ETV Bharat / bharat

ಸ್ವಕ್ಷೇತ್ರ ಕಾಶಿಗೆ ಪ್ರಧಾನಿ ಮೋದಿ ಭೇಟಿ: ಇಂದು ಕಿಸಾನ್​ ಸಮ್ಮಾನ್​ ಯೋಜನೆಯ ಹಣ ಬಿಡುಗಡೆ - PM Modi to release KISAN MONEY - PM MODI TO RELEASE KISAN MONEY

PM Modi to visit Uttar Pradesh: ಪ್ರಧಾನಿ ಮೋದಿ ಇಂದು ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಲಿದ್ದು, ರೈತರೊಂದಿಗೆ ಕೆಲವು ಹೊತ್ತು ಸಂವಾದ ನಡೆಸಲಿದ್ದಾರೆ. ಈ ವೇಳೆ ಸ್ಥಳೀಯರು ಅವರನ್ನು 100 ಕ್ವಿಂಟಾಲ್ ಗುಲಾಬಿ ನೀಡಿ ಸ್ವಾಗತಿಸಲಿದ್ದಾರೆ. ಪ್ರಧಾನಿ ಎರಡು ದಿನಗಳ ಕಾಲ ತಮ್ಮ ಸ್ವಕ್ಷೇತ್ರ ವಾರಾಣಸಿಯ ಭೇಟಿ ಹಿನ್ನೆಲೆ ಭಾರೀ ಸಿದ್ಧತೆ ಮಾಡಲಾಗಿದೆ.

PM MODI VISITS UP
ಪ್ರಧಾನಿ ನರೇಂದ್ರ ಮೋದಿ (IANS)
author img

By ANI

Published : Jun 18, 2024, 10:09 AM IST

ವಾರಾಣಸಿ (ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರವಾದ ಕಾಶಿಗೆ ಇಂದು ಭೇಟಿ ನೀಡುತ್ತಿದ್ದಾರೆ. ಅವರು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಗರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಹಾಗಾಗಿ ಅವರ ಆಗಮನದ ಹಿನ್ನೆಲೆ ದೇಗುಲದ ಆಡಳಿತ ಮಂಡಳಿ ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಈ ಪ್ರವಾಸ ಮೊದಲಿಗೆ ರೈತ ಸಮಾವೇಶದಿಂದ ಆರಂಭವಾಗಲಿದ್ದು, ಭೇಟಿ ವೇಳೆ ಮೋದಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತು ಕೂಡ ಬಿಡುಗಡೆ ಮಾಡಲಿದ್ದಾರೆ. ಮೆಹಂದಿಗಂಜ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಪಿಎಂಒ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Prime Minister Narendra Modi is set to visit Uttar Pradesh and Bihar on June 18 and 19, Tuesday and Wednesday
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸಿದ್ಧಗೊಂಡ ಕಾಶಿ (ETV Bharat)

ಕೃಷಿ ಸಖಿಗಳಾಗಿ ತರಬೇತಿ ಪಡೆದ 30 ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಮಾಣ ಪತ್ರ ನೀಡಿ, ಕಾಶಿಯಿಂದ ಡಿಜಿಟಲ್ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಕೆಸಿ) ಕೂಡ ಬಿಡುಗಡೆ ಮಾಡಲಿದ್ದಾರೆ. ಇದೇ ಸಮಾವೇಶದಲ್ಲಿ ಪ್ರಧಾನಿ ಮೋದಿ ರೈತರೊಂದಿಗೆ ಸಂವಾದ ನಡೆಸುವುದು ಮಾತ್ರವಲ್ಲದೇ ಅವರ ಸ್ಟಾಲ್‌ಗಳಿಗೆ ಭೇಟಿ ನೀಡಿ ಅವರು ಬೆಳೆದ ಉತ್ಪನ್ನಗಳನ್ನು ಕೂಡ ವೀಕ್ಷಿಸಲಿದ್ದಾರೆ. ಕಿಸಾನ್ ಸಂವಾದ ಕಾರ್ಯಕ್ರಮದಡಿ 21 ರೈತರೊಂದಿಗೆ ನೇರವಾಗಿ ಕೂಡ ಸಂವಾದ ನಡೆಸಲಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ರೋಡ್​ ಶೋ ನಡೆಸಲಿದ್ದಾರೆ. ಬಳಿಕ ಪುರಾತನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದಾರೆ. ಕಾಶಿಯ ಕೊತ್ವಾಲ್ ಕಾಲಭೈರವ್ ಮತ್ತು ಬಾಬಾ ವಿಶ್ವನಾಥನ ದರ್ಶನ ಮತ್ತು ಪೂಜೆಯ ನಂತರ ಅವರು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಮಾತೆಯ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದು ಅವರ ಐದನೇ ಬಾರಿಗೆ ಭಾಗವಹಿಸುವಿಕೆ ಆಗಲಿದೆ. ವಿಶ್ವನಾಥ ದೇವಸ್ಥಾನದಲ್ಲಿ ಷೋಡಶೋಪಚಾರ ಪೂಜೆಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಲಾಗಿದೆ.

ಕಾಶಿಯಲ್ಲಿರುವ ತಮ್ಮ ಮನೆಗೂ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ. ತಮ್ಮ ಸ್ವಕ್ಷೇತ್ರ ವಾರಾಣಸಿಯ ಭೇಟಿ ಹಿನ್ನೆಲೆ ಭಾರೀ ಸಿದ್ಧತೆ ಕೈಗೊಳ್ಳಲಾಗಿದೆ . ಮೆಹಂದಿಗಂಜ್‌ನಲ್ಲಿ ನಡೆಯಲಿರುವ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ 50 ಸಾವಿರ ರೈತರು ಭಾಗವಹಿಸುವ ಸಾಧ್ಯತೆ ಇದೆ. ಡೋಲು, ಶಂಖ, ಡಮರು ದಳ ಮತ್ತು ಪುಷ್ಪವೃಷ್ಟಿ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ಕೋರಲಾಗುತ್ತದೆ. ಸ್ಥಳೀಯರು 100 ಕ್ವಿಂಟಾಲ್ ಗುಲಾಬಿ ನೀಡಿ ಅವರನ್ನು ಸ್ವಾಗತಿಸಲಿದ್ದಾರೆ ಎಂದು ಪಕ್ಷ ವಕ್ತಾರರು ಹೇಳಿಕೊಂಡಿದ್ದಾರೆ.

ದರ್ಶನದ ಬಳಿಕ, ಪ್ರಧಾನಿ ಮೋದಿ ಬರೇಕಾ ಅತಿಥಿ ಗೃಹಕ್ಕೆ ತೆರಳಲಿದ್ದು, ಅಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ಅವರು ಮರುದಿನ ಬೆ. 8 ಗಂಟೆಗೆ ವಿಮಾನದಲ್ಲಿ ತಮ್ಮ ಗಮ್ಯಸ್ಥಾನಕ್ಕೆ ತೆರಳಲಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ, ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಜಿ, ಉತ್ತರ ಪ್ರದೇಶ ಸರ್ಕಾರದ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ ಸೇರಿದಂತೆ ಹಲವರು ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಅವರ ಜರ್ನಿ ಮೊದಲ ಚುನಾವಣೆ ಸೋಲಿನೊಂದಿಗೆ ಆರಂಭವಾಗಲಿದೆ: ಬಿಜೆಪಿಯ ದಿನೇಶ್ ಶರ್ಮಾ ಭವಿಷ್ಯ - Priyanka Gandhi first election

ETV Bharat Logo

Copyright © 2025 Ushodaya Enterprises Pvt. Ltd., All Rights Reserved.