ETV Bharat / bharat

ಸಟ್ಟಾ ಬಜಾರ್​ ಭವಿಷ್ಯ​: ಬಿಜೆಪಿಗೆ ಆಗುತ್ತಾ ನಷ್ಟ, ಕಾಂಗ್ರೆಸ್​​​​​​​​​ಗೆ ಈ ಬಾರಿ ಎಷ್ಟು ಸ್ಥಾನ, ಪಲೋಡಿ ಲೆಕ್ಕಾಚಾರ ಇಲ್ಲಿದೆ ನೋಡಿ! - Palodi Satta Bazaar - PALODI SATTA BAZAAR

ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಮತ್ತು ಇಂಡಿಯಾ ಕೂಟ ಎಷ್ಟು ಸ್ಥಾನಗಳನ್ನು ಪಡೆಯಲಿವೆ ಎಂದು ರಾಜಸ್ಥಾನದ ಪಲೋಡಿ ಸಟ್ಟಾ ಬಜಾರ್​ ಭವಿಷ್ಯ ನುಡಿದಿದೆ.

ಪಲೋಡಿ ಸಟ್ಟಾ ಬಜಾರ್​ ಚುನಾವಣಾ ಭವಿಷ್ಯ
ಪಲೋಡಿ ಸಟ್ಟಾ ಬಜಾರ್​ ಚುನಾವಣಾ ಭವಿಷ್ಯ (Etv Bharat)
author img

By ETV Bharat Karnataka Team

Published : Jun 1, 2024, 4:11 PM IST

Updated : Jun 1, 2024, 4:36 PM IST

ನವದೆಹಲಿ: 18ನೇ ಲೋಕಸಭಾ ಚುನಾವಣೆಗೆ ಏಳನೇ ಮತ್ತು ಕೊನೆಯ ಹಂತದ ಮತದಾನ ಇಂದು ನಡೆಯುತ್ತಿದೆ. ಚುನಾವಣೆ ಮುಗಿಯುವ ಮುನ್ನವೇ ಬೆಟ್ಟಿಂಗ್​ ಬಜಾರ್​ನಲ್ಲಿ (ಸಟ್ಟಾ ಬಜಾರ್​) ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ?, ಎಷ್ಟು ಸ್ಥಾನ ಪಡೆಯಲಿದೆ ಎಂಬ ಚರ್ಚೆ ಜೋರಾಗಿದೆ. ಈ ಹಿಂದೆ ಫಲಿತಾಂಶಕ್ಕೆ ತೀರಾ ಹತ್ತಿರದ ಸೀಟುಗಳನ್ನು ಅಂದಾಜಿಸಿದ್ದ ರಾಜಸ್ಥಾನದ ಪಲೋಡಿ ಸಟ್ಟಾ ಬಜಾರ್​ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ, ಉತ್ತರಪ್ರದೇಶದಲ್ಲಿ ಹಿಂದಿಗಿಂತಲೂ ಹೆಚ್ಚು ಸೀಟು ಖೋತಾ ಆಗಲಿದೆ ಎಂದಿದೆ.

ಈ ಹಿಂದೆ ಪಲೋಡಿ ಸಟ್ಟಾ ಬಜಾರ್​ (ಬೆಟ್ಟಿಂಗ್​ ಮಾರುಕಟ್ಟೆ) ರಾಜಕೀಯ ಪಕ್ಷಗಳ ಸ್ಥಾನಗಳನ್ನು ಅಂದಾಜಿಸಿ ಭವಿಷ್ಯ ನುಡಿದಿತ್ತು. ಏಳನೇ ಹಂತದ ಮತದಾನಕ್ಕೂ ಮುನ್ನ ಹೊಸ ಭವಿಷ್ಯ ನುಡಿದಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಫಲೋಡಿ ಸಟ್ಟಾ ಬಜಾರ್‌ನ ಮೊದಲಿನ ಅಂದಾಜಿನ ಪ್ರಕಾರ, ಬಿಜೆಪಿಯು ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದಿತ್ತು. ಆದರೆ, ಹೊಸ ಅಂದಾಜಿನಲ್ಲಿ ಸಮೀಕರಣಗಳು ಬದಲಾಗಿವೆ. ಈಗಿನ ಅಂದಾಜಿನ ಪ್ರಕಾರ, I.N.D.I ಕೂಟದ ಕಾಂಗ್ರೆಸ್​ ಮತ್ತು ಎಸ್​ಪಿ ಪಕ್ಷಗಳು ಮೊದಲಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 2019 ರ ಫಲಿತಾಂಶಕ್ಕಿಂತ ಕಡಿಮೆ ಸೀಟುಗಳನ್ನು ಪಡೆಯಲಿದೆ ಎಂದಿದೆ

ಅಂದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಾನಗಳು ಇಳಿಕೆಯಾಗಲಿದ್ದು, ಈ ಬಾರಿ 55 ರಿಂದ 65 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ರಾಜ್ಯದಲ್ಲಿ ಬಲಗೊಳ್ಳಲಿದ್ದು, ಎರಡೂ ಸೇರಿ 15 ರಿಂದ 25 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.

ಪಲೋಡಿಯ ಮೊದಲ ಅಂದಾಜು (ದೇಶದಲ್ಲಿ)

  • ಬಿಜೆಪಿ+ 304-306
  • ಕಾಂಗ್ರೆಸ್+ 50

ಪಲೋಡಿಯ ಹೊಸ ಅಂದಾಜು (ದೇಶದಲ್ಲಿ)

  • ಬಿಜೆಪಿ+ 270-300
  • ಕಾಂಗ್ರೆಸ್+ 60-63

ಉತ್ತರಪ್ರದೇಶದ ಹಳೆಯ ಅಂದಾಜು

  • ಬಿಜೆಪಿ+ 62-65
  • ಇಂಡಿಯಾ ಕೂಟ 15-18

ಉತ್ತರಪ್ರದೇಶದಲ್ಲಿ ಹೊಸ ಅಂದಾಜು

  • ಬಿಜೆಪಿ+ 55-65
  • ಇಂಡಿಯಾ ಕೂಟ 15-25

ಫಲೋಡಿ ಬೆಟ್ಟಿಂಗ್​ ಮಾರುಕಟ್ಟೆಯ ಅಂದಾಜು ಬದಲಾಗುತ್ತಿದೆ. ಮೇ 13 ರಂದು ಸಟ್ಟಾ ಬಜಾರ್​ನ ಬಿಡುಗಡೆ ಮಾಡಿದ ಅಂದಾಜು ಅಂಕಿ - ಅಂಶಗಳ ಪ್ರಕಾರ, ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಲಾಗಿತ್ತು. ಕಾಂಗ್ರೆಸ್ ಕೇವಲ 40 ರಿಂದ 42 ಸ್ಥಾನಗಳನ್ನು ಪಡೆಯುತ್ತದೆ ಎಂದಿತ್ತು. ಇದಾದ ಒಂದು ವಾರದ ಬಳಿಕದ ಅಂದಾಜಿನಲ್ಲಿ ಬಿಜೆಪಿಯ ಸ್ಥಾನಗಳು 300 ಕ್ಕಿಂತ ಕಡಿಮೆಯಾಗಲಿವೆ. ಕಾಂಗ್ರೆಸ್‌ ಸ್ಥಾನಗಳು ಹೆಚ್ಚಲಿವೆ ಎಂದಿತ್ತು.

ಮುಂಬೈ ಬೆಟ್ಟಿಂಗ್ (ಸಟ್ಟಾ) ಮಾರುಕಟ್ಟೆಯ ಪ್ರಕಾರ, ಬಿಜೆಪಿ ಏಕಾಂಗಿಯಾಗಿ 350 ಸೀಟು ಗೆಲ್ಲುವುದು ಕಷ್ಟ. ಉತ್ತರಪ್ರದೇಶದಲ್ಲಿ ಕೇಸರಿ ಪಕ್ಷ 64 ರಿಂದ 66 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿತ್ತು. ಆದರೆ, 7ನೇ ಹಂತದ ಚುನಾವಣೆಗೂ ಮೊದಲು 70ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.

ಇದನ್ನೂ ಓದಿ: ದೇಶದಲ್ಲಿ ವಿಐಪಿ ಸಂಸ್ಕೃತಿ ತೊಲಗಲಿ: ಆಪ್​ ಅಭ್ಯರ್ಥಿ ಹರ್ಭಜನ್​ ಸಿಂಗ್​, ಹಳ್ಳಿಯೊಂದರಲ್ಲಿ ಮತದಾನ ಬಹಿಷ್ಕಾರ - lok sabha election 2024

Last Updated : Jun 1, 2024, 4:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.