ಹೈದರಾಬಾದ್: ಶಾಲಾ ದಿನಗಳಲ್ಲಿ ಗಣಿತ ಓದಿದ ಪ್ರತಿಯೊಬ್ಬರಿಗೂ ಪೈ ಬಗ್ಗೆ ತಿಳಿದಿರುತ್ತೆ. ಗಣಿತದಲ್ಲಿ ಪೈ ಒಂದು ಅದ್ಭುತ ಅನ್ವೇಷಣೆ. ಗಣಿತದ ಸ್ಥಿರಾಂಕವಾಗಿರುವ π (pi) ಪೈ ಮಹತ್ವ ತಿಳಿಸಲು ಪ್ರತಿವರ್ಷ ಜುಲೈ 22ರಂದು Pi Approximation Day ಆಚರಿಸಲಾಗುತ್ತದೆ.
ಪೈ (π) ಇತಿಹಾಸ: ಪೀಟರ್ ಬೆಕ್‌ಮನ್ ರಚಿತ 'ಎ ಹಿಸ್ಟರಿ ಆಫ್ ಪೈ' ಪುಸ್ತಕದಲ್ಲಿ ಮೊದಲ ಬಾರಿಗೆ ಪೈ ಬಳಕೆ ಕುರಿತು ವಿವರಿಸಿದ್ದಾರೆ. ಈ ಪುಸ್ತಕದ ಪ್ರಕಾರ, 1706ರಲ್ಲಿ ಮೊದಲ ಬಾರಿಗೆ ಬ್ರಿಟಿಷ್ ಗಣಿತಶಾಸ್ತ್ರಜ್ಞ ವಿಲಿಯಂ ಜೋನ್ಸ್ ಅವರು ಪೈ ಚಿಹ್ನೆ 'π' ಬಳಸಿದರು. 'π' ಇದು ಗ್ರೀಕ್ ಅಕ್ಷರ. ಪರಿಧಿಯ ಸಂಕ್ಷೀಪ್ತೀಕರಣವಾಗಿ ಪೈ ಬಳಸಿದ್ದು, ಬಳಿಕ 30 ವರ್ಷಗಳ ಕಾಲ ಇದು ಪ್ರಮಾಣಿತ ಗಣಿತದ ಸಂಕೇತವಾಗಿ ಮಾರ್ಪಟ್ಟಿತ್ತು. 1737ರಲ್ಲಿ, ಸ್ವಿಸ್ ಗಣಿತಶಾಸ್ತ್ರಜ್ಞ ಲಿಯೊನ್ಹಾರ್ಡ್ ಯೂಲರ್ ಪೈ ಚಿಹ್ನೆಯನ್ನು ಅಳವಡಿಸಿಕೊಂಡು ಜನಪ್ರಿಯಗೊಳಿಸಿದರು.
18ನೇ ಶತಮಾನದ ಫ್ರೆಂಚ್ ಗಣಿತಜ್ಞ ಜಾರ್ಜಸ್ ಬಫನ್, ಅಂದಾಜಿನ ಆಧಾರದ ಮೇಲೆ ಪೈ ಲೆಕ್ಕಾಚಾರ ಮಾಡುವ ವಿಧಾನ ಕಂಡುಹಿಡಿದರು. π ಮೌಲ್ಯ ಒಂದು ಮೂಲಭೂತ ಸ್ಥಿರಾಂಕವಾಗಿದ್ದು, ಅದು ವೃತ್ತದ ಸುತ್ತಳತೆಯ ಅನುಪಾತವನ್ನು ಅದರ ವ್ಯಾಸಕ್ಕೆ ಪ್ರತಿನಿಧಿಸುತ್ತದೆ. ಇದು ಅಭಾಗಲಬ್ಧ ಸಂಖ್ಯೆ, ಅಂದರೆ ಅದನ್ನು ಸರಳ ಭಾಗವಾಗಿ ವ್ಯಕ್ತಪಡಿಸಲಾಗುವುದಿಲ್ಲ ಮತ್ತು ಅದರ ದಶಮಾಂಶ ಪ್ರಾತಿನಿಧ್ಯವು ಪುನರಾವರ್ತಿಸದೆ ಅನಂತವಾಗಿ ಮುಂದುವರಿಯುತ್ತದೆ.
Pi Approximation Day ಇತಿಹಾಸ: ವೃತ್ತದ ಸುತ್ತಳತೆಯ ಅನುಪಾತವನ್ನು ಅದರ ವ್ಯಾಸಕ್ಕೆ ಪ್ರತಿನಿಧಿಸಲು ಬಳಸಲಾಗುವ ಗ್ರೀಕ್ ಅಕ್ಷರ π (pi). ಪ್ರಾಚೀನ ಕಾಲದಿಂದಲೂ ಸುಮಾರು ನಾಲ್ಕು ಸಹಸ್ರಮಾನಗಳಿಂದ ಬಳಸಲಾಗುತ್ತಿದೆ. ಪುರಾತನ ಬ್ಯಾಬಿಲೋನಿಯನ್ನರು ವೃತ್ತದ ವಿಸ್ತೀರ್ಣವನ್ನು ಅದರ ತ್ರಿಜ್ಯ ಚೌಕದ ಮೂರು ಪಟ್ಟು ಗುಣಿಸುವ ಮೂಲಕ ಲೆಕ್ಕಾಚಾರ ಮಾಡಿದರು, ಇದರ ಪರಿಣಾಮವಾಗಿ ಪೈ ಮೌಲ್ಯವನ್ನು ಮೂರು ಎಂದು ಅಂದಾಜು ಮಾಡಲಾಗಿದೆ.
ಪುರಾತನ ಗ್ರೀಸ್‌ನ ಗಣಿತದ ಪ್ರಕಾಶಕ ಸಿರಾಕ್ಯೂಸ್‌ನ ಆರ್ಕಿಮಿಡಿಸ್ π ಅನ್ನು ಔಪಚಾರಿಕವಾಗಿ ಲೆಕ್ಕಾಚಾರ ಮಾಡಿದವರಲ್ಲಿ ಮೊದಲಿಗರು. ಅವರು π ನ ಅಂದಾಜು ಮೌಲ್ಯವು 3 1/7 ಮತ್ತು 3 10/71 ರ ನಡುವೆ ಬರುತ್ತದೆ ಎಂದು ಸಾಬೀತುಪಡಿಸಲು ಪ್ರಯತ್ನಿಸಿದರು. ಜುಲೈ 22ರಂದು ಪೈ Approximation Day ಎಂದು ಆಚರಿಸಲಾಗುತ್ತದೆ, ಏಕೆಂದರೆ 22/7 ಭಾಗವು 'π'ನ ಅಂದಾಜು ಮೌಲ್ಯ ಎಂದು ನಂಬಲಾಗಿದೆ. ಎರಡು ದಶಮಾಂಶ ಸ್ಥಾನಗಳಿಗೆ ನಿಖರವಾಗಿರುವ ಇದನ್ನು ಆರ್ಕಿಮಿಡೀಸ್ ಕಂಡುಕೊಂಡಿದ್ದರು.
ಇದು ಕುತೂಹಲದ ಸಂಗತಿ!: ಈ ದಿನದ ಜೊತೆಗೆ ನವೆಂಬರ್ 10ರಂದು ಕೂಡ ಈ ದಿನ ಆಚರಿಸಲಾಗುತ್ತದೆ, ಏಕೆಂದರೆ ಇದು ವರ್ಷದ 314 ನೇ ದಿನವಾಗಿದೆ. ಪೈ ದಿನವನ್ನು ಮಾರ್ಚ್ 14ರಂದು ಆಚರಿಸಲಾಗುತ್ತದೆ. ಇದು ತಿಂಗಳು/ದಿನಾಂಕದ ಸ್ವರೂಪದಲ್ಲಿ ಇರಿಸಿದಾಗ 3/14ರಂತೆ ಕಾಣುತ್ತದೆ.
ಭಾರತೀಯ ಗಣಿತಜ್ಞರಾದ ಮಾಧವ ಮತ್ತು ಆರ್ಯಭಟ π (ಪೈ)ನ ನಿಖರ ಮೌಲ್ಯವನ್ನು ಕಂಡುಹಿಡಿಯುವಲ್ಲಿ ಬಹಳ ಮಹತ್ವದ ಕೊಡುಗೆ ನೀಡಿದ್ದಾರೆ. ಪೀಠಗಳಂತಹ ಧಾರ್ಮಿಕ ನಿರ್ಮಾಣಗಳನ್ನು ಸುಗಮಗೊಳಿಸಲು ಅವರು ಗಣಿತದ ಲೆಕ್ಕಾಚಾರಗಳನ್ನು ಬಳಸಿದರು.
ದಿನದ ಮಹತ್ವ: ಗಣಿತ ಮತ್ತು π ನ ಆಕರ್ಷಕ ಗುಣಲಕ್ಷಣಗಳನ್ನು ಸಂಭ್ರಮಿಸಲು ಪೈ Approximation Day ದಾರಿ ಮಾಡಿ ಕೊಡುತ್ತದೆ. ಗಣಿತದ ಉತ್ಸಾಹಿಗಳು, ಶಿಕ್ಷಣತಜ್ಞರು ಮತ್ತು ವಿದ್ಯಾರ್ಥಿಗಳಿಗೆ ಪೈ ಮಹತ್ವವನ್ನು ಹಾಗೂ ಜಾಮಿಟ್ರಿ, ಟ್ರಿಗ್ನಾಮಿಟ್ರಿ, ಭೌತಶಾಸ್ತ್ರದಂತಹ ವಿವಿಧ ಕ್ಷೇತ್ರಗಳಲ್ಲಿ ಅದರ ಅನ್ವಯಗಳನ್ನು ಪ್ರಶಂಸಿಸಲು ಇದು ಅವಕಾಶವನ್ನು ಒದಗಿಸುತ್ತದೆ. ಆಕಾರಗಳ ಪ್ರದೇಶ ಮತ್ತು ಪರಿಮಾಣವನ್ನು ಲೆಕ್ಕಾಚಾರ ಮಾಡಲು ಪೈ ನಿರ್ಣಾಯಕವಾಗಿದೆ. ಟ್ರಿಗ್ನಾಮೆಟ್ರಿ ಮತ್ತು ಜಿಯೋಮೆಟ್ರಿ ಟಾಸ್ಕ್ ಪರಿಹಾಋಕ್ಕೆ ಪೈ ಅತ್ಯವಶ್ಯಕ.
Pi Approximation Day ಸಂಭ್ರಮಚಾರಣೆ: ಈ ದಿನದಂದು, ಜನರು ಸಾಮಾನ್ಯವಾಗಿ ಪೈಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಉದಾಹರಣೆಗೆ, ನೀವು ನಿಮ್ಮ ಮೆಚ್ಚಿನ ಗಣಿತಜ್ಞ ಅಥವಾ ಭೌತಶಾಸ್ತ್ರಜ್ಞರಂತೆ ಉಡುಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಮನೆಯಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪೈ ಅನ್ನು ಆನಂದಿಸಬಹುದು. ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಪೈ ಮಹತ್ವದ ಬಗ್ಗೆ ಶಿಕ್ಷಣ ನೀಡಲು ಚಟುವಟಿಕೆಗಳನ್ನು ಆಯೋಜಿಸುತ್ತವೆ. ಪೈ ಥೀಮ್ ಅಡಿ ಸ್ಪರ್ಧೆ ಅಥವಾ ರಸ ಪ್ರಶ್ನೆಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ಪೈ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳಲಾಗುತ್ತದೆ.