ETV Bharat / bharat

ಕಣ್ಣಿನ ದೃಷ್ಟಿಯಿಲ್ಲದಿದ್ದರೂ ಎಲ್ಲರನ್ನು ಮಂತ್ರಮುಗ್ಧಗೊಳಿಸುವ ಸಂಗೀತ ನುಡಿಸುವ ಕಲೆಗಾರ ಈ ನಂದಕಿಶೋರ್​​ - blind musician

ಬಾಲ್ಯದಲ್ಲೇ ಅಂಧರಾದ ಪ್ರತಿಭಾನ್ವಿತ ಸಂಗೀತ ಕಲಾವಿದ ಮಹರಾಷ್ಟ್ರದಲ್ಲಿದ್ದು, ಅವರ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ನಂದಕಿಶೋರ್​​ ಬಾಲಾಜಿ ಘೂಲೆ
ನಂದಕಿಶೋರ್​​ ಬಾಲಾಜಿ ಘೂಲೆ
author img

By ETV Bharat Karnataka Team

Published : Mar 28, 2024, 1:52 PM IST

Updated : Mar 28, 2024, 2:47 PM IST

ನಂದಕಿಶೋರ್​​ ಬಾಲಾಜಿ ಘೂಲೆ

ಅಹಮದ್‌ನಗರ (ಮಹಾರಾಷ್ಟ್ರ): ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕಲಾವಿದರು ಎಲೆಮರೆಯ ಕಾಯಿಯಂತೆ ಇದ್ದಾರೆ. ಅವರು ಕಲೆಯನ್ನು ತಮ್ಮಲ್ಲೇ ಅಡಗಿಸಿಕೊಂಡು ಜೀವಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಕೊಳಲು ಕಲಾವಿದ ಹುಟ್ಟಿನಿಂದ ಅಂಧರಾದರೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಇವರೇ ನಂದಕಿಶೋರ್​​ ಬಾಲಾಜಿ ಘೂಲೆ. ಇವರು ಮಹಾರಾಷ್ಟ್ರದ ಸಂಗಮ್ನೇರ್​ ತಾಲೂಕಿನ ಪ್ರಸ್ಥಭೂಮಿಯಲ್ಲಿರುವ ಸಾವರಗಾಂವ್​ನವರು.

ಇವರು ಬಾಲ್ಯದಿಂದಲೇ ಅಂಧರು. ಆದರೂ ಯಾರಿಗೂ ಕಮ್ಮಿ ಇಲ್ಲದಂತೆ ತಮ್ಮ ಇಳಿ ವಯಸ್ಸಿನಲ್ಲೂ ಸ್ವರದಲ್ಲೇ ತೇಲಿ ಹೋಗುವಂತೆ ಮೃದಂಗ, ತಬಲಾ, ಹಾರ್ಮೋನಿಯಂ, ಕೊಳಲನ್ನು ನುಡಿಸುತ್ತಾರೆ. ಇವರ ಕಥೆಯೆ ಸ್ಫೂರ್ತಿದಾಯಕವಾಗಿದೆ.

ಅಂಧ ಕಲಾವಿದ ನಂದಕಿಶೋರ್​ 60ರ ದಶಕದಲ್ಲಿ ಅಹಮದ್‌ನಗರ ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಸಾವರಗಾಂವ್ ಘುಲೆ ಎಂಬ ಸಣ್ಣ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು. ಜನಿಸಿದಾಗ ಆರೋಗ್ಯವಾಗಿದ್ದ ಇವರು ಆರು ತಿಂಗಳ ಮಗುವಾಗಿದ್ದಾಗ ತಮ್ಮ 2 ಕಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಆ ಕಾಲದಲ್ಲಿ ಮನೆಯಲ್ಲಿದ್ದ ಬಡತನ, ತಮ್ಮ ಅಂಧತ್ವದಿಂದ ಸರಿಯಾಗಿ ಶಿಕ್ಷಣವನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ಈಗಲೂ ನಂದಕಿಶೋರ್ ತನ್ನ ಕುಟುಂಬದೊಂದಿಗೆ ಸಾವರ್​ಗಾಂವ್​ ಘೂಲೆಯಲ್ಲಿ ವಾಸಿಸುತ್ತಿದ್ದಾರೆ.

ನಂದಕಿಶೋರ್​​ ಬಾಲಾಜಿ ಘೂಲೆ ಮನೆ
ನಂದಕಿಶೋರ್​​ ಬಾಲಾಜಿ ಘೂಲೆ ಮನೆ

ಜೀವನಕ್ಕೆ ತಿರುವು ನೀಡಿದ ತಾಯಿಯ ಉಡುಗೊರೆ: ಅಂಧನಾಗಿದ್ದರಿಂದ ನಂದಕಿಶೋರ್​ ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ಇವರ ತಾಯಿ ಒಂದು ರೇಡಿಯೋವನ್ನು ಮಗನಿಗೆ ನೀಡುತ್ತಾರೆ. ನಿಧಾನವಾಗಿ ರೇಡಿಯೋದಲ್ಲಿ ಹಾಡುಗಳನ್ನು ಹಾಡುತ್ತಾ ನಂದಕಿಶೋರ್​ ಕೊಳಲು, ಹಾರ್ಮೋನಿಯಂ, ಮೃದಂಗ ಬಾರಿಸತೊಡಗಿದರು. ಪರಿಣಾಮ ಇಂದು ಅವರು ಅತ್ಯುತ್ತಮ ಸಂಗೀತ ಕಲಾವಿದ ಎಂದೆನಿಸಿಕೊಂಡಿದ್ದಾರೆ. ಇದರೊಂದಿಗೆ ವಿವಿಧ ಗೌಲಾನಿ, ಅಭಂಗ್‌ಗಳನ್ನು ಸಹ ಉತ್ತಮ ರೀತಿಯಲ್ಲಿ ಹಾಡುತ್ತಾರೆ.

ಬದುಕಿಗೆ ಬೆಳಕಾದ ಮಾವನ ಮಗಳು: ಎರಡೂ ಕಣ್ಣಿನ ದೃಷ್ಟಿ ಇಲ್ಲದಿದ್ದರೂ, ಅವರ ಮಾವನ ಮಗಳು ಲತಾ ನಂದಕಿಶೋರ್ ಅವರನ್ನು ವಿವಾಹವಾಗುತ್ತಾರೆ. ಸಂಗೀತದೊಂದಿಗೆ, ಸಂಗಾತಿಯೊಂದಿಗೆ ಜೀವನ ಸಾಗಿಸುತ್ತ ಬಂದಿರುವ ನಂದಕಿಶೋರ್​ ಈಗಲೂ ಅತ್ಯುತ್ತಮ ಸಂಗೀತಗಾರ ಮತ್ತು ಗಾಯಕರಾಗಿದ್ದಾರೆ. ಇಂದು ಪುಣೆ, ಮುಂಬೈ ಮುಂತಾದ ಕಡೆ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗಿ ಸಂಗೀತ ನುಡಿಸುತ್ತಾರೆ. ರಾಜ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಈ ಕಲಾವಿದ.

ತಾಲೂಕಿನಲ್ಲಿ ಅಖಂಡ ಹರಿನಾಮ ಸಪ್ತಾಹ, ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಸಾವರಗಾಂವ್​ದ ಜನರು ಇವರ ಗಾಯನವನ್ನು ಕೇಳಲು ತಮ್ಮೆಲ್ಲ ಕೆಲಸ ಬಿಟ್ಟು ಬರುತ್ತಾರೆ. ಅತ್ಯುತ್ತಮ ಮೃದಂಗ ವಾದಕನನ್ನೂ ನಾಚಿಸುವ ರೀತಿಯಲ್ಲಿ ಮೃದಂಗ ನುಡಿಸುತ್ತಾರೆ. ಇವರ ಸಾಧನೆ ನೋಡಿ ಅವರ ಮಗ ಪ್ರವೀಣ ಕೂಡ ಮೃದಂಗ ನುಡಿಸುವುದನ್ನು ಕಲಿತಿದ್ದಾನೆ.

ನನ್ನ ಎರಡೂ ಕಣ್ಣಿನ ದೃಷ್ಟಿ ಇಲ್ಲದಿದ್ದರೂ ಕೊಳಲು, ಹಾರ್ಮೋನಿಯಂ, ಮೃದಂಗ, ತಬಲಾ ನುಡಿಸುವ ಜೊತೆಗೆ ಹಾಡು ಹಾಡುತ್ತೇನೆ. ಆ ಮೂಲಕ ಬಂದ ಸ್ಟೈಫಂಡ್‌ನಲ್ಲಿ ಕುಟುಂಬ ಸಾಗುತ್ತಿದೆ. ಹಾಗಾಗಿ ಕಲಾವಿದರ ಸಂಭಾವನೆಯನ್ನು ಸರಕಾರ ನನಗೆ ನೀಡಬೇಕು ಎಂದು ನಂದಕಿಶೋರ್ ಘೂಲೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಡಾರ್ಜಿಲಿಂಗ್‌: ಮೊದಲ ಕೊಯ್ಲಿನ 1 ಕೆಜಿ ಚಹಾ ಪುಡಿ ₹ 31 ಸಾವಿರಕ್ಕೆ ಮಾರಾಟ! - Darjeeling Tea

Last Updated : Mar 28, 2024, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.