ETV Bharat / bharat

'ಪವನ್' ಅಲ್ಲ, 'ತೂಫಾನ್​': ಪವನ್​ ಕಲ್ಯಾಣ್​ ಬಗ್ಗೆ ಮೋದಿ ಶ್ಲಾಘನೆ - Modi Praises Pawan Kalyan - MODI PRAISES PAWAN KALYAN

ದೆಹಲಿಯಲ್ಲಿ ಇಂದು ನಡೆದ ಎನ್​ಡಿಎ ಮೈತ್ರಿಕೂಟದ ಸಭೆಯಲ್ಲಿ ಆಂಧ್ರದ ಜನಸೇನಾ ಪಕ್ಷದ ನಾಯಕ ಪವನ್​ ಕಲ್ಯಾಣ್ ಅವರನ್ನು ಪ್ರಧಾನಿ ಮೋದಿ 'ತೂಫಾನ್​'ಗೆ ಹೋಲಿಕೆ ಮಾಡಿದರು.

Narendra Modi Praises Janasena Chief Pawan Kalyan In NDA Meeting
ಜನಸೇನಾ ಮುಖ್ಯಸ್ಥರನ್ನು ಹೊಗಳಿದ ಮೋದಿ (ETV Bharat)
author img

By ANI

Published : Jun 7, 2024, 9:01 PM IST

ನವದೆಹಲಿ: ಕೇಂದ್ರ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ದಾಖಲೆಯ ಸತತ 3ನೇ ಅವಧಿಗೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ದೆಹಲಿಯಲ್ಲಿ ಇಂದು ಮೈತ್ರಿಕೂಟದ ನಾಯಕರು ಹಾಗೂ ಸಂಸದರ ಮಹತ್ವದ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಮಿತ್ರಪಕ್ಷಗಳ ಎಲ್ಲ ಪ್ರಮುಖರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ನಾಯಕರು ಪರಸ್ಪರ ಹೊಗಳಿದರು. ಇದೇ ವೇಳೆ, ಟಾಲಿವುಡ್​ ಖ್ಯಾತ ನಟ, ಜನಸೇನಾ ಪಕ್ಷದ ನಾಯಕ ಪವನ್​ ಕಲ್ಯಾಣ್​ ಬಗ್ಗೆ ಮೋದಿ ಶ್ಲಾಘಿಸಿದ್ದು ವಿಶೇಷ. ಇದರಿಂದ ಪವನ್ ಇಡೀ ಸಭೆಯ ಕೇಂದ್ರಬಿಂದುವಾಗಿ ಆಕರ್ಷಿತರಾದರು.

ದೇಶಾದ್ಯಂತ ಲೋಕಸಭೆಯ 543 ಕ್ಷೇತ್ರಗಳು ಹಾಗೂ ಆಂಧ್ರಪ್ರದೇಶ ಸೇರಿ ನಾಲ್ಕು ರಾಜ್ಯಗಳ ವಿಧಾನಸಭೆಗೆ ಇತ್ತೀಚೆಗೆ ಒಟ್ಟಿಗೆ ಚುನಾವಣೆ ಮುಗಿದಿದೆ. ಜೂನ್​ 4ರಂದು ಫಲಿತಾಂಶ ಪ್ರಕಟವಾಗಿದೆ. ಎನ್​ಡಿಎ ಮೈತ್ರಿಕೂಟ ಕೇಂದ್ರ ಹಾಗೂ ಆಂಧ್ರದಲ್ಲೂ ಅಧಿಕಾರಕ್ಕೆ ಬಂದಿದೆ.

ಆಂಧ್ರದ 25 ಲೋಕಸಭೆ ಕ್ಷೇತ್ರಗಳ ಪೈಕಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ - 16, ಪವನ್​ ಕಲ್ಯಾಣ್​ ನೇತೃತ್ವದ ಜನಸೇನಾ - 2 ಹಾಗೂ ಬಿಜೆಪಿ - 3 ಸೇರಿ ಮೈತ್ರಿಕೂಟವು ಒಟ್ಟಾರೆ 21 ಕಡೆ ಜಯಭೇರಿ ಬಾರಿಸಿದೆ. ಜೊತೆಗೆ ರಾಜ್ಯ ವಿಧಾನಸಭೆಯ 175 ಕ್ಷೇತ್ರಗಳ ಪೈಕಿ ಟಿಡಿಪಿ - 135, ಜನಸೇನಾ - 21, ಬಿಜೆಪಿ 8 ಸ್ಥಾನಗಳೊಂದಿಗೆ ಪ್ರಚಂಡ ಗೆಲುವು ದಾಖಲಿಸಿದೆ. ವಿಶೇಷ ಎಂದರೆ, ಜನಸೇನಾ ಪಕ್ಷವು ತಾನು ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳು ಜಯ ದಕ್ಕಿಸಿಕೊಂಡಿದೆ. ಈ ಫಲಿತಾಂಶವು ಪವನ್​ ಕಲ್ಯಾಣ್ ಅವರನ್ನು ಪರಿಪೂರ್ಣ ರಾಜಕೀಯ ನಾಯಕರನ್ನಾಗಿಯೂ ರೂಪಿಸಿದೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು: ಪವನ್ ಕಲ್ಯಾಣ್‌ಗೆ ಚಿರು ಕುಟುಂಬದಿಂದ ಭವ್ಯ ಸ್ವಾಗತ

ಪವನ್​ ಬಗ್ಗೆ ಮೋದಿ ಮೆಚ್ಚುಗೆ: ಪವನ್​ ಕಲ್ಯಾಣ್ ಅವರ ರಾಜಕೀಯದ ಈ ಗೆಲುವು ಪ್ರಧಾನಿ ಮೋದಿ ಅವರ ಗಮನವೂ ಸೆಳೆದಿದೆ. ಇಂದು ಎನ್​ಡಿಎ ಮೈತ್ರಿಕೂಟದ ಸಭೆಯಲ್ಲಿ ಮೋದಿ ಬಗ್ಗೆ ಪವನ್​ ಹಾಗೂ ಪವನ್​ ಬಗ್ಗೆ ಮೋದಿ ಪರಸ್ಪರ ಹೊಗಳಿದರು. ಪವನ್ ಮಾತನಾಡುತ್ತಾ, ''ಜನಸೇನಾ ಪರವಾಗಿ ಮೋದಿಯವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಅವರ ನಾಯಕತ್ವವನ್ನು ನಮ್ಮ ಜನಸೇನಾ ಪಕ್ಷ ಬೆಂಬಲಿಸುತ್ತದೆ. ದೂರದೃಷ್ಟಿಯ ನಾಯಕರ ಹಾದಿಯಲ್ಲಿ ನಡೆಯಲು ಸಿದ್ಧರಿದ್ದೇವೆ. ಮೋದಿಯವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸ್ಪೂರ್ತಿಯಾಗಿದ್ದಾರೆ. ಅವರು ಪ್ರಧಾನಿಯಾಗಿರುವವರೆಗೆ ಭಾರತವು ಯಾವುದೇ ದೇಶದ ಮುಂದೆಯೂ ತಲೆಬಾಗುವುದಿಲ್ಲ. ಅವರ ನಾಯಕತ್ವದಲ್ಲಿ ಕೆಲಸ ಮಾಡಲು ನಾವು ಹೆಮ್ಮೆಪಡುತ್ತೇವೆ'' ಎಂದು ಪವನ್ ಕಲ್ಯಾಣ್ ಹೇಳಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ದಕ್ಷಿಣದ ರಾಜ್ಯಗಳ ಬಗ್ಗೆ ಉಲ್ಲೇಖಿಸಿ ಆಂಧ್ರ ಪ್ರದೇಶದ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ, ಪವನ್​ ಕಲ್ಯಾಣ್ ಅವರನ್ನು ಉದ್ದೇಶಿಸಿ, ''ಇಲ್ಲಿ ಕುಳಿತಿರುವವರು 'ಪವನ್' ಅಲ್ಲ, 'ತೂಫಾನ್​'. ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ'' ಎಂದು ಮೋದಿ ಶ್ಲಾಘಿಸಿದರು. ಆಗ ಪವನ್​ ಎರಡೂ ಕೈಗಳನ್ನು ಮುಗಿದು ಕೃತಜ್ಞತೆ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.