ETV Bharat / bharat

ಜುಲೈ 20 ರೊಳಗೆ ನೀಟ್​​ ಪರೀಕ್ಷಾ ಫಲಿತಾಂಶ ವೆಬ್​ಸೈಟ್​ನಲ್ಲಿ ಪ್ರಕಟಿಸಿ: ಎನ್​ಟಿಎಗೆ ಸುಪ್ರೀಂಕೋರ್ಟ್​ ಸೂಚನೆ - NEET UG Paper Leak

ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಅರ್ಜಿಗಳನ್ನು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿತು. ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲು ಎನ್​ಟಿಎಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.

ನೀಟ್​​ ಪರೀಕ್ಷಾ ಫಲಿತಾಂಶ ವೆಬ್​ಸೈಟ್​ನಲ್ಲಿ ಪ್ರಕಟಿಸಿ
ನೀಟ್​​ ಪರೀಕ್ಷಾ ಫಲಿತಾಂಶ ವೆಬ್​ಸೈಟ್​ನಲ್ಲಿ ಪ್ರಕಟಿಸಿ (ETV Bharat)
author img

By ETV Bharat Karnataka Team

Published : Jul 18, 2024, 4:55 PM IST

Updated : Jul 18, 2024, 5:08 PM IST

ನವದೆಹಲಿ: ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್​ ಇಂದಿನಿಂದ ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವ್ಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ಪರೀಕ್ಷೆಯನ್ನು ರದ್ದು ಮಾಡಲು ನಿರಾಕರಿಸಿದೆ. ಜೊತೆಗೆ ಶುಕ್ರವಾರ ಸಂಜೆಯೊಳಗೆ ವೆಬ್​ಸೈಟ್​ನಲ್ಲಿ ಕೇಂದ್ರವಾರು, ರಾಜ್ಯವಾರು ಫಲಿತಾಂಶವನ್ನು ಬಿಡುಗಡೆ ಮಾಡಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ (ಎನ್​ಟಿಎ) ಸೂಚಿಸಿತು.

2024ನೇ ಸಾಲಿನ NEET-UG ಪರೀಕ್ಷೆಯ ಫಲಿತಾಂಶವನ್ನು ಶನಿವಾರ (ಜುಲೈ 20) ಅಪರಾಹ್ನ 12 ಗಂಟೆಯೊಳಗೆ ಎನ್​ಟಿಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಫಲಿತಾಂಶಗಳನ್ನು ಪ್ರಕಟಿಸುವಾಗ ಅಭ್ಯರ್ಥಿಗಳ ಗುರುತನ್ನು ಮರೆಮಾಚುವಂತೆಯೂ ಸಲಹೆ ನೀಡಲಾಗಿದೆ. ಪರೀಕ್ಷೆಯಲ್ಲಿ ಪಾರದರ್ಶಕತೆ ತರಲು ಫಲಿತಾಂಶವನ್ನು ಕೇಂದ್ರವಾರು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರೆ ಸೂಕ್ತ ಎಂದು ಕೋರ್ಟ್​ ಅಭಿಪ್ರಾಯಪಟ್ಟಿತು.

ಹಣಕ್ಕಾಗಿ ಪ್ರಶ್ನೆಪತ್ರಿಕೆ ಸೋರಿಕೆ: NEET-UG ಪರೀಕ್ಷೆಗೆ ಅಪಖ್ಯಾತಿ ತರಲು ಸೋರಿಕೆಯನ್ನು ನಡೆಸಲಾಗಿಲ್ಲ. ಇದನ್ನು ಕೇವಲ ಹಣಕ್ಕಾಗಿ ಮಾತ್ರ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವಿಚಾರಣೆ ವೇಳೆ ಹೇಳಿದರು. ಪೇಪರ್ ಸೋರಿಕೆ ಮಾಡುವ ಆಲೋಚನೆಯು ಪರೀಕ್ಷೆಯ ದಿಕ್ಕು ತಪ್ಪಿಸಲು ಅಲ್ಲ. ಇದು ಕೇವಲ ಹಣದಾಸೆಗೆ ಮಾಡಿದ ಕೃತ್ಯವಾಗಿದೆ ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ.

ಪರೀಕ್ಷಾ ಕೇಂದ್ರ ಬದಲಾವಣೆ ಹೇಗೆ?: ವಿಚಾರಣೆಯ ವೇಳೆ ಎನ್​ಟಿಎಗೆ ಹಲವು ಪ್ರಶ್ನೆಗಳನ್ನ ಕೇಳಿದ ಸುಪ್ರೀಂಕೋರ್ಟ್​, ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕೇಂದ್ರ ಬದಲಾವಣೆ ಮಾಡಲು ಅವಕಾಶ ನೀಡಲಾಗಿದೆ. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದನ್ನು ಉಪಯೋಗಿಸಿಕೊಂಡಿದ್ದಾರೆ. ಇದು ಎನ್​ಟಿಎ ಗಮನಕ್ಕೆ ಬಂದಿತ್ತೆ ಎಂದು ಪ್ರಶ್ನಿಸಿತು.

ಪರೀಕ್ಷೆಗೆ ಹಾಜರಾದ 23 ಲಕ್ಷ ವಿದ್ಯಾರ್ಥಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ಬದಲಾಯಿಸಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ, ಎರಡು ನಗರಗಳ ಆಯ್ಕೆಯನ್ನು ನೀಡಲಾಗಿದೆ. ಅದರಲ್ಲಿ ಆಯ್ಕೆ ಮಾಡಿಕೊಂಡ ಸ್ಥಳವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಎನ್‌ಟಿಎ ಪರ ವಕೀಲರು ಕೋರ್ಟ್​ಗೆ ತಿಳಿಸಿದರು.

ಜುಲೈ 22 ಕ್ಕೆ ವಿಚಾರಣೆ ಮುಂದೂಡಿಕೆ: ವಾದ- ವಿವಾದದ ಬಳಿಕ ಮುಂದಿನ ವಿಚಾರಣೆಯನ್ನು ಜುಲೈ 22 ಕ್ಕೆ ಮುಂದೂಡಿತು. ಒಟ್ಟು 40 ಅರ್ಜಿಗಳನ್ನು ಒಟ್ಟು ಮಾಡಿ ಸುಪ್ರೀಂಕೋರ್ಟ್​ ಪ್ರಕರಣ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ನೀಟ್​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪಾಟ್ನಾ ಏಮ್ಸ್​ನ ನಾಲ್ವರು ವೈದ್ಯ ವಿದ್ಯಾರ್ಥಿಗಳ ಬಂಧನ - NEET UG paper leak

Last Updated : Jul 18, 2024, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.