ETV Bharat / bharat

ಆನ್‌ಲೈನ್ ಗೇಮ್ ಸೋತ ನೋವಿನಲ್ಲಿ ಕತ್ತು ಸೀಳಿಕೊಂಡ ಯುವಕ - ಕತ್ತು ಸೀಳಿಕೊಂಡ ಯುವಕ

ಆನ್​ಲೈನ್​ ಗೇಮ್​ನಲ್ಲಿ ಸೋತ ಯುವಕನೊಬ್ಬ ತನ್ನ ಕತ್ತನ್ನು ತಾನೇ ಕುಯ್ದುಕೊಂಡಿದ್ದಾನೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ.

ಆನ್‌ಲೈನ್ ಗೇಮ್
ಆನ್‌ಲೈನ್ ಗೇಮ್
author img

By ETV Bharat Karnataka Team

Published : Feb 18, 2024, 10:54 AM IST

ಒಡಿಶಾ: ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಲೇ ಇರುತ್ತದೆ. ಕೆಲ ರಾಜ್ಯಗಳು ಈಗಾಗಲೇ ಹಲವು ಮಾರಕ ಜೂಜುಗಳನ್ನು ನಿಷೇಧಿಸಿವೆ. ಅವುಗಳು ಜೀವ, ಜೀವನವನ್ನೇ ಬಲಿ ಪಡೆಯುತ್ತಿರುವ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇಂಥದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ.

ಆನ್‌ಲೈನ್ ಗೇಮ್‌ನಲ್ಲಿ ಸೋತ ನಂತರ 24 ವರ್ಷದ ಯುವಕನೊಬ್ಬ ಬ್ಲೇಡ್‌ನಿಂದ ತನ್ನ ಕತ್ತನ್ನ ತಾನೇ ಸೀಳಿಕೊಂಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಇಂತಹ ಅಚ್ಚರಿಯ, ಆಘಾತಕಾರಿ ಘಟನೆ ನಡೆದಿದ್ದು ಒಡಿಶಾದ ಜರ್ಪಾದ ಪೊಲೀಸ್ ಠಾಣೆ ವ್ಯಾಪ್ತಿಯ ಜೆರೆಂಗ್ ಗ್ರಾಮದಲ್ಲಿ. ಫೆಬ್ರವರಿ 16 ರಂದು ಸೌಮ್ಯ ರಂಜನ್​ ನಾಯಕ್​ ಎಂಬ ಯುವಕ ಆನ್​ಲೈನ್​ ಗೇಮ್​ನಲ್ಲಿ ಸತತ ಸೋಲು ಕಂಡಿದ್ದಾನೆ. ಇದರಿಂದ ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾನೆ. ಇದು ಆತನನ್ನು ಧೃತಿಗೆಡಿಸಿದ್ದು, ಸಾವಿನ ಅಂಚಿಗೆ ಕೊಂಡೊಯ್ದಿದೆ.

ಯುವಕನ ಸ್ಥಿತಿ ಗಂಭೀರ: ಸೋತ ಕಾರಣ ಹಣ ಕಳೆದುಕೊಂಡು ತೀವ್ರ ನೊಂದಿದ್ದ ರಂಜನ್​ ಮನೆಯಲ್ಲಿದ್ದ ಹರಿತವಾದ ವಸ್ತುವಿನಿಂದ ತನ್ನ ಕತ್ತನ್ನು ತಾನೇ ಕೊಯ್ದುಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡ ಪೋಷಕರು ತಕ್ಷಣವೇ ಆತನನ್ನು ಕಟಕನ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಯುವಕನ ಜೀವದ ಬಗ್ಗೆ ಗ್ಯಾರಂಟಿ ನೀಡಿಲ್ಲ. ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಹಣದಾಸೆಗಾಗಿ ಜೀವವನ್ನೇ ಬಲಿ ಕೊಡಲು ಮುಂದಾದ ಯುವಕನ ಸ್ಥಿತಿ ಕಂಡು ಮನೆಯವರು ತೀವ್ರ ನೊಂದಿದ್ದಾರೆ. ಮೊದಲು ಯುವಕನನ್ನು ಅಂಗುಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ವೈದ್ಯರು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮ್ಮಿ, ಪೋಕರ್​ ಮೇಲಿನ ನಿರ್ಬಂಧ ತೆರವು:

ಆನ್‌ಲೈನ್ ಗೇಮ್​ಗಳಾದ ರಮ್ಮಿ ಮತ್ತು ಪೋಕರ್ ಮೇಲೆ ತಮಿಳುನಾಡು ಸರ್ಕಾರ ವಿಧಿಸಿದ್ದ ನಿಷೇಧವನ್ನು ಮದ್ರಾಸ್​ ಹೈಕೋರ್ಟ್​ ಈಚೆಗೆ ತೆರವು ಮಾಡಿದೆ. ಜೂಜಿನ ಗೇಮ್​ಗಳ ಮೇಲೆ ನಿಷೇಧ ಹೇರಬಹುದೇ ವಿನಹಃ ಕೌಶಲ್ಯ ಆಧರಿತ ಆಟಗಳಾದ ರಮ್ಮಿ, ಪೋಕರ್​ನಂತಹ ಆನ್​ಲೈನ್​ ಗೇಮ್​ಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಹೇಳಿದೆ.

ರಮ್ಮಿ ಮತ್ತು ಪೋಕರ್‌ಗಳ ಮೇಲೆ ನಿಷೇಧ ಹೇರಿದ್ದನ್ನು ಆನ್​ಲೈನ್​ ಕಂಪನಿಗಳು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದವು. ಮುಖ್ಯ ನ್ಯಾಯಮೂರ್ತಿ ಸಂಜಯ್ ವಿಜಯ್‌ಕುಮಾರ್ ಗಂಗಾಪುರವಾಲ ಮತ್ತು ನ್ಯಾಯಮೂರ್ತಿ ಆದಿಕೇಶವಲು ಅವರಿದ್ದ ಪೀಠವು ಈ ತೀರ್ಪು ನೀಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಆನ್​ಲೈನ್ ಗೇಮ್ ನಿಷೇಧಕ್ಕೆ ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.