ETV Bharat / bharat

ಅಪರೂಪದಲ್ಲಿ ಅಪರೂಪದ ತೀರ್ಪು: ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದ ಹೈಕೋರ್ಟ್, ಕಾರಣ? - Odisha HC Sensational Verdict - ODISHA HC SENSATIONAL VERDICT

Odisha HC Sensational Verdict: ಒಡಿಶಾ ಹೈಕೋರ್ಟ್ ಸಂಚಲನಕ್ಕೆ ಕಾರಣವಾಗುವ ತೀರ್ಪು ನೀಡಿದೆ. ಪೋಕ್ಸೊ ನ್ಯಾಯಾಲಯವು ಆರು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಎಸ್‌ಕೆ ಆಸಿಫ್ ಅಲಿ ಅವರ ಮರಣದಂಡನೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ. ಪ್ರತಿನಿತ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಹಿನ್ನೆಲೆ ಆತನ ಶಿಕ್ಷೆಯನ್ನು ಕಡಿತಗೊಳಿಸಲು ಹೈಕೋರ್ಟ್ ನಿರ್ಧರಿಸಿದೆ.

HIGH COURT SENSATIONAL VERDICT  CRITICISM ON ODISHA HC VERDICT  ODISHA HIGH COURT  DEATH SENTENCE TO LIFE PUNISHMENT
ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದ ಹೈಕೋರ್ಟ್ (ETV Bharat)
author img

By ETV Bharat Karnataka Team

Published : Jul 2, 2024, 9:06 PM IST

ಭುವನೇಶ್ವರ್​ (ಒಡಿಶಾ): ಒಡಿಶಾ ಹೈಕೋರ್ಟ್ ಇತ್ತೀಚೆಗೆ ಭಿನ್ನವಾದ​ ತೀರ್ಪು ನೀಡಿದೆ. ಒಡಿಶಾದ ಜಗತ್‌ಸಿಂಗ್‌ಪುರದ ಪೋಕ್ಸೋ ನ್ಯಾಯಾಲಯವು ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ್ದ ಆರೋಪಿ ಎಸ್‌ಕೆ ಆಸಿಫ್ ಅಲಿಗೆ ನೀಡಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ. ಈ ಸಂಬಂಧ ಒಡಿಶಾ ಹೈಕೋರ್ಟ್ ಜೂನ್ 27ರಂದು 106 ಪುಟಗಳ ಸುದೀರ್ಘ ತೀರ್ಪು ನೀಡಿದೆ. ಈ ತೀರ್ಪನ್ನು ನೀಡುವಾಗ ಹೈಕೋರ್ಟ್ ಪೀಠವು ಪ್ರಮುಖ ವ್ಯಾಖ್ಯಾನಗಳನ್ನು ಮಾಡಿದೆ.

ನ್ಯಾಯಮೂರ್ತಿಗಳಾದ ಎಸ್ ಕೆ ಸಾಹೂ ಮತ್ತು ಆರ್ ಕೆ ಪಟ್ನಾಯಕ್ ಅವರ ವಿಭಾಗೀಯ ಪೀಠವು ಐಪಿಸಿಯ ಸೆಕ್ಷನ್ 302/376 ಮತ್ತು ಪೋಕ್ಸೋ ಕಾಯಿದೆಯ ಸೆಕ್ಷನ್ 6 ರ ಅಡಿ ಮಗುವಿನ ಮೇಲಿನ ಅತ್ಯಾಚಾರ ಮತ್ತು ಕೊಲೆಗಾಗಿ ಶೇಖ್ ಆಸಿಫ್ ಅಲಿ ಅವರನ್ನು ವಿಚಾರಣಾ ನ್ಯಾಯಾಲಯ ದೋಷಿ ಎಂದು ಹೇಳಿದೆ. ಆದಾಗ್ಯೂ 2014 ರಲ್ಲಿ ಅಪರಾಧದ ಸಮಯದಲ್ಲಿ 26 ವರ್ಷ ವಯಸ್ಸಿನವನಾಗಿದ್ದ ಅಲಿ ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕೆಂದು ನ್ಯಾಯಾಲಯ ನಿರ್ಧರಿಸಿದೆ. ರಾಜ್ಯ ಸರ್ಕಾರವು ಸಂತ್ರಸ್ತೆಯ ಪೋಷಕರಿಗೆ 10 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ತನ್ನ ಆದೇಶದಲ್ಲಿ ಸೂಚನೆ ನೀಡಿದೆ.

ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಗಳೇನು?: ವಾದ ಪ್ರತಿವಾದ ಆಲಿಸಿ ತೀರ್ಪನ್ನು ಬರೆದ ನ್ಯಾಯಮೂರ್ತಿ ಸಾಹೂ, ಅಲಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲು ಕಾರಣಗಳೇನು ಎಂಬುದನ್ನು ತಮ್ಮ ತೀರ್ಪಿನಲ್ಲಿ ವಿವರಿಸಿದ್ದಾರೆ.

ಅಲಿ ದಿನಕ್ಕೆ ಅನೇಕ ಬಾರಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾನೆ. ಆತ ದೇವರ ಮುಂದೆ ಶರಣಾಗಿರುವುದರಿಂದ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂದೇ ಅರ್ಥ‘‘ ಎಂದು ನ್ಯಾಯಮೂರ್ತಿ ಸಾಹೂ ಹೇಳಿದ್ದಾರೆ.

ಪೀಠವು ಅಲಿ ಅವರ ಕುಟುಂಬದ ಪರಿಸ್ಥಿತಿಗಳನ್ನು ಗಮನಿಸಿದೆ. ಅಪರಾಧಿ ಅಲಿ, ಸುಮಾರು 63 ವರ್ಷ ವಯಸ್ಸಿನ ವೃದ್ಧ ತಾಯಿ ಮತ್ತು ಇಬ್ಬರು ಅವಿವಾಹಿತ ಸಹೋದರಿಯರನ್ನು ಹೊಂದಿದ್ದಾರೆ. ಅವರೆಲ್ಲರಿಗೂ ಇವರೊಬ್ಬರೇ ಅನ್ನದಾತ ಎಂದು ಉಲ್ಲೇಖಿಸಿದ್ದಾರೆ. ಅಲಿ ಮುಂಬೈನಲ್ಲಿ ಕಲರ್ ಮಿಸ್ಟ್ರಿಯಾಗಿ ಕೆಲಸ ಮಾಡುತ್ತಿದ್ದು, ಅವರ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ.

ಶಾಲೆಯಲ್ಲಿದ್ದಾದ ಅವರ ಗುಣ ಮತ್ತು ನಡವಳಿಕೆಯು ಉತ್ತಮವಾಗಿತ್ತು ಮತ್ತು ಅವರು 2010 ರಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು. ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಗಳಿಂದ ಅವರು ತಮ್ಮ ಉನ್ನತ ವ್ಯಾಸಂಗವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ತಮ್ಮ ಹದಿಹರೆಯದ ವರ್ಷಗಳಲ್ಲಿ ಉತ್ತಮ ಕ್ರಿಕೆಟ್ ಮತ್ತು ಫುಟ್ಬಾಲ್ ಆಟಗಾರನಾಗಿದ್ದ. ಸುಮಾರು ಹತ್ತು ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೂ, ಜೈಲು ಅಧೀಕ್ಷಕರು ಮತ್ತು ಮನೋವೈದ್ಯರು ಸಲ್ಲಿಸಿದ ವರದಿಗಳು ಜೈಲಿನೊಳಗೆ ಅವರ ನಡವಳಿಕೆ ಸಾಮಾನ್ಯವಾಗಿದೆ ಎಂದು ಸೂಚಿಸುತ್ತದೆ. ಸಹ-ಕೈದಿಗಳು ಮತ್ತು ಸಿಬ್ಬಂದಿಯೊಂದಿಗೆ ಸೌಹಾರ್ದಯುತವಾದ ಬಾಂಧವ್ಯ ಹೊಂದಿದ್ದಾನೆ. ಆತ ಎಲ್ಲಾ ಶಿಸ್ತನ್ನು ನಿರ್ವಹಿಸಿದ್ದಾರೆ ಎಂದು ಜೈಲು ಆಡಳಿತ ವರದಿ ನೀಡಿದೆ,” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡಿದೆ.

ಅಲಿ ಅವರ ಸೆರೆವಾಸದ ಸಮಯದಲ್ಲಿ ಅವರ ವಿರುದ್ಧ ಯಾವುದೇ ಪ್ರತಿಕೂಲ ವರದಿಗಳಿಲ್ಲ ಎಂಬುದನ್ನು ತೀರ್ಪಿನಲ್ಲಿ ನ್ಯಾಯಾಲಯವು ಒತ್ತಿಹೇಳಿದೆ ಮತ್ತು ಅವರು ಯಾವುದೇ ಜೈಲು ಅಪರಾಧಗಳನ್ನು ಮಾಡಿಲ್ಲ ಎಂದು ಗಮನಿಸಿದೆ.

ಇಡೀ ಬಂಧನದ ಅವಧಿಯಲ್ಲಿ ಅವರ ವಿರುದ್ಧ ಯಾವುದೇ ಪ್ರತಿಕೂಲ ವರದಿ ಇಲ್ಲ ಅಥವಾ ಅವರು ಯಾವುದೇ ಜೈಲಿನಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಅವರು ದಿನಕ್ಕೆ ಅನೇಕ ಬಾರಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಮತ್ತು ಅವರು ದೇವರ ಮುಂದೆ ಶರಣಾಗಿರುವುದರಿಂದ ಶಿಕ್ಷೆಯನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂದು ನ್ಯಾಯಾಧೀಶ ಸಾಹೂ ತೀರ್ಪಿನಲ್ಲಿ ಪುನರುಚ್ಚರಿಸಿದ್ದಾರೆ.

ಅಲಿ ಅವರು ಸುಧಾರಣೆ ಮತ್ತು ಪುನರ್ವಸತಿಗೆ ಮೀರಿದವರು ಎಂಬುದಕ್ಕೆ ಯಾವುದೇ ಮನವರಿಕೆಯಾಗುವ ಪುರಾವೆಗಳಿಲ್ಲ ಎಂಬ ಅಂಶವನ್ನು ಪೀಠವು ಗಮನಿಸಿ ಈ ತೀರ್ಮಾನಕ್ಕೆ ಬಂದಿದೆ.

ಮತ್ತೋರ್ವ ಆರೋಪಿ ಎಸ್‌ಕೆ ಅಖಿಲ್ ಅಲಿ ಅಪರಾಧದಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ. ಸಂತ್ರಸ್ತೆ ಕುಟುಂಬಕ್ಕೆ 1.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪೋಕ್ಸೊ ನ್ಯಾಯಾಲಯ ಆದೇಶಿಸಿತ್ತು. ಇತ್ತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?: ಆಗಸ್ಟ್ 21, 2014 ರಂದು ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ತಿರ್ಟೋಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೂರದ ಹಳ್ಳಿಯಲ್ಲಿ ದುಷ್ಕೃತ್ಯವೊಂದು ನಡೆದಿತ್ತು. ಅಂಗಡಿಯಿಂದ ಚಾಕೋಲೇಟ್ ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದ ಆರು ವರ್ಷದ ಬಾಲಕಿಯನ್ನು ಅಪಹರಿಸಲಾಗಿತ್ತು. ಎಸ್‌ಕೆ ಅಖಿಲ್ ಅಲಿ (38) ಮತ್ತು ಎಸ್‌ಕೆ ಆಸಿಫ್ ಅಲಿ (37) ಎಂಬ ಇಬ್ಬರು ವ್ಯಕ್ತಿಗಳು ಬಾಲಕಿಯನ್ನು ಅಪಹರಿಸಿದ್ದರು.

ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಅಖಿಲ್ ಅಲಿ ಮತ್ತು ಆಸಿಫ್ ಅಲಿ ಬಾಲಕಿ ಹೊರಗೆ ಹೋದರೆ ಹಳ್ಳಿಯ ಜನರಲ್ಲಿ ತಮ್ಮ ನಿಜ ಸ್ವರೂಪ ಬಯಲಾಗುತ್ತದೆ ಎಂಬ ಭಯದಲ್ಲಿದ್ದರು. ಹೀಗಾಗಿ ಇಬ್ಬರೂ ಸೇರಿ ಆರು ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದರು. ಪ್ರಕರಣದ ಮೊದಲ ವಿಚಾರಣೆ ನಡೆಸಿದ ಜಗತ್‌ಸಿಂಗ್‌ಪುರದ POCSO ನ್ಯಾಯಾಲಯವು ನವೆಂಬರ್ 21, 2022 ರಂದು ತೀರ್ಪು ನೀಡಿತು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಖಿಲ್ ಅಲಿ ಮತ್ತು ಆಸಿಫ್ ಅಲಿ ಅವರಿಗೆ ಪೋಕ್ಸೊ ನ್ಯಾಯಾಲಯ ಕೊಲೆಗೆ ಮರಣದಂಡನೆ ವಿಧಿಸಿತ್ತು.

ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಬೆಂಗಳೂರು ಕೋರ್ಟ್ - Pocso Case Verdict

ETV Bharat Logo

Copyright © 2025 Ushodaya Enterprises Pvt. Ltd., All Rights Reserved.