ಬಾಲಕನ ತಾಯಿಯನ್ನು ರಕ್ತ ಮಾದರಿಗಳನ್ನು ತಿರುಚಿರುವುದಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಬಂಧಿಸಿದ್ದಾರೆ.

PUNE POLICE  PORSCHE CAR ACCIDENT CASE  MAHARASHTRA
ಪುಣೆ ಹಿಟ್ ಅಂಡ್ ರನ್ ಪ್ರಕರಣ (ETV Bharat)
author img

By PTI

Published : Jun 1, 2024, 10:22 AM IST

ಪುಣೆ (ಮಹಾರಾಷ್ಟ್ರ): ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ಅಪ್ರಾಪ್ತ ಬಾಲಕನ ತಂದೆ ಮತ್ತು ಅಜ್ಜನ ಬಂಧನದ ನಂತರ, ಇದೀಗ ಪುಣೆ ಪೊಲೀಸರು ಆತನ ತಾಯಿಯನ್ನೂ ಬಂಧಿಸಿದ್ದಾರೆ. ರಕ್ತದ ಮಾದರಿ ತಿರುಚಿದ ಪ್ರಕರಣದಲ್ಲಿ ಅರೆಸ್ಟ್​ ಮಾಡಲಾಗಿದೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

''ಆರೋಪಿ ಬಾಲಕನ ತಾಯಿಯನ್ನು ಇಂದು (ಶನಿವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ರಕ್ತದ ಮಾದರಿ ತಿರುಚಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದ್ದು, ಕ್ರೈಂ ಬ್ರಾಂಚ್‌ನಿಂದ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ವಾರ್ಡ್ ಬಾಯ್​ನನ್ನು ಈಗಾಗಲೇ ಬಂಧಿಸಲಾಗಿದೆ. ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಬಾಲಕನ ತಂದೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಸಸೂನ್ ಆಸ್ಪತ್ರೆಯಲ್ಲಿ ಖಾಸಗಿ ವ್ಯಕ್ತಿಯಿಂದ ಅಪ್ರಾಪ್ತ ಬಾಲಕನ ರಕ್ತದ ಮಾದರಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂಬುದು ಇತ್ತೀಚೆಗೆ ವರದಿಯಾಗಿದೆ. ರಕ್ತದ ಮಾದರಿಗಳು ಅಪ್ರಾಪ್ತ ಬಾಲಕನ ತಾಯಿಗೆ ಸೇರಿದ್ದವು. ಇದರಿಂದ ಪುಣೆ ಪೊಲೀಸರು ಅಪ್ರಾಪ್ತ ಬಾಲಕನ ತಾಯಿಯನ್ನು ಬಂಧಿಸಿ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಆದೇಶ ನೀಡಿದ್ದರು.

ಪ್ರಕರಣದ ಹಿನ್ನೆಲೆ: ಮೇ 19 ರಂದು ಬೆಳಗ್ಗೆ ಆರೋಪಿ ಬಾಲಕ ಕುಡಿದ ಅಮಲಿನಲ್ಲಿ ಬೈಕ್​ನಲ್ಲಿ ಹೊರಟಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದ. ಈ ಘಟನೆಯಲ್ಲಿ ಬೈಕ್​ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದರು. ಆರಂಭದಲ್ಲಿ ಆರೋಪಿ ಮದ್ಯ ಸೇವಿಸಿಲ್ಲ ಎಂಬ ವರದಿ ಬಂದಿತ್ತು. ಆ ರಾತ್ರಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿತ್ತು.

ಪುಣೆಯ ಸಸೂನ್ ಆಸ್ಪತ್ರೆಯ ವೈದ್ಯರು ಅಪ್ರಾಪ್ತರ ರಕ್ತದ ಮಾದರಿಯನ್ನು ಬದಲಾಯಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಅಪಘಾತಕ್ಕೆ ಕಾರಣನಾದ ಅಪ್ರಾಪ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿಯ ಮನೆಯವರು ವೈದ್ಯರಿಗೆ ಹಣದ ಆಮಿಷವೊಡ್ಡಿದ್ದರು. ಡಾ.ಅಜಯ್ ತಾವರೆ ಅವರು ಸಸೂನ್ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಮುಖ್ಯಸ್ಥರಾಗಿದ್ದಾರೆ ಹಾಗು ಡಾ. ಶ್ರೀಹರಿ ಹರ್ಲೋಲ್ ಅವರು ತುರ್ತು ಚಿಕಿತ್ಸಾ ವಿಭಾಗದಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿದ್ದಾರೆ.

ಇದಾದ ನಂತರ ಅಪ್ರಾಪ್ತನ ರಕ್ತದ ಮಾದರಿಯನ್ನು ಶ್ರೀಹರಿ ಹರ್ಲೋಲ್ ತೆಗೆದುಕೊಂಡಿದ್ದರು. ಅದರಲ್ಲಿ ಆಲ್ಕೋಹಾಲ್ ಇರಬಹುದೆಂದು ತಿಳಿದು ಅದನ್ನು ಬದಲಾಯಿಸಿದ್ದರು. ಇಷ್ಟೇ ಅಲ್ಲ, ರಜೆಯಲ್ಲಿದ್ದ ಡಾ. ಅಜಯ್ ತಾವ್ರೆ ಈ ಅಪರಾಧದಲ್ಲಿ ಭಾಗಿಯಾಗಿದ್ದರು. ನಂತರ, ಡಿಎನ್‌ಎ ಪರೀಕ್ಷೆಗಾಗಿ ಅಪ್ರಾಪ್ತನ ರಕ್ತದ ಮಾದರಿಯನ್ನು ಮತ್ತೊಂದು ಲ್ಯಾಬ್​ಗೆ ಕಳುಹಿಸಿದ್ದರಿಂದ ಪುಣೆ ಪೊಲೀಸರಿಗೆ ರಕ್ತದ ಮಾದರಿ ಬದಲಾಗಿರುವುದು ತಿಳಿದಿತ್ತು. ಅಪಘಾತದ ದಿನ ಡಾ.ಅಜಯ್ ತಾವ್ರೆ ಮತ್ತು ಆರೋಪಿಯ ತಂದೆ ವಿಶಾಲ್ ಅಗರ್ವಾಲ್ ನಡುವೆ ದೂರವಾಣಿ ಸಂಭಾಷಣೆ ನಡೆದಿರುವುದು ತನಿಖೆಯಿಂದ ತಿಳಿದಿದೆ ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ : 2 ಸಾವು , ಮುಂದುವರೆದ ರಕ್ಷಣಾ ಕಾರ್ಯಾಚರಣೆ - Flood situation in Assam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.