ETV Bharat / bharat

ಅ.22, 23ರಂದು ಪ್ರಧಾನಿ ಮೋದಿ ರಷ್ಯಾ ಭೇಟಿ: ಬ್ರಿಕ್ಸ್​ ಶೃಂಗದಲ್ಲಿ ಭಾಗಿ

16ನೇ ಬ್ರಿಕ್ಸ್ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ (PTI)
author img

By PTI

Published : Oct 18, 2024, 4:19 PM IST

ನವದೆಹಲಿ: 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 22 ಮತ್ತು 23ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಗುಂಪಿನ ಸದಸ್ಯ ರಾಷ್ಟ್ರಗಳು ಹಾಗೂ ಇತರ ಆಹ್ವಾನಿತರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಈ ವರ್ಷ ಪ್ರಧಾನಿ ಮೋದಿ ಅವರ ಎರಡನೇ ರಷ್ಯಾ ಭೇಟಿ ಇದಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ 2023ರ ಶೃಂಗಸಭೆಯಲ್ಲಿ ಈಜಿಪ್ಟ್, ಇರಾನ್, ಇಥಿಯೋಪಿಯಾ ಮತ್ತು ಯುಎಇಗಳಿಗೆ ಸದಸ್ಯತ್ವವನ್ನು ನೀಡುವ ಮೂಲಕ ಗುಂಪಿನ ಸದಸ್ಯ ರಾಷ್ಟ್ರಗಳ ಬಲವನ್ನು 9ಕ್ಕೆ ಹೆಚ್ಚಿಸಿದ ನಂತರ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದೆ. ಗುಂಪಿಗೆ ಸೇರುವಂತೆ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾಗಳನ್ನು ಕೂಡ ಆಹ್ವಾನಿಸಲಾಗಿತ್ತು. ಆದರೆ ಸರ್ಕಾರ ಬದಲಾದ ನಂತರ ಅರ್ಜೆಂಟಿನಾ ಗುಂಪಿಗೆ ಸೇರಲು ನಿರಾಕರಿಸಿದೆ. ಇನ್ನು ಸೌದಿ ಅರೇಬಿಯಾ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಷ್ಯಾದ ಅಧ್ಯಕ್ಷತೆಯಲ್ಲಿ ಕಜಾನ್​ನಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಕ್ಟೋಬರ್ 22-23 ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಎಂಇಎ ತಿಳಿಸಿದೆ.

"ನ್ಯಾಯಯುತ ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು" ಎಂಬ ಥೀಮ್ ಆಧರಿತ ಈ ಶೃಂಗಸಭೆಯು ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲು ನಾಯಕರಿಗೆ ವೇದಿಕೆಯಾಗಲಿದೆ. ಬ್ರಿಕ್ಸ್ ಪ್ರಾರಂಭಿಸಿದ ಉಪಕ್ರಮಗಳ ಪ್ರಗತಿಯನ್ನು ನಿರ್ಣಯಿಸಲು ಮತ್ತು ಭವಿಷ್ಯದ ಸಹಯೋಗಕ್ಕಾಗಿ ಸಂಭಾವ್ಯ ಕ್ಷೇತ್ರಗಳನ್ನು ಗುರುತಿಸಲು ಶೃಂಗಸಭೆ ಅಮೂಲ್ಯ ಅವಕಾಶವನ್ನು ನೀಡುತ್ತದೆ" ಎಂದು ಎಂಇಎ ಹೇಳಿದೆ.

ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ತಮ್ಮ ಸಹವರ್ತಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಮತ್ತು ಕಜಾನ್​ನಲ್ಲಿ ಆಹ್ವಾನಿತ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಎಂಇಎ ತಿಳಿಸಿದೆ.

ಈ ಕುರಿತು ಮಾತನಾಡಿದ ರಷ್ಯಾದ ಅಧ್ಯಕ್ಷೀಯ ಸಹಾಯಕ ಯೂರಿ ಉಷಾಕೋವ್, ಕಜಾನ್​ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ 24 ದೇಶಗಳ ನಾಯಕರು ಮತ್ತು ಒಟ್ಟು 32 ರಾಷ್ಟ್ರಗಳ ನಿಯೋಗಗಳು ಭಾಗವಹಿಸಲಿದ್ದು, ಇದು ರಷ್ಯಾದಲ್ಲಿ ನಡೆಯಲಿರುವ ಅತಿದೊಡ್ಡ ವಿದೇಶಾಂಗ ನೀತಿ ಕಾರ್ಯಕ್ರಮವಾಗಿದೆ ಎಂದರು.

ಪ್ರಮುಖ ಬ್ರಿಕ್ಸ್ ಸಭೆಯ ಹೊರತಾಗಿ ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದ ಪ್ರತಿನಿಧಿಗಳನ್ನು ಒಳಗೊಂಡ "ಬ್ರಿಕ್ಸ್ ಮತ್ತು ಜಾಗತಿಕ ದಕ್ಷಿಣ: ವಿಶ್ವದ ಭವಿಷ್ಯವನ್ನು ಒಟ್ಟಿಗೆ ನಿರ್ಮಿಸುವುದು" ಎಂಬ ವಿಷಯದ ಮೇಲೆ ಬ್ರಿಕ್ಸ್ ಪ್ಲಸ್ ಸ್ವರೂಪದಲ್ಲಿ ಕೂಡ ಸಭೆಗಳು ನಡೆಯಲಿವೆ.

ಇದನ್ನೂ ಓದಿ: ವೈಯಕ್ತಿಕ ಕಾನೂನುಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.