ETV Bharat / bharat

ಒಂದು ರಾಷ್ಟ್ರ, ಒಂದು ಚುನಾವಣೆ ದೇಶಕ್ಕೆ ಅಪಾಯಕಾರಿ: ಕಮಲ್​ ಹಾಸನ್​​ - One nation one election

ಖ್ಯಾತ ನಟ, ರಾಜಕಾರಣಿ ಕಮಲ್​ ಹಾಸನ್​ ಅವರು ಒಂದು ದೇಶ, ಒಂದು ಚುನಾವಣೆಯ ಪರಿಕಲ್ಪನೆಯನ್ನು ವಿರೋಧಿಸಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.

ಕಮಲ್​ ಹಾಸನ್​​
ಕಮಲ್​ ಹಾಸನ್​​ (IANS)
author img

By PTI

Published : Sep 21, 2024, 8:02 PM IST

ಚೆನ್ನೈ (ತಮಿಳುನಾಡು): ಕೇಂದ್ರದ ಎನ್​ಡಿಎ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯು ಅಪಾಯಕಾರಿ, ದೋಷಪೂರಿತವಾಗಿದೆ. ಭಾರತಕ್ಕೆ ಇದರ ಅಗತ್ಯವಿಲ್ಲ ಮತ್ತು ಭವಿಷ್ಯದಲ್ಲಿಯೂ ಪ್ರಯೋಜನಕ್ಕೆ ಬಾರದು ಎಂದು ಖ್ಯಾತ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್​ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದರು.

2014 ರಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದಿದ್ದರೆ ಸರ್ವಾಧಿಕಾರ, ವಾಕ್ ಸ್ವಾತಂತ್ರ್ಯದ ಹರಣ ಮತ್ತು ಒಬ್ಬನೇ ನಾಯಕನ ಪ್ರಾಬಲ್ಯಕ್ಕೆ ಕಾರಣವಾಗುತ್ತಿತ್ತು ಎಂದು ಪರೋಕ್ಷವಾಗಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು.

ನಾವು ಕೊರೊನಾ ವೈರಸ್​​ಗಿಂತ ಹೆಚ್ಚು ತೀವ್ರವಾದ ಕಾಯಿಲೆಯಿಂದ ಪಾರಾಗಿದ್ದೇವೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿಯ ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯನ್ನು ಮಾರಕ ವೈರಸ್​ಗೆ ಹೋಲಿಸಿದರು.

ಈ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಚುನಾವಣೆ: ಯುರೋಪ್ ಮತ್ತು ರಷ್ಯಾದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತವೆ. ಅಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ ಎಂದು ಕಮಲ್​ ಹಾಸನ್​ ಹೇಳಿದರು. ಆದರೆ, ಈ ವ್ಯವಸ್ಥೆ ವಿಫಲವಾದ ಯಾವುದೇ ಒಂದು ದೇಶದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಲಿಲ್ಲ. ಟ್ರಾಫಿಕ್ ಸಿಗ್ನಲ್​​ ದೀಪಗಳನ್ನು ಉದಾಹರಿಸಿದ ನಟ, ಒಂದೇ ಬಣ್ಣದ ದೀಪವು ಒಂದೇ ಸಮಯದಲ್ಲಿ ಹೊತ್ತಿಕೊಂಡಿದ್ದರೆ ಏನಾಗುತ್ತದೆ ಎಂದು ಯೋಚಿಸಿ. ನಮಗೆ ಆಯ್ಕೆ ಇರಬೇಕು. ಇಲ್ಲವಾದಲ್ಲಿ ವಾಕ್​ ಸ್ವಾತಂತ್ರ್ಯ, ಸರ್ವಾಧಿಕಾರ ಬೆಳೆಯುತ್ತದೆ ಎಂದರು.

ನಟನ ರಾಜಕೀಯ ಪ್ರವೇಶ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಗೆ ಟೀಕೆ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಜನರನ್ನು ಭೇಟಿಯಾಗಲು ಮತ್ತು ಅವರ ಸಂವಹನ ನಡೆಸಲು ಇರುವ ಯಾವುದೇ ಹಾದಿಯನ್ನು ಆಯ್ಕೆ ಮಾಡಿಕೊಂಡಲ್ಲಿ ತಪ್ಪೇನು ಎಂದು ಮರು ಪ್ರಶ್ನಿಸಿದರು.

ತಾನೊಬ್ಬ ವಿಫಲ ರಾಜಕಾರಣಿ ಎಂದು ಕರೆದುಕೊಂಡ ಕಮಲ್​ ಹಾಸನ್​​, ವೈಫಲ್ಯವು ಶಾಶ್ವತವಲ್ಲ. ಪ್ರಧಾನ ಮಂತ್ರಿ ಹುದ್ದೆಯೂ ಶಾಶ್ವತವಲ್ಲ. ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರು ರಾಷ್ಟ್ರಕ್ಕೆ ಬಲವಾದ ಪ್ರಜಾಪ್ರಭುತ್ವವನ್ನು ನೀಡಿದ್ದಾರೆ. ಅದನ್ನು ಕೆಲವರು ಅಳಿಸಲು ಪ್ರಯತ್ನಿಸಿ ವಿಫಲವಾಗಿದ್ದಾರೆ ಎಂದು ಜರಿದರು.

ಕ್ಷೇತ್ರ ಮರುವಿಂಗಡಣೆಯಲ್ಲಿ ತಮಿಳುನಾಡಿಗೆ ಸಂಸತ್​ ಸ್ಥಾನ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ರಾಜ್ಯದ ಜನರು ಪ್ರಾಮಾಣಿಕ ತೆರಿಗೆ ಪಾವತಿದಾರರು. ಜನರನ್ನು ಗೌರವಿಸುವ ಬದಲು, ಅವರಿಗೇ ಶಿಕ್ಷೆಯನ್ನು ನೀಡಲು ಪ್ರಯತ್ನಿಸುತ್ತಿದ್ದೀರಿ. ಡಿಲಿಮಿಟೇಶನ್ ಪ್ರಕ್ರಿಯೆಯಿಂದಾಗಿ ತಮಿಳುನಾಡಿಗೆ ಸಂಸತ್ತಿನ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು. ತಮಿಳುನಾಡು ಈಗ 39 ಲೋಕಸಭಾ ಸ್ಥಾನಗಳನ್ನು ಹೊಂದಿದೆ.

ಇದನ್ನೂ ಓದಿ: ಬಟ್ಟೆ ಚಿಕ್ಕದು, ಕೊಳಕಾಗಿದೆ ಎಂದು ದಲಿತ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ ಹಲ್ಲೆ ಆರೋಪ: ಕೇಸ್​ ದಾಖಲು - TEACHER BEATING DALIT GIRL STUDENT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.