ETV Bharat / bharat

ನೀಟ್‌ ಅಕ್ರಮ: ಪಾಟ್ನಾ ತಲುಪಿದ ಸಿಬಿಐ ತಂಡ, ತನಿಖೆ ಪ್ರಾರಂಭ - NEET Paper Leak Case - NEET PAPER LEAK CASE

ನೀಟ್-ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಇಂದು ಪಾಟ್ನಾ ತಲುಪಿದ್ದು ಪುರಾವೆಗಳನ್ನು ಸಂಗ್ರಹಿಸುತ್ತಿದೆ.

cbi take charge of neet paper leak case
NEET ಅಕ್ರಮದ ತನಿಖೆ (ETV Bharat)
author img

By ETV Bharat Karnataka Team

Published : Jun 24, 2024, 5:01 PM IST

Updated : Jun 24, 2024, 5:10 PM IST

ಪಾಟ್ನಾ(ಬಿಹಾರ): ವೈದ್ಯಕೀಯ ಪ್ರವೇಶ ಪರೀಕ್ಷೆ-ಯುಜಿ (NEET) ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ತಂಡ ಪಾಟ್ನಾಗೆ ಬಂದಿದ್ದು, ಬಿಹಾರ ಪೊಲೀಸ್‌ ಆರ್ಥಿಕ ಅಪರಾಧಗಳ ಘಟಕ (ಇಒಯು) ಕಚೇರಿಯಲ್ಲಿ ಬೀಡುಬಿಟ್ಟಿದೆ. ಅಕ್ರಮದ ಕುರಿತ ದಾಖಲೆಗಳು ಮತ್ತು ಸಂಶೋಧನಾ ವರದಿಗಳನ್ನು ಇಒಯು ಸಿಬಿಐಗೆ ಹಸ್ತಾಂತರಿಸಿದೆ.

ಮೇ 5ರಂದು ನಡೆದ ನೀಟ್‌ ಪರೀಕ್ಷೆಯಲ್ಲಿ ಅಕ್ರಮ ಕೇಳಿಬಂದಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಪಾಟ್ನಾದ ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಅಕ್ರಮಗಳ ಆರೋಪದ ಕುರಿತ ತನಿಖೆಯನ್ನು ರಾಜ್ಯ ಸರ್ಕಾರ ಮೇ 15ರಂದು ಇಒಯುಗೆ ಹಸ್ತಾಂತರಿಸಿದೆ. ಇದಾದ ಬಳಿಕ ಕೇಂದ್ರ ಸರ್ಕಾರ ಶಿಕ್ಷಣ ಸಚಿವಾಲಯದ ಉಲ್ಲೇಖದ ಮೇರೆಗೆ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.

ಕಳೆದ ತಿಂಗಳು ಕಾರ್ಯಾಚರಣೆ ನಡೆಸಿದ್ದ ಇಒಯು, ಪಾಟ್ನಾದ ಮನೆಯೊಂದರಿಂದ ಭಾಗಶಃ ಸುಟ್ಟಿದ್ದ ಪ್ರಶ್ನೆ ಪತ್ರಿಕೆಗಳನ್ನು ವಶಪಡಿಸಿಕೊಂಡಿತ್ತು. 19 ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರೆಲ್ಲರೂ ಪಾಟ್ನಾದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ತಂಡ ಇಲ್ಲಿನ ನ್ಯಾಯಾಲಯದಿಂದ ಟ್ರಾನ್ಸಿಟ್‌ ರಿಮಾಂಡ್‌ ಪಡೆಯುವ ಮೂಲಕ ಅವರನ್ನು ವಿಚಾರಣೆಗೆ ದೆಹಲಿಗೆ ಕರೆದೊಯ್ಯಬಹುದು ಎಂಬ ಮಾಹಿತಿ ಇದೆ.

ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಸಿಬಿಐ, ವಿಶೇಷ ತಂಡಗಳನ್ನೂ ರಚಿಸಿದೆ. ಈ ತಂಡಗಳನ್ನು ಗೋದ್ರಾಕ್ಕೂ ಕಳುಹಿಸಲಾಗುತ್ತಿದೆ. ಈ ಬಗ್ಗೆಯೂ ಸ್ಥಳೀಯ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಕೆಲ ಆರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಿದ್ಧತೆ ನಡೆಸಿದೆ.

ಪಾಟ್ನಾ ಪೊಲೀಸರು ಇದುವರೆಗೆ 19 ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ನಾಲ್ವರು ಅಭ್ಯರ್ಥಿಗಳಾಗಿದ್ದು, 9 ಮಂದಿ ಪರೀಕ್ಷಾ ಮಾಫಿಯಾ ಹಾಗೂ ಅಭ್ಯರ್ಥಿಗಳ ಪೋಷಕರೂ ಸೇರಿದ್ದಾರೆ. ಅಭಿಷೇಕ್ ಕುಮಾರ್ (21), ಶಿವಾನಂದನ್ ಕುಮಾರ್ (19), ಆಯುಷ್ ರಾಜ್ (19) ಮತ್ತು ಅನುರಾಗ್ ಯಾದವ್ (22) ಇವರು ಅಭ್ಯರ್ಥಿಗಳಾದರೆ ಉಳಿದವರು ಮಾಫಿಯಾ ಹಾಗೂ ಅಭ್ಯರ್ಥಿಗಳ ಪೋಷಕರಾಗಿದ್ದಾರೆ. ಆರಂಭದಲ್ಲಿ ಸಿಕಂದರ್ ಯಡ್ವೆಂಡು ಎಂಬಾತನನ್ನು ಬಂಧಿಸಿದ್ದ ಪಾಟ್ನಾ ಪೊಲೀಸರು, ಬಳಿಕ ಉಳಿದ ಜನರನ್ನು ಮೇ 5ರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.

2024ರ ಮೇ 5ರಂದು ನಡೆದ ನೀಟ್ ಪರೀಕ್ಷೆಗೆ ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಪರೀಕ್ಷೆಯಲ್ಲಿ ಪೇಪರ್ ಸೋರಿಕೆಯಾಗಿರುವ ಬಗ್ಗೆ ಬಿಹಾರ ಪೊಲೀಸರು ಜಾರ್ಖಂಡ್ ಪೊಲೀಸರಿಂದ ಮಾಹಿತಿ ಪಡೆದಿದ್ದರು.

ಇದನ್ನೂ ಓದಿ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಮಹಾರಾಷ್ಟ್ರದ ನಂಟು, ಇಬ್ಬರು ಶಿಕ್ಷಕರ ಬಂಧನ - NEET Paper leak case

Last Updated : Jun 24, 2024, 5:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.