ನವದೆಹಲಿ: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಸಂಭ್ರಮ. 74ನೇ ವಸಂತಕ್ಕೆ ಕಾಲಿಟ್ಟಿರುವ ಮೋದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ಶುಭ ಕೋರಿದ್ದಾರೆ.
प्रधानमंत्री श्री @narendramodi जी को जन्मदिवस की हार्दिक बधाई एवं शुभकामनाएं। आपने अपने व्यक्तित्व एवं कृतित्व के बल पर असाधारण नेतृत्व प्रदान किया है तथा देश की समृद्धि और प्रतिष्ठा में वृद्धि की है। मेरी कामना है कि आपके द्वारा राष्ट्र प्रथम की भावना से किए जा रहे अभिनव…
— President of India (@rashtrapatibhvn) September 17, 2024
ರಾಷ್ಟ್ರಪತಿ ಮುರ್ಮು ಅವರು 'ಎಕ್ಸ್' ಜಾಲತಾಣದಲ್ಲಿ ಶುಭ ಕೋರಿದ್ದು, 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಿಮ್ಮ ವ್ಯಕ್ತಿತ್ವ ಮತ್ತು ಶಕ್ತಿಯ ಬಲದ ಮೇಲೆ ನೀವು ಅದ್ಭುತ ನಾಯಕತ್ವವನ್ನು ನೀಡಿದ್ದೀರಿ. ದೇಶದ ಸಮೃದ್ಧಿ ಮತ್ತು ಘನತೆಯನ್ನು ಹೆಚ್ಚಿಸಿದ್ದೀರಿ. ದೇವರು ನಿಮಗೆ ಸುದೀರ್ಘ ಆಯುರಾರೋಗ್ಯ, ಸಂತೋಷ ನೀಡಲಿ' ಎಂದು ಹಾರೈಸಿದ್ದಾರೆ.
अपने अथक परिश्रम, साधना व दूरदर्शिता से देशवासियों के जीवन में सकारात्मक बदलाव लाने वाले और भारत का गौरव बढ़ाकर विश्व में नई प्रतिष्ठा दिलाने वाले जनप्रिय प्रधानमंत्री श्री @narendramodi जी को जन्मदिवस की हार्दिक शुभकामनाएँ। ईश्वर से आपके स्वस्थ व सुदीर्घ जीवन की कामना करता हूँ।…
— Amit Shah (@AmitShah) September 17, 2024
ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಭ ಕೋರಿ, 'ಮೋದಿ ಜಿ ಅವರು ಹೊಸ ಭಾರತದ ದೃಷ್ಟಿ ಹೊಂದಿದ್ದು, ವಿಜ್ಞಾನ ಮತ್ತು ಪರಂಪರೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಅವರಲ್ಲಿರುವ ಸಮರ್ಪಣಾ ಭಾವ ಅಸಾಧ್ಯವೂ ಸಾಧ್ಯವಾಗಿಸಿದೆ. ಬಡವ ಕಲ್ಯಾಣದ ವಿಚಾರದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಭಾಶಯ ತಿಳಿಸಿ, 'ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಆರೋಗ್ಯ ಮತ್ತು ದೀರ್ಘಾಯುಷ್ಯವಿರಲಿ' ಹೊಂದಿ ಎಂದು ತಿಳಿಸಿದ್ದಾರೆ. 'ನಿಮ್ಮ ನಾಯಕತ್ವದಲ್ಲಿ ದೇಶದಿಂದ ಭಯ, ಹಸಿವು, ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಯಾಗಲಿ. ನಮ್ಮ ಭಾರತ ವಿಶ್ವನಾಯಕನ ಸ್ಥಾನವನ್ನು ಮರಳಿ ಪಡೆಯಲಿ' ಎಂದು ಆಶಿಸಿದ್ದಾರೆ.
Best wishes to Prime Minister, Shri Narendra Modi Ji on his birthday. May he be blessed with good health and long life.@narendramodi
— Mallikarjun Kharge (@kharge) September 17, 2024
ಕಾಂಗ್ರೆಸ್ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಬಿಎಸ್ಪಿ ನಾಯಕಿ ಮಾಯಾವತಿ ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಹುಟ್ಟು ಹಬ್ಬದಂದು ಒಡಿಶಾದಲ್ಲಿ ಹಲವು ಕಾರ್ಯದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಂಜಿ ಶು ಕೋರಿ, ಒಡಿಶಾದ ಜನರೊಂದಿಗೆ ನಾನು ನಿಮಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದೇನೆ. ನಿಮ್ಮ ಅಪ್ರತಿಮ ನಾಯಕತ್ವದಲ್ಲಿ ದೇಶ ಬೆಳವಣಿಗೆಯ ದಾರಿಯಲ್ಲಿ ಸಾಗುತ್ತಿದೆ. ದೇಶ ಸೇವೆ ಮಾಡಲು ನಿಮಗೆ ಆರೋಗ್ಯ ಮತ್ತು ಆಯಸ್ಸು ಸಿಗಲಿ ಎಂದಿದ್ದಾರೆ.
Warmest birthday wishes to Hon’ble Prime Minister Thiru @narendramodi. Wishing you a long life with enduring health in the years ahead.
— M.K.Stalin (@mkstalin) September 17, 2024
ತಮಿಳುನಾಡು ಸಿಎಂ ಸ್ಟಾಲಿನ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ತ್ರಿಪುರಾ ಸಿಎಂ ಮಾಣಿಕ್ ಸಾಹ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 20 ಸಾವಿರ ಮಂದಿಗೆ ಉದ್ಯೋಗ: ರಾಣಿಪೇಟೆಗೆ ಬರಲಿದೆ ಟಾಟಾದ ಜಾಗ್ವಾರ್, ಲ್ಯಾಂಡ್‌ರೋವರ್ ಕಾರ್ಖಾನೆ!