ETV Bharat / bharat

ನಾರಾಯಣಪುರ: ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾದ ನಕ್ಸಲ್‌ ದಂಪತಿ - Naxal Couple

ಕಳೆದ 13 ವರ್ಷಗಳಿಂದ ನಕ್ಸಲ್​ ಕಾರ್ಯ ಚಟುವಟಿಕೆಯಲ್ಲಿ ನಿರತರಾಗಿದ್ದ ದಂಪತಿ ಪೊಲೀಸರಿಗೆ ಶರಣಾಗಿದ್ದಾರೆ.

NARAYANPUR NAXAL COMMANDER WITH REWARD OF RS 5 LAKH SURRENDERED ALONG WITH HIS WIFE
ಪೊಲೀಸರಿಗೆ ಶರಣಾದ ನಕ್ಸಲ್‌ ದಂಪತಿ (ETV Bharat)
author img

By ETV Bharat Karnataka Team

Published : Sep 6, 2024, 6:43 PM IST

ನಾರಾಯಣಪುರ (ಛತ್ತೀಸ್‌ಗಢ): ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲ್‌ ದಂಪತಿ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ನಾರಾಯಣಪುರ ಪೊಲೀಸರಿಗೆ ಶರಣಾಗಿದ್ದಾರೆ. ದೋಸೆಲ್ ಸಲಾಂ ಅಲಿಯಾಸ್​ ಸೋನ್ವಾ ತನ್ನ ಪತ್ನಿ ಆರತಿ ಸಲಾಂ ಕೊಡ್ಲಿಯಾರ್ ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುಡಿಯಾ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಡಾ.ಪ್ರಶಾಂತ್ ದೇವಾಂಗನ್ ಅವರ ಮುಂದೆ ಗುರುವಾರ ಶರಣಾದರು.

Narayanpur Naxal commander with reward of Rs 5 lakh surrendered along with his wife
ಪೊಲೀಸರಿಗೆ ಶರಣಾದ ನಕ್ಸಲ್‌ ದಂಪತಿಗೆ ಪ್ರೋತ್ಸಾಹಧನ ನೀಡುತ್ತಿರುವುದು (ETV Bharat)

ಈ ನಕ್ಸಲ್​ ದಂಪತಿಯ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಈ ಹಿಂದೆ ಘೋಷಣೆ ಮಾಡಲಾಗಿತ್ತು. ಛತ್ತೀಸ್‌ಗಢದ ನಾರಾಯಣಪುರದಲ್ಲಿ ಇಬ್ಬರು ಶಸ್ತ್ರಾಸ್ತ್ರಗಳಿಲ್ಲದೇ ಪೊಲೀಸರ ಮುಂದೆ ಶರಣಾಗಿದ್ದಾರೆ. ನಕ್ಸಲರದ್ದು ಈಗ ಪೊಳ್ಳು ಸಿದ್ಧಾಂತ ಎಂದು ಅರಿತ ಈ ಜೋಡಿ, ತಾವು ಇನ್ಮುಂದೆ ಸಮಾಜದ ಮುಖ್ಯವಾಹಿನಿಗೆ ಸೇರುವುದಾಗಿಯೂ ತಮ್ಮ ಮುಂದೆ ಪ್ರತಿಜ್ಞೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Narayanpur Naxal commander with reward of Rs 5 lakh surrendered along with his wife
ಪೊಲೀಸರಿಗೆ ಶರಣಾದ ನಕ್ಸಲ್‌ ದಂಪತಿ (ETV Bharat)

ಸೋನ್ವಾ ನಕ್ಸಲ್ ಕಮಾಂಡರ್ ಆಗಿ ಕಳೆದ 13 ವರ್ಷಗಳಿಂದ ಸಪ್ಲೈ ಟೀಂ ಕಮಾಂಡರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪತ್ನಿ ಆರತಿ ಕೊಡಲಿಯಾರ್ ಜನತಾನ ಸರ್ಕಾರಿ ಶಾಲಾ ವಿಭಾಗದಲ್ಲಿ ಕಳೆದ 9 ವರ್ಷಗಳಿಂದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರು ಐನ್ಮೆಟಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಗ್ರಾಮದ ನಿವಾಸಿಗಳಾಗಿದ್ದು, ಶರಣಾದ ನಕ್ಸಲ್​ ದಂಪತಿಗೆ ಸರ್ಕಾರದ ನಕ್ಸಲ್ ನಿರ್ಮೂಲನಾ ನೀತಿಯಡಿ ಪ್ರೋತ್ಸಾಹಧನವಾಗಿ ತಲಾ 25 ಸಾವಿರ ರೂ.ಗಳ ಚೆಕ್ ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಾರಾಯಣಪುರದಲ್ಲಿ ಈ ವರ್ಷ ಇಲ್ಲಿಯವರೆಗೆ 7 ನಕ್ಸಲೀಯರು ಶರಣಾಗಿದ್ದಾರೆ. 2024ರ ಇಲ್ಲಿಯವರೆಗೆ, ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗಳಲ್ಲಿ 34 ನಕ್ಸಲ್​ಗಳು ಹತರಾಗಿದ್ದಾರೆ. ನಕ್ಸಲ್ ಸಂಘಟನೆಗೆ ಸಂಬಂಧಿಸಿದ ಗ್ರಾಮ/ಪಂಚಾಯತ್/ಪ್ರದೇಶ ಮಟ್ಟದ ಸ್ಥಳೀಯ ಪದಾಧಿಕಾರಿಗಳು ನಿರ್ಭೀತಿಯಿಂದ ಶರಣಾಗತರಾಗುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣಪುರ ಪ್ರಭಾತ್ ಕುಮಾರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಛತ್ತೀಸ್​ಗಢದಲ್ಲಿ 9 ನಕ್ಸಲೀಯರು ಹತ, ಐವರು ಶರಣಾಗತಿ; ಭಾರೀ ಶಸ್ತ್ರಾಸ್ತ್ರಗಳು ಪೊಲೀಸರ ವಶ - Naxals killed in Chhattisgarh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.