ETV Bharat / bharat

ಹೈದರಾಬಾದ್ - ಬೆಂಗಳೂರು ಸ್ಪೀಡ್​ ಹೈವೇ; ಯೋಜನೆಗೆ ಕೇಂದ್ರದಿಂದ ಭರದ ಸಿದ್ಧತೆ - New High Speed Highway - NEW HIGH SPEED HIGHWAY

ಹೈದರಾಬಾದ್​ ಬೆಂಗಳೂರು ಮಾರ್ಗವೂ ಹೈ ಸ್ಪೀಡ್​ ವೇಗದ ರಸ್ತೆಯಾಗಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಹೆದ್ದಾರಿಯಲ್ಲಿ 120 ಕಿ.ಮೀ ವೇಗದ ವಾಹನಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡುವ ಪ್ರಸ್ತಾವ ಇದೆ.

new-high-speed-highway-between-hyderabad-bangalore
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 27, 2024, 12:12 PM IST

ಹೈದರಾಬಾದ್​: ತೆಲಂಗಾಣ- ಆಂಧ್ರಪ್ರದೇಶ - ಕರ್ನಾಟಕ ಮೂರು ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್​ ಗ್ರೀನ್​ ಕಾರಿಡಾರ್​ನ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಭವಿಷ್ಯದ ಟ್ರಾಫಿಕ್​ ದಟ್ಟಣೆ ನಿರ್ವಹಣೆಗೆ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಸಿಗಲಿದೆ. ಸದ್ಯಕ್ಕೆ ಹೈದರಾಬಾದ್​ ಮತ್ತು ಬೆಂಗಳೂರು ನಡುವೆ ಚತುಷ್ಪಥ ಹೆದ್ದಾರಿ ಇದೆ. ಇದರ ಜೊತೆಗೆ ಇದೀಗ ಹೊಸ ಹೆದ್ದಾರಿ ನಿರ್ಮಾಣ ಮಾಡಲು ರಾಷ್ಟ್ರೀಯ ಹದ್ದಾರಿ ಮತ್ತು ಕೇಂದ್ರ ಸಾರಿಗೆ ಸಚಿವಾಲಯ ನಿರ್ಧರಿಸಿದೆ. ಈ ಯೋಜನೆಯನ್ನು 'ರಾಷ್ಟ್ರೀಯ ಹೆದ್ದಾರಿಗಳ ಮಹಾ ಯೋಜನೆ 2047' ಉದ್ದೇಶದೊಂದಿಗೆ ನಿರ್ಮಾಣ ಮಾಡಲಾಗುತ್ತದೆ.

ಎರಡು ವರ್ಷಗಳ ಹಿಂದೆ, ಕೇಂದ್ರ ಸರ್ಕಾರ ನಾಗ್ಪುರ-ಹೈದರಾಬಾದ್ -ಬೆಂಗಳೂರು ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ಜನರ ಸಂಚಾರ ಮಾರ್ಗ ಸುಲಭಗೊಳಿಸಲು ನಿರ್ಧರಿಸಿತು. ಇದರ ಹಿಂದಿನ ತಂತ್ರ ಈ ರಸ್ತೆ ಸೌಲಭ್ಯ ಪ್ರವೇಶದ ಮೂಲಕ ಅವರ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಾಗಿತ್ತು. ಇದೀಗ ನಾಗ್ಪುರದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಟೆಂಡರ್​ಗೆ ಕಡೆಯ ದಿನ: ಹೊಸ ರಾಷ್ಟ್ರೀಯ ಹೆದ್ದಾರಿ ಬೆಂಗಳೂರಿನಿಂದ ಹೈದರಾಬಾದ್​ ಅನ್ನು ಕೂಡ ಸಂಪರ್ಕಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಡಿಪಿಆರ್​ನಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಜೊತೆಗೆ ಡಿಪಿಆರ್​ ಸಿದ್ಧಪಡಿಸಿದ ಯೋಜನೆ ಅನುಸಾರ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಕೂಡ ರಸ್ತೆ ನಿರ್ಮಾಣಕ್ಕೆ ಟೆಂಡರ್​ ಆಹ್ವಾನಿಸಿದೆ. ಈ ಟೆಂಡರ್​ ಸಲ್ಲಿಕೆಗೆ ಕಡೆಯ ದಿನ ಈ ವರ್ಷದ ಸೆಪ್ಟೆಂಬರ್​ 12 ಆಗಿದೆ.

ಆರು ಸಾಲುಗಳ ರಸ್ತೆ: ಈ ಮಾರ್ಗದಲ್ಲಿನ ಟ್ರಾಫಿಕ್​ ಅನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಆರು ಲೇನ್​ಗಳ ಹೊಸ ರಸ್ತೆ ನಿರ್ಮಾಣದ ಪ್ರಸ್ತಾಪವನ್ನು ಹೊಂದಿದೆ. ಈ ಕುರಿತು ಈಟಿವಿ ಭಾರತ​ ಜೊತೆ ಮಾತನಾಡಿದ ಹಿರಿಯ ಅಧಿಕಾರಿ, ಆರಂಭದಲ್ಲಿ ಇದನ್ನು 12 ಲೇನ್ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಇದನ್ನು ಆರಕ್ಕೆ ಸೀಮಿತ ಮಾಡಲಾಯಿತು. ಆದರೆ ಆರು ಸಾಲುಗಳನ್ನು ಒಂದೇ ಬಾರಿ ನಿರ್ಮಿಸುವುದಾ, ಇಲ್ಲ ಮೊದಲಿಗೆ ನಾಲ್ಕು ಸಾಲು ನಿರ್ಮಿಸಿ ಅದಕ್ಕೆ ಮತ್ತೆರಡು ಸಾಲನ್ನು ವಿಸ್ತರಿಸುವುದಾ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಡಿಪಿಆರ್​ ಅನುಮತಿ ಪಡೆದ ಬಳಿಕ ಕೇಂದ್ರವೂ ಈ ಬಗ್ಗೆ ಅಂತಿ ನಿರ್ಧಾರ ಮಾಡಲಿದೆ.

120 ಕಿ.ಮೀ ವೇಗದ ಸಂಚಾರ: ಹೈದರಾಬಾದ್​ ಬೆಂಗಳೂರು ಮಾರ್ಗವೂ ಹೈ ಸ್ಪೀಡ್​ ವೇಗದ ರಸ್ತೆಯಾಗಿ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಈ ಹೈ ವೇಯಲ್ಲಿ 120 ಕಿ.ಮೀ ವೇಗದ ವಾಹನಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡುವ ಪ್ರಸ್ತಾವ ಹೊಂದಲಾಗಿದೆ. ನೀಡಿರುವ ಅಂದಾಜಿನ ಪ್ರಕಾರ, ಕೇಂದ್ರವೂ 508.461 ಕಿ.ಮೀ ಕಾರಿಡಾರ್​ ಅನ್ನು ನಿರ್ಮಿಸಲಾಗಿದೆ. ಹೈದರಾಬಾದ್​ ಬೆಂಗಳೂರಿನಿಂದ 556 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ 44 ಇದಾಗಿದೆ. ನಾಲ್ಕು ಸಾಲು ಮಾರ್ಗ ಲಭ್ಯವಿದೆ. ಈ ರಾಷ್ಟ್ರೀಯ ಹೆದ್ದಾರಿ ತೆಲಂಗಾಣದಲ್ಲಿ 190 ಕಿ.ಮೀ, ಆಂಧ್ರಪ್ರದೇಶದಲ್ಲಿ 260 ಕಿ.ಮೀ ಮತ್ತು ಕರ್ನಾಟಕದಲ್ಲಿ 106 ಕಿ.ಮೀವರೆಗೆ ವಿಸ್ತರಿಸಿದೆ. ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಚತುಷ್ಪಥ ರಸ್ತೆಯನ್ನು ಆರು ಪಥಗಳಿಗೆ ವಿಸ್ತರಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು.

ಇದಕ್ಕಾಗಿ 2022ರಲ್ಲೇ ಡಿಪಿಆರ್​ ಪ್ರಸ್ತಾವನೆ ಸಿದ್ಧಪಡಿಸಿದೆ. ಆದರೆ, ಅನೇಕ ಕಾರಣಗಳಿಂದ ಈ ಪ್ರಸ್ತಾವನೆಗೆ ತಡೆ ನೀಡಲಾಗಿದೆ. ಕೇಂದ್ರ ಸರ್ಕಾರ ಹೈ ಸ್ಪೀಡ್​ ಕಾರಿಡಾರ್​ ನಿರ್ಮಿಸಲು ನಿರ್ಧರಿಸಿದರೆ, ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಅಧ್ಯಯನ ಮಾಡಲಿದೆ. ಈಗಿರುವ ಹೆದ್ದಾರಿಯನ್ನೇ ಹೈಸ್ಪೀಡ್​ ಹೆದ್ದಾರಿಯಾಗಿ ವಿಸ್ತರಿಸುವುದು ಸಾಧ್ಯವಿಲ್ಲ ಎಂಬ ಪ್ರಾಧಿಕಾರ ನಿರ್ಣಯಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಹೈಸ್ಪೀಡ್​ನ ಗ್ರೀನ್​ ಫೀಲ್ಡ್​ ಕಾರಿಡಾರ್​​ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಪುಣೆಗೆ ಬೈಬೈ ಹೇಳಲು ಸಜ್ಜಾಗಿದ್ದಾರಾ ಟೆಕ್ಕಿಗಳು?: ಜಬಲ್​​​ಪುರ ಸೃಷ್ಟಿಸುವುದೇ ಅಂತಹದ್ದೇನಾದರೂ ಮಾಯಾಜಾಲ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.